Tuesday, September 17, 2024
Homeರಾಷ್ಟ್ರೀಯ | Nationalಅಕ್ರಮ ಸಂಬಂಧ ಶಂಕೆ ; ಪತ್ನಿಯ ಮರ್ಮಾಂಗಕ್ಕೆ ಬ್ಲೇಡ್‌, ಮೊಳೆ ಚುಚ್ಚಿ ಹಿಂಸಿಸಿದ ಪತಿ

ಅಕ್ರಮ ಸಂಬಂಧ ಶಂಕೆ ; ಪತ್ನಿಯ ಮರ್ಮಾಂಗಕ್ಕೆ ಬ್ಲೇಡ್‌, ಮೊಳೆ ಚುಚ್ಚಿ ಹಿಂಸಿಸಿದ ಪತಿ

ಮುಂಬೈ,ಮೇ19- ವಿವಾಹೇತರ ಸಂಬಂಧದ ಶಂಕೆ ಹೊಂದಿದ್ದ ಪತಿ, ತನ್ನ ಪತ್ನಿಯ ಮೇಲೆ ಉಗುರುಗಳಿಂದ ಮತ್ತು ಆಕೆಯ ಖಾಸಗಿ ಭಾಗಗಳ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಮೇ 11ರಂದು ವಾಚ್‌ಮನ್‌‍ ಆಗಿ ಕೆಲಸ ಮಾಡುವ 30 ವರ್ಷದ ಆರೋಪಿ ತನ್ನ ಹೆಂಡತಿಯನ್ನು ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಅವಳನ್ನು ಕೆಟ್ಟದಾಗಿ ಥಳಿಸಿದ್ದ.

ಬಳಿಕ ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಿ ಬ್ಲೇಡ್‌ನಿಂದ ಆಕೆಯ ಖಾಸಗಿ ಭಾಗಗಳಿನ್ನು ಗಾಯಗೊಳಿಸಿದ್ದಾನೆ. ಕಬ್ಬಿಣದ ಮೊಳೆಗಳನ್ನು ಹಾಕಿ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ.ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಂತ್ರಸ್ತೆ ಆಸ್ಪತ್ರೆಯಿಂದಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದ ಪೊಲೀಸರು ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಪತಿಯನ್ನು ಬಂಧಿಸಲಾಗಿದೆ.ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಲಾಗಿದೆ.

ಕಳೆದ ತಿಂಗಳು ಹರ್ಯಾಣ ಪೊಲೀಸರು ವಿವಾಹೇತರ ಸಂಬಂಧದ ಶಂಕೆಯಲ್ಲಿ ತನ್ನ ಪತ್ನಿಯ ಮೇಲೆ ಬೇಸ್‌‍ಬಾಲ್‌‍ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ತಾಪಕವಾಗಿ ಹರಿಬಿಟ್ಟಿದ್ದ. ಇದಕ್ಕೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವೀಡಿಯೊದಲ್ಲಿ ತನ್ನ ಹೆಂಡತಿಯನ್ನು ಇನ್ನೊಬ್ಬನೊಂದಿಗೆ ಇ ಕಂಡುಹಿಡಿದ ವ್ಯಕ್ತಿ ಮೊದಲು ಕಾರಿನ ಕಿಟಕಿಯನ್ನು ಒಡೆದು, ನಂತರ ಮಹಿಳೆಯನ್ನು ವಾಹನದಿಂದ ಹೊರಗೆ ಎಳೆದು ಬೇಸ್‌‍ಬಾಲ್‌‍ ಬ್ಯಾಟ್‌ನಿಂದ ಥಳಿಸಿದ್ದ.

RELATED ARTICLES

Latest News