ನವದೆಹಲಿ,ಸೆ.5- ಸ್ಪೈ ಕ್ಯಾಮೆರಾ ಬಳಸಿಕೊಂದು ಮಹಿಳೆಯರ ಅಶ್ಲೀಲ ವೀಡಿಯೊ ಮಾಡಿದ ಆರೋಪದ ಮೇಲೆ ಖಾಸಗಿ ವಿಮಾನಯಾನ ಸಂಸ್ಥೆಯ ಪೈಲಟ್‌ನನ್ನು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಬಂಧಿತ ಪೈಲಟ್ ಸ್ಪೈ ಕ್ಯಾಮೆರಾವನ್ನು ಲೈಟರ್ ಒಳಗೆ ಅಡಗಿಸಿಟ್ಟು ಅಶ್ಲೀಲ ಚಿತ್ರಗಳನ್ನು ಸೆರೆ ಮಾಡಿದ್ದರು.
ಗೋರಖ್‌ಪುರದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ, ಆಕೆಯಿಂದ ನನಗೆ ತುಂಬಾ ತೊಂದರೆಯಾಯಿತು ಎಂದು ಹೇಳಿದ್ದಾನೆ.ಗೋರಖ್‌ಪುರದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ, “ಆಕೆಯಿಂದ ನನಗೆ ತುಂಬಾ ತೊಂದರೆಯಾಯಿತು” ಎಂದು ಹೇಳಿದ್ದಾನೆ.
ಪೈಲಟ್ ಅನ್ನು ಉತ್ತರ ಪ್ರದೇಶದ ಆಗ್ರಾದ ಸಿವಿಲ್ ಲೈನ್ಸ್ ಪ್ರದೇಶದ ನಿವಾಸಿ ಮೋಹಿತ್ ಪ್ರಿಯದರ್ಶಿ (31) ಎಂದು ಗುರುತಿಸಲಾಗಿದೆ.ಆಗಸ್ಟ್ 30 ರಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 30ರಂದು ರಾತ್ರಿ 10.20 ರ ಸುಮಾರಿಗೆ ಕಿಶನ್‌ಗಢ ಗ್ರಾಮದ ಶನಿ ಬಜಾರ್‌ನಲ್ಲಿದ್ದಾಗ, ಒಬ್ಬ ವ್ಯಕ್ತಿ ಲೈಟರ್ ಅನ್ನು ಹೋಲುವ ಸಾಧನವನ್ನು ಬಳಸಿಕೊಂಡು ತನ್ನ ಒಪ್ಪಿಗೆಯಿಲ್ಲದೆ ಆಕ್ಷೇಪಾರ್ಹ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿರುವುದಾಗಿ ದೂರುದಾರರು ತಿಳಿಸಿದ್ದಾರೆ.
ಪೊಲೀಸರು ಬಿಎನ್‌ಎಸ್ ಸೆಕ್ಷನ್ 77/78ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ತನಿಖಾ ಸಮಯದಲ್ಲಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶಂಕಿತ ವ್ಯಕ್ತಿ ಈತನೇ ಎಂಬುದು ಖಚಿತವಾದ ನಂತರ ಬಂಧಿಸಲಾಯಿತು. ಪೈಲಟ್ ಅಪರಾಧವನ್ನು ಒಪ್ಪಿಕೊಂಡಿದ್ದು, ತಾನು ಅವಿವಾಹಿತನಾಗಿದ್ದು, ತನ್ನ ವೈಯಕ್ತಿಕ ತೃಪ್ತಿಗಾಗಿ ಇಂತಹ ವೀಡಿಯೊಗಳನ್ನು ಮಾಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಐಎಎನ್‌ಎಸ್ ವರದಿ ಮಾಡಿದೆ.ಆತನ ಬಳಿಯಿಂದ ಗುಪ್ತ ಸ್ಪೈ ಕ್ಯಾಮೆರಾವನ್ನು ವಶಪಡಿಸಿಕೊಳ್ಳಲಾಗಿದೆ.