Sunday, October 6, 2024
Homeರಾಷ್ಟ್ರೀಯ | Nationalಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ಮೋದಿ ಮನವಿ

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ಮೋದಿ ಮನವಿ

ನವದೆಹಲಿ, ಮೇ 25 (ಪಿಟಿಐ) ಪ್ರತಿಯೊಂದು ಮತವೂ ಮಹತ್ವದಾಗಿರುವುದರಿಂದ ಲೋಕಸಭೆ ಚುನಾವಣೆಯ ಆರನೇ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.

ಜನರು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಮತ್ತು ಸಕ್ರಿಯವಾಗಿದ್ದಾಗ ಪ್ರಜಾಪ್ರಭುತ್ವವು ಅಭಿವದ್ಧಿ ಹೊಂದುತ್ತದೆ ಎಂದು ಅವರು ಎಕ್‌್ಸ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯ 6ನೇ ಹಂತದಲ್ಲಿ ಮತದಾನ ಮಾಡುವ ಎಲ್ಲರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನಾನು ಕೋರುತ್ತೇನೆ. ಪ್ರತಿ ಮತವೂ ಎಣಿಕೆಯಾಗುತ್ತದೆ, ನಿಮನ್ನೂ ಎಣಿಕೆ ಮಾಡಿ! ಜನರು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಮತ್ತು ಸಕ್ರಿಯವಾಗಿದ್ದಾಗ ಪ್ರಜಾಪ್ರಭುತ್ವವು ಅಭಿವದ್ಧಿಗೊಳ್ಳುತ್ತದೆ.

ನಾನು ವಿಶೇಷವಾಗಿ ಒತ್ತಾಯಿಸುತ್ತೇನೆ. ಮಹಿಳಾ ಮತದಾರರು ಮತ್ತು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಪ್ರಧಾನಿ ಕೇಳಿಕೊಂಡಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಆರನೇ ಹಂತದ ಮತದಾನವು ದೆಹಲಿಯ ಎಲ್ಲಾ ಏಳು ಸ್ಥಾನಗಳು ಮತ್ತು ಬಂಗಾಳದ ಜಂಗಲ್‌ ಮಹಲ್‌ ಪ್ರದೇಶ ಸೇರಿದಂತೆ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿನ 58 ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ ಪ್ರಾರಂಭವಾಗಿದೆ.

RELATED ARTICLES

Latest News