ನವದೆಹಲಿ, ಮಾ. 1: ದೆಹಲಿಯ ಸುಂದರ್ ನರ್ಸರಿಯಲ್ಲಿ ಜರುಗಿದ ಜಹಾನ್-ಎ-ಖುಸ್ರೋ ಸೂಫಿ ಸಂಗೀತ ಉತ್ಸವದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಜಹಾನ್ ಎ ಖುಸ್ರೋ ಕಾರ್ಯಕ್ರಮದಲ್ಲಿ ಭಾರತದ ಮಣ್ಣಿನ ಘಮವಿದೆ ಎಂದು ಅವರು ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ. ಪವಿತ್ರ ರಂಜಾನ್ ಮಾಸ ಆರಂಭವಾಗುತ್ತಿದೆ, ನಿಮಗೆಲ್ಲರಿಗೂ ಮತ್ತು ದೇಶವಾಸಿಗಳಿಗೂ ರಂಜಾನ್ ಹಬ್ಬದ ಶುಭಾಶಯಗಳು.
ಜಹಾನ್-ಎ-ಖುಸ್ರೋ ಸರಣಿಯು 25 ವರ್ಷಗಳನ್ನು ಪೂರೈಸುತ್ತಿದೆ. ಈ 25 ವರ್ಷಗಳಲ್ಲಿ, ಈ ಕಾರ್ಯಕ್ರಮವು ಜನರ ಮನಸ್ಸಿ ನಲ್ಲಿ ಸ್ಥಾನ ಪಡೆದಿರುವುದು ದೊಡ್ಡ ಸಾಧನೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಭಾರತದಲ್ಲಿ ಸೂಫಿ ಸಂಪ್ರದಾಯವು ತನಗಾಗಿ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದೆ. ಸೂಫಿ ಸಂತರು ತಮ್ಮನ್ನು ಮಸೀದಿಗಳಿಗೆ ಸೀಮಿತಗೊಳಿಸಿಲ್ಲ.
ಆ ಕಾಲದಲ್ಲಿ ಭಾರತವು ಜಗತ್ತಿನ ಎಲ್ಲಾ ದೊಡ್ಡ ದೇಶಗಳಿಗಿಂತ ಶ್ರೇಷ್ಠವಾಗಿತ್ತು ಎಂದು ಹಜರತ್ ಖುಸ್ರೋ ಹೇಳಿದ್ದರು. ಸಂಸ್ಕೃತವು ವಿಶ್ವದ ಅತ್ಯುತ್ತಮ ಭಾಷೆ ಎಂದು ಅವರು ಹೇಳಿದರು. ಭಾರತದ ಋಷಿಮುನಿಗಳು ಶ್ರೇಷ್ಠ ವಿದ್ವಾಂಸರಿಗಿಂತಲೂ ಶ್ರೇಷ್ಠರು ಎಂದು ಅವರು ಪರಿಗಣಿಸಿದ್ದರು ಎಂದು ಮೋದಿ ಹೇಳಿದರು.