ನವದೆಹಲಿ,ಸೆ.5- ಕೇರಳದಲ್ಲಿ ಆಚರಿಸಲಾಗುವ ಸುಗ್ಗಿಯ ಹಬ್ಬವಾದ ಓಣಂ ಹಬ್ಬಕ್ಕೆ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಹಬ್ಬವು ಏಕತೆ, ಭರವಸೆ ಮತ್ತು ಸಾಂಸ್ಕೃತಿಕ ಹೆಮೆಯ ಸಂಕೇತವಾಗಿದೆ ಎಂದು ಬಣ್ಣಿಸಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಎಲ್ಲರಿಗೂ ಓಣಂ ಶುಭಾಶಯಗಳು! ಈ ಸುಂದರ ಹಬ್ಬವು ಎಲ್ಲರಿಗೂ ನವೀಕೃತ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧ ಸಮೃದ್ಧಿಯನ್ನು ತರಲಿ. ಓಣಂ ಕೇರಳದ ಅನಾದಿ ಕಾಲದ ಪರಂಪರೆ ಮತ್ತು ಶ್ರೀಮಂತ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಎಂದು ಶ್ಲಾಘಿಸಿದ್ದಾರೆ.
ಈ ಹಬ್ಬವು ಏಕತೆ, ಭರವಸೆ ಮತ್ತು ಸಾಂಸ್ಕೃತಿಕ ಹೆಮೆಯ ಸಂಕೇತವಾಗಿದೆ, ಈ ಸಂದರ್ಭವು ನಮ ಸಮಾಜದಲ್ಲಿ ಸೌಹಾರ್ದತೆಯ ಮನೋಭಾವವನ್ನು ಬಲಪಡಿಸಲಿ ಮತ್ತು ಪ್ರಕೃತಿಯೊಂದಿಗೆ ನಮ ಸಂಬಂಧವನ್ನು ಗಾಢವಾಗಿಸುತ್ತದೆ ಎಂದು ಅವರು ಹೇಳಿದ್ದಾರೆ.