ನವದೆಹಲಿ,ಮೇ.17- ಡೈಮಂಡ್ ಲೀಗ್-2025 ನಲ್ಲಿ ನೀರಜ್ ಚೋಪ್ರಾ ಅವರು 90 ಮೀಟರ್‌ಗಿಂತ ಹೆಚ್ಚು ದೂರ ಜಾವೆಲಿನ್ ಎಸೆದು ಹೊಸ ಸಾಧನೆ ಮಾಡಿದ್ದಾರೆ. ಇದರಿಂದ ಭಾರತಕ್ಕೆ ಸಂತೋಷ ಮತ್ತು ಹೆಮ್ಮೆ ತಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ನಿರಂತರ ಸಮರ್ಪಣೆ, ಶಿಸ್ತು ಮತ್ತು ಉತ್ಸಾಹ ಯಶಸ್ಸಿಗೆ ಕಾರಣ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ. ಇದು ಅದ್ಭುತ ಸಾಧನೆ! ದೋಹಾ ಡೈಮಂಡ್ ಲೀಗ್ 2025 ರಲ್ಲಿ 90 ಮೀಟರ್ ಗಡಿ ದಾಟಿ ತಮ್ಮ ವೈಯಕ್ತಿಕ ಅತ್ಯುತ್ತಮ ಎಸೆತವನ್ನು ಸಾಧಿಸಿದ್ದಕ್ಕಾಗಿ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಅವರ ಪರಿಶ್ರಮ ಫಲಿತಾಂಶವಾಗಿದೆ. ಭಾರತವು ಸಂತೋಷ ಮತ್ತು ಹೆಮ್ಮೆ ಪಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಇಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಮೀಟಿಂಗ್ ಸರಣಿಯಲ್ಲಿ ಚೋಪ್ರಾ ಅಂತಿಮವಾಗಿ 90.23 ಮೀಟರ್ ಎಸೆತದೊಂದಿಗೆ ಹೊಸ ಸಾಧನೆ ಮಾಡಿದರು ಆದರೆ ಜರ್ಮನಿಯ ಜೂಲಿಯನ್ ವೆಬರ್ 91 ಮೀಟರ್ ಎಸೆದು ದಾಖಲೆ ಬರೆದರು. ಡಬಲ್ ಒಲಿಂಪಿಕ್ ಪದಕ ವಿಜೇತ 27 ವರ್ಷದ ನೀರಜ್ ಜೋಪಾರು ತಮ್ಮ ಮೂರನೇ ಪ್ರಯತ್ನದಲ್ಲಿ 90.23 ಮೀಟರ್ ದೂರ ಜಾವೆಲಿನ್ ಎಸೆದಿದ್ದಾರೆ.