Friday, November 22, 2024
Homeರಾಷ್ಟ್ರೀಯ | Nationalಪಿಎಂ-ಸೂರ್ಯ ಘರ್ ಯೋಜನೆಯಡಿ 1 ಕೋಟಿಗೂ ಹೆಚ್ಚು ಕುಟುಂಬಗಳ ನೋಂದಣಿ : ಪ್ರಧಾನಿ ಮೋದಿ

ಪಿಎಂ-ಸೂರ್ಯ ಘರ್ ಯೋಜನೆಯಡಿ 1 ಕೋಟಿಗೂ ಹೆಚ್ಚು ಕುಟುಂಬಗಳ ನೋಂದಣಿ : ಪ್ರಧಾನಿ ಮೋದಿ

ನವದೆಹಲಿ, ಮಾ.16-ಮನೆಯ ಮೇಲ್ಛಾವಣಿಯ ಸೌರ ವಿದ್ಯತ್ ಉತ್ಪಾದನೆಯ ಪಿಎಂ-ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ ಈಗಾಗಲೇ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ನೋಂದಾಯಿಸಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರದ ಎಲ್ಲಾ ಭಾಗಗಳಿಂದ ನೋಂದಣಿಗಳು ಹರಿದುಬರುತ್ತಿವೆ. ಅಸ್ಸಾಂ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳು 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ನಿಯಮಾವಳಿಯಂತೆ ನೊಂದಣಿ ಕಂಡಿವೆ ಎಂದು ಅವರು ಪ್ರಧಾನಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನೂ ನೋಂದಣಿ ಮಾಡದಿರುವವರು ಆದಷ್ಟು ಬೇಗ ನೋಂದಾಯಿಸಿಕೊಳ್ಳುವಂತೆ ಪ್ರಧಾನಮಂತ್ರಿ ಮನವಿ ಮಾಡಿದಾರೆ.ಸೌರ ವಿದ್ಯುತ್ ಉತ್ಪಾದನೆಯನ್ನು ಖಾತ್ರಿಪಡಿಸುವುದರಿಂದ ನಿಮ್ಮ ಮನೆಗಳಿಗೆ ವಿದ್ಯುತ್ ವೆಚ್ಚದಲ್ಲಿ ಗಣನೀಯ ಪ್ರಮಾಣದ ಕಡಿತ ನೋಡಬಹುದು ಎಂದು ತಿಳಿಸಿದರು.

ಇದು ಹಸಿರು ಪರಿಸರಕ್ಕಾಗಿ ಸರ್ಕಾರದ ಹೋಜನೆ ,ತಮ್ಮ ಜೀವನಶೈಲಿಯನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸಲು ನಾವು ಸಿದ್ದರಾಗಿದ್ದೇವೆ ಉತ್ತಮ ಪರಿಸರ,ಭೂಮಿಯ ರಕ್ಷಣೆ ನೀವು ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕಳೆದ ತಿಂಗಳು ರೂ. 75,021 ಕೋಟಿ ವೆಚ್ಚದ ಒಟ್ಟು ರೂಫ್‍ಟಾಪ್ ಸೋಲಾರ್ ಪ್ಯಾನಲ್‍ಗಳನ್ನು ಸ್ಥಾಪಿಸಲು ಮತ್ತು ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯುನಿಟ್‍ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಗೆ ಅನುಮೋದನೆ ನೀಡಿತ್ತು.

RELATED ARTICLES

Latest News