Monday, November 25, 2024
Homeರಾಜ್ಯಜನತಾದರ್ಶನಕ್ಕೆ ಬಂದು ಶಕ್ತಿಸೌಧ ಕಣ್ತುಂಬಿಕೊಂಡ ಜನರು

ಜನತಾದರ್ಶನಕ್ಕೆ ಬಂದು ಶಕ್ತಿಸೌಧ ಕಣ್ತುಂಬಿಕೊಂಡ ಜನರು

ಬೆಂಗಳೂರು,ಫೆ.8- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ನಡೆಸಿದ ರಾಜ್ಯಮಟ್ಟದ ಜನತಾದರ್ಶನದ ವೇಳೆ ಜನಸಾಮಾನ್ಯರಿಂದ ಫೋಟೊಶೂಟ್ಗಳು ಯಥೇಚ್ಛವಾಗಿ ಕಂಡುಬಂದವು.ದೂರದೂರುಗಳಿಂದ ಆಗಮಿಸಿದ್ದ ಸಾವಿರಾರು ಜನ ವಿಧಾನಸೌಧದ ಆವರಣದಲ್ಲಿ ನಿಂತು ಸೆಲಿ ಹಾಗೂ ಮೊಬೈಲ್ಗಳಲ್ಲಿ ತೆಗೆಸಿಕೊಂಡರು.

ವಿಧಾನಸೌಧದ ಪೂರ್ವದ್ವಾರದಲ್ಲಿ ಜನತಾದರ್ಶನಕ್ಕಾಗಿ ತಾತ್ಕಾಲಿಕ ಟೆಂಟ್ಗಳು ಹಾಗೂ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಸ್ ನಿಲ್ದಾಣದಿಂದ ವಿಧಾನಸೌಧವನ್ನು ಪ್ರವೇಶಿಸಲು ಅನುಕೂಲವಾಗುವಂತೆ ಪೂರ್ವದ್ವಾರದಲ್ಲೇ ವಿಧಾನಸೌಧದ ಗೇಟನ್ನು ತೆರೆಯಲಾಗಿತ್ತು. ಒಳಬಂದ ಸಾರ್ವಜನಿಕರು ಶಕ್ತಿಸೌಧವನ್ನು ಕಣ್ಣು ತುಂಬಿಕೊಂಡು ಖುಷಿ ಪಟ್ಟರು. ತಮ್ಮ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವುದಕ್ಕಿಂತಲೂ ಹೆಚ್ಚಿನ ಉತ್ಸಾಹ ವಿಧಾನಸೌಧದ ಮುಂದೆ ಫೋಟೊ ತೆಗೆಸಿಕೊಳ್ಳುವುದರಲ್ಲೇ ಕಂಡುಬಂದಿತು.

ಗಂಭೀರ ಸಮಸ್ಯೆ ಇರುವುದನ್ನು ಹೊರತುಪಡಿಸಿದರೆ ಉಳಿದ ಬಹಳಷ್ಟು ಮಂದಿ ಫೋಟೋಶೂಟ್ಗಳಲ್ಲಿ ಮಗ್ನರಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧದ ಕಟ್ಟಡದ ಒಳಗೆ ಜನರ ಪ್ರವೇಶಕ್ಕೆ ಅವಕಾಶವಾಗದಂತೆ ಬಂದೋಬಸ್ತ್ ಆಯೋಜಿಸಲಾಗಿತ್ತು.
ಶಕ್ತಿಸೌಧದ ಆವರಣದಲ್ಲಿನ ತಾತ್ಕಾಲಿಕ ಟೆಂಟ್ಗಳಲ್ಲಿ ಜಾಗ ಸಾಲದೆ ನೂರಾರು ಜನ ಬಿಸಿಲಿನಲ್ಲಿ ನಿಂತು ಬಸವಳಿಯುತ್ತಿದ್ದರು.

ಕೋಟ್ಯಾಂತರ ಮೌಲ್ಯದ ಕಾಂಪ್ಲೆಕ್ಸ್ ವಿಚಾರಕ್ಕೆ ನಡೆದಿತ್ತೇ ಜೋಡಿ ಕೊಲೆ..?

ಮುಖ್ಯಮಂತ್ರಿಯವರಿಗೆ ಅರ್ಜಿ ಸಲ್ಲಿಸಲು ಆಗಮಿಸುವವರ ಜೊತೆಗೆ ಶಕ್ತಿಸೌಧದ ವೀಕ್ಷಣೆಗೆ ಬಂದವರ ಸಂಖ್ಯೆಯೂ ಹೆಚ್ಚಾಗಿತ್ತು. ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಾಗಿದ್ದ ಜನತಾದರ್ಶನ 11 ಗಂಟೆಯಾದರೂ ಶುರುವಾಗಿರಲಿಲ್ಲ.

RELATED ARTICLES

Latest News