Friday, November 22, 2024
Homeರಾಷ್ಟ್ರೀಯ | Nationalಪಂಡಿತ್ ದೀನ್‍ದಯಾಳ್‍ ಪುಣ್ಯತಿಥಿ : ಶ್ರದ್ದಾಂಜಲಿ ಸಲ್ಲಿಸಿದ ಬಿಜೆಪಿ ಮುಖಂಡರು

ಪಂಡಿತ್ ದೀನ್‍ದಯಾಳ್‍ ಪುಣ್ಯತಿಥಿ : ಶ್ರದ್ದಾಂಜಲಿ ಸಲ್ಲಿಸಿದ ಬಿಜೆಪಿ ಮುಖಂಡರು

ನವದೆಹಲಿ, ಫೆ.11 (ಪಿಟಿಐ) ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ದೇಶವನ್ನು ಮುನ್ನಡೆಸುವ ಹಾದಿಯನ್ನು ದೀನದಯಾಳ್ ನಮಗೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ದಯಾಳ್ ತೋರಿಸಿರುವ ಮಾರ್ಗ ನಮಗೆ ಸೂರ್ತಿಯಾಗಿವೆ ಎಂದು ಮೋದಿ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ದಯಾಳ್ ಅವರ ಅಂತ್ಯೋದಯ (ಅತ್ಯಂತ ಬಡವರ ಉನ್ನತಿ) ಮತ್ತು ಅವಿಭಾಜ್ಯ ಮಾನವತಾವಾದ ದ ವಿಚಾರಗಳನ್ನು ಮೋದಿಯವರು ತಮ್ಮ ಆಡಳಿತ ಮಾದರಿಗೆ ಸೂರ್ತಿ ಎಂದು ಹೆಚ್ಚಾಗಿ ಉಲ್ಲೇಖಿಸಿದ್ದಾರೆ. ಉಪಾಧ್ಯಾಯ 1968 ರಲ್ಲಿ ನಿಧನರಾದರು.

“ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಮಕ್ಕಳೇ 2 ದಿನ ಊಟ ಬಿಡಿ” ಎಂದ ಶಾಸಕ

ಇತರ ಬಿಜೆಪಿ ನಾಯಕರು ಕೂಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು, ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಅವರ ಮೌಲ್ಯಗಳು ಯಾವಾಗಲೂ ಪಕ್ಷಕ್ಕೆ ಮಾರ್ಗದರ್ಶಕ ಬೆಳಕು ಎಂದು ಪ್ರತಿಪಾದಿಸಿದರು. ಉಪಾಧ್ಯಾಯ ಅವರ ಜೀವನವು ರಾಷ್ಟ್ರದ ಸೇವೆ ಮತ್ತು ಅದರ ಮೇಲಿನ ಭಕ್ತಿಯ ದೈತ್ಯ ಸಂಕೇತವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಯಾವುದೇ ದೇಶವು ತನ್ನ ಸಂಸ್ಕøತಿಯ ಮೂಲಭೂತ ಮೌಲ್ಯಗಳನ್ನು ನಿರ್ಲಕ್ಷಿಸುವ ಮೂಲಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು ಎಂದು ಶಾ ಹೇಳಿದರು.

RELATED ARTICLES

Latest News