Wednesday, January 15, 2025
Homeರಾಷ್ಟ್ರೀಯ | National3 ಅತ್ಯಾಧುನಿಕ ಯುದ್ಧನೌಕೆಗಳನ್ನು ನೌಕಾಪಡೆಗೆ ಹಸ್ತಾಂತರಿಸಿದ ಪ್ರಧಾನಿ ಮೋದಿ

3 ಅತ್ಯಾಧುನಿಕ ಯುದ್ಧನೌಕೆಗಳನ್ನು ನೌಕಾಪಡೆಗೆ ಹಸ್ತಾಂತರಿಸಿದ ಪ್ರಧಾನಿ ಮೋದಿ

PM Modi commissions INS Surat, Nilgiri, Vaghsheer in big boost for Navy

ಮುಂಬೈ,ಜ.15- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮುಂಬೈ ನೌಕಾ ನೆಲೆಯಲ್ಲಿ ಐಎಸ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಹಾಗೂ ಐಎನ್ಎಸ್ ವಾಘ್ಶೀರ್ ಯುದ್ಧ ನೌಕೆಗಳನ್ನು ನೌಕಾಪಡೆಗಳಿಗೆ ಹಸ್ತಾಂತರಿಸಿದರು.ಇದರೊಂದಿಗೆ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಬಲ ಹೆಚ್ಚಾಗಿದೆ. ಇನ್ನುಮುಂದೆ ಶತ್ರುಗಳು ಭಾರತದ ಬಗ್ಗೆ ಯೋಚನೆ ಮಾಡುವಾಗ ಹತ್ತು ಬಾರಿ ಆಲೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಾರತೀಯ ನೌಕಾಪಡೆಯಲ್ಲಿ ಸಮಾನತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಈ ಹಂತವು ಭಾರತೀಯ ನೌಕಾಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.

ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಾಘಶೀರ್ಗಳ ಸೇರ್ಪಡೆಯು ಭಾರತೀಯ ನೌಕಾಪಡೆಯ ಕಾರ್ಯತಂತ್ರದ ಬಲವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಐಎನ್ಎಸ್ ಸೂರತ್ ಪಿ15ಬಿಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಪ್ರಾಜೆಕ್ಟ್ನ ನಾಲ್ಕನೇ ಮತ್ತು ಕೊನೆಯ ಹಡಗು. ಇದು ವಿಶ್ವದ ಅತಿದೊಡ್ಡ ಮತ್ತು ಆಧುನಿಕ ವಿಧ್ವಂಸಕಗಳಲ್ಲಿ ಒಂದಾಗಿದೆ. ಇದು ಅತ್ಯಾಧುನಿಕ ಶಸಾ್ತ್ರಸ್ತ್ರಗಳು ಮತ್ತು ಸಂವೇದಕ ವ್ಯವಸ್ಥೆಗಳನ್ನು ಹೊಂದಿದೆ. ಇದು ಚೇತಕ್, ಎಎಲ್ಎಚ್, ಸೀ ಕಿಂಗ್ ಮತ್ತು ಹೊಸ ಎಂಎಚ್-60 ಆರ್ ಸೇರಿದಂತೆ ವಿವಿಧ ಹೆಲಿಕಾಪ್ಟರ್ಗಳನ್ನು ನಿರ್ವಹಿಸಬಲ್ಲದು.

ಐಎನ್ಎಸ್ ನೀಲಗಿರಿ ಪಿ17ಬಿ ಸ್ಟೆಲ್ತ್ ಫ್ರಿಗೇಟ್ ಯೋಜನೆಯ ಮೊದಲ ಹಡಗು. ಇದನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ. ಇದು ಎಂಟು ಬ್ರಹೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಒಳಗೊಂಡಂತೆ ಸುಧಾರಿತ ಶಸಾ್ತ್ರಸ್ತ್ರಗಳು ಮತ್ತು ವ್ಯವಸ್ಥೆಗಳನ್ನು ಹೊಂದಿದೆ. 8 ಸೆಪ್ಟೆಂಬರ್ 2019 ರಂದು ಪ್ರಾರಂಭಿಸಲಾಯಿತು. ಇದು 6,670 ಟನ್ ತೂಕ ಮತ್ತು 149 ಮೀಟರ್ ಉದ್ದವಿದೆ.

ಐಎನ್ಎಸ್ ವಾಘಶೀರ್ ಪಿ75 ಸ್ಕಾರ್ಪೀನ್ ಯೋಜನೆಯ ಆರನೇ ಮತ್ತು ಕೊನೆಯ ಜಲಾಂತರ್ಗಾಮಿಯಾಗಿದೆ. ಇದು ಜಲಾಂತರ್ಗಾಮಿ ನಿರ್ಮಾಣದಲ್ಲಿ ಭಾರತದ ಬೆಳೆಯುತ್ತಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಫ್ರಾನ್ಸ್ ನ ನೇವಲ್ ಗ್ರೂಪ್ನ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಈ ಜಲಾಂತರ್ಗಾಮಿ ಭಾರತೀಯ ನೌಕಾಪಡೆಯ ಬಲವನ್ನು ಗಣನೀಯವಾಗಿ ಹೆಚ್ಚಿಸಲಿದೆ. ಇದು 67 ಮೀಟರ್ ಉದ್ದ ಮತ್ತು 1,550 ಟನ್ ಇದೆ.

RELATED ARTICLES

Latest News