Thursday, November 21, 2024
Homeರಾಷ್ಟ್ರೀಯ | Nationalಬೆಂಗಳೂರಲ್ಲಿ ಕಟ್ಟಡ ಕುಸಿತ ದುರಂತ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ,, ಗಾಯಾಳುಗಳಿಗೆ 50,000ರೂ....

ಬೆಂಗಳೂರಲ್ಲಿ ಕಟ್ಟಡ ಕುಸಿತ ದುರಂತ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ,, ಗಾಯಾಳುಗಳಿಗೆ 50,000ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

PM condoles the loss of lives in building collapse in Bengaluru; announces ex-gratia from PMNRF

ನವದೆಹಲಿ,ಅ.24- ಕರ್ನಾಟಕದ ರಾಜಧಾನಿ ಬೆಂಗಳೂರಿನ ಬಾಬುಸಾಬ್ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕಣಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟಂಬಕ್ಕೆ ಪರಿಹಾರ ಘೋಷಣೆ ಮಾಡಲಾಗಿದೆ.ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ Xನಲ್ಲಿ ಪ್ರಧಾನಿ ಕಾರ್ಯಾಲಯ ಸಂದೇಶ ಪ್ರಕಟಿಸಿದೆ.

ಬೆಂಗಳೂರಿನಲ್ಲಿ ಕಟ್ಟಡವೊಂದು ಕುಸಿದು ಸಂಭವಿಸಿದ ಜೀವಹಾನಿಯಿಂದ ದುಃಖವಾಗಿದೆ. ತಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಘಟನೆಯಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಪಿಎಂಎನ್‌ಆರ್‌ಎಫ್‌ನಿಂದ ಮೃತರಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬಾಬುಸಾಪಾಳ್ಯದಲ್ಲಿ ಕುಸಿದು ಬಿದ್ದ ನಿರ್ಮಾಣದ ಹಂತದ ಕಟ್ಟಡದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಬಿಹಾರ ಮೂಲದ ಅರ್ಮಾನ್‌, ಮೊಹಮದ್‌ ಸಾಹಿಲ್‌‍, ಸೋಲೋ ಪಾಸ್ವಾನ್‌, ಶ್ರೀರಾನ್‌ ಕಿರುಪಾಲ್‌‍. ತಮಿಳುನಾಡು ಮೂಲದ ಮಣಿಕಂಠನ್‌, ಸತ್ಯರಾಜು ಮತ್ತು ಆಂಧ್ರಪ್ರದೇಶ ಮೂಲದ ತುಳುಸಿರೆಡ್ಡಿ ಮತ್ತು ಉತ್ತರ ಪ್ರದೇಶ ಮೂಲದ ಪುಲ್ಚನ್‌ ಯಾದವ್‌ ಮೃತರು.

ಘಟನೆ ಸಂಬಂಧಪಟ್ಟವರ ಬಂಧನ :
ಕಟ್ಟಡ ಕುಸಿತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಪೊಲೀಸರು ಮನೆ ಮಾಲೀಕನ ಪುತ್ರ ಭುವನ್‌ ಗೌಡ, ಕಟ್ಟಡದ ಮೇಲ್ವಿಚಾರಕರಾಗಿದ್ದ ಮೋಹನ್‌ ರೆಡ್ಡಿ, ಏಳುಮಲೈ ಎಂಬುವರನ್ನ ಬಂಧಿಸಿದ್ದಾರೆ. ಕಟ್ಟಡದ ನಾಲ್ಕನೇ ಅಂತಸ್ತಿನವರೆಗೂ ಉಸ್ತುವಾರಿ ವಹಿಸಿಕೊಂಡಿದ್ದ ಮುನಿಯಪ್ಪ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ.


ಆರೋಪಿ ಏಳುಮಲೈ ಬಗ್ಗೆ ಇನ್ನೂ ಮಾಹಿತಿ ಸಿಗಲಿಲ್ಲ. ಜೊತೆಗೆ ಪೋನ್‌ ನಂಬರ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಏಳುಮಲೈ ಕಟ್ಟಡ ಗುತ್ತಿಗೆದಾರನಾಗಿದ್ದ ಹಾಗಾಗಿ ಕಟ್ಟಡದಲ್ಲಿ ಸಿಲುಕಿಕೊಂಡು ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸತತ 34 ಗಂಟೆ ಕಾರ್ಯಚರಣೆ ಮಾಡಿ ಎನ್‌ಡಿಎಫ್‌ ತಂಡ ಕಾರ್ಯಚರಣೆ ಸ್ಥಗಿತಗೊಳಿಸಿತ್ತು. ಸದ್ಯ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಕಾರ್ಯಚರಣೆ ಮತ್ತೆ ಆರಂಭವಾಗಿದೆ.ಹೊರಮಾವು ಉಪವಿಭಾಗದ ಎಇಇ ವಿನಯ್‌‍ನ ಅಮಾನತು ಮಾಡಲಾಗಿದೆ.

RELATED ARTICLES

Latest News