Thursday, May 9, 2024
Homeಅಂತಾರಾಷ್ಟ್ರೀಯಅಂತರ್ಧರ್ಮೀಯ ಸಾಮರಸ್ಯಕ್ಕೆ ಸಾಕ್ಷಿಯಾದ ಸ್ವಾಮಿ ನಾರಾಯಣ ದೇಗುಲ

ಅಂತರ್ಧರ್ಮೀಯ ಸಾಮರಸ್ಯಕ್ಕೆ ಸಾಕ್ಷಿಯಾದ ಸ್ವಾಮಿ ನಾರಾಯಣ ದೇಗುಲ

ಯುಎಇ, ಫೆ.15- ಅಬುಧಾಬಿಯಲ್ಲಿರುವ ಸ್ವಾಮಿ ನಾರಾಯಣ ಹಿಂದೂ ಮಂದಿರವು ಮಧ್ಯಪ್ರಾಚ್ಯದಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವಾಗಿದ್ದು, ಭಾರತ ಮತ್ತು ಯುಎಇ ನಡುವಿನ ನಿರಂತರ ಸ್ನೇಹಕ್ಕೆ ಸಾಕ್ಷಿಯಾಗಿದೆ. ಇದು ಸಾಂಸ್ಕøತಿಕ ಒಳಗೊಳ್ಳುವಿಕೆ, ಅಂತರ್ ಧರ್ಮೀಯ ಸಾಮರಸ್ಯ ಮತ್ತು ಸಮುದಾಯ ಸಹಯೋಗದ ಮನೋಭಾವವನ್ನು ಸಾಕಾರಗೊಳಿಸುತ್ತದೆ ಎಂದು ಶ್ರೀ ಮಹಂತ ಸ್ವಾಮಿ ಮಹಾರಾಜ್ ತಿಳಿಸಿದ್ದಾರೆ.

ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಉದಾರವಾಗಿ ಉಡುಗೊರೆಯಾಗಿ ನೀಡಿದ ಭೂಮಿಯಲ್ಲಿ ಹೊಸ ಮಂದಿರವನ್ನು ನಿರ್ಮಿಸಲಾಗಿದ್ದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಯುಎಇಯ ಸಚಿವರಾದ ಶೇಖ್ ನಹಯಾನ್ ಭಾಗಿಯಾಗಿದ್ದು ಅತೀವ ಸಂತಸ ತಂದಿದೆ. ಮಾನವೀಯತೆಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದಿದೆ ಎಂದಿದ್ದಾರೆ.

ರೈತ ಮುಖಂಡರೊಂದಿಗೆ ಮತ್ತೊಂದು ಮಾತುಕತೆಗೆ ಮುಂದಾದ ಕೇಂದ್ರ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾ ಆರತಿ ಪೂಜೆ ಹಾಗೂ ನಂತರ ನಡೆದ ಧಾರ್ಮಿಕ ಆಚರಣೆಯನ್ನು ಲಕ್ಷಾಂತರ ಜನರು ಏಕಕಾಲದಲ್ಲಿ ಪ್ರಪಂಚದಾದ್ಯಂತ ಲೈವ್ ವೆಬ್‍ಕಾಸ್ಟ್ ಮೂಲಕ ವೀಕ್ಷಿಸಿದರು. ಈ ಭವ್ಯ ದೇವಾಲಯದ ನಿರ್ಮಾಣವನ್ನು ಬೆಂಬಲಿಸಿದ ವಿಶ್ವದಾದ್ಯಂತದ ಸ್ವಯಂ ಸೇವಕರು, ಮಕ್ಕಳು, ಕುಶಲಕರ್ಮಿಗಳು ಮತ್ತು ಇತರರನ್ನು ಭೇಟಿ ಮಾಡಿದ ನಂತರ ಪ್ರಧಾನಿ ಮೋದಿ ಅವರು ವಸುಧೈವ ಕುಟುಂಬಕಂಅನ್ನು ಕಲ್ಲಿನ ತುಂಡಿನಲ್ಲಿ ಕೆತ್ತಿದರು. ಜಗತ್ತೇ ಒಂದು ಕುಟುಂಬ ಎಂಬ ಸಂದೇಶವು ಮಂದಿರದ ಮೂಲ ತತ್ವವಾಗಿದೆ ಎಂದು ಶ್ರೀಗಳು ಬಣ್ಣಿಸಿದ್ದಾರೆ.

ಸ್ವಾಮಿ ನಾರಾಯಣ ಹಿಂದೂ ಮಂದಿರವು ಮಾನವೀಯತೆ ಕೇಂದ್ರವಾಗಿದೆ. ಹಾಗಾಗಿ ನಂಬಿಕೆ ಮತ್ತು ಭರವಸೆಯ ಹೊಸ ಯುಗವನ್ನು ಪ್ರಾರಂಭಿಸುತ್ತದೆ. ಇಡೀ ಜಗತ್ತನ್ನು ಸಾಮರಸ್ಯ ಮತ್ತು ಸಹಯೋಗದೊಂದಿಗೆ ತರುತ್ತದೆ ಎಂಬ ನಂಬಿಕೆ ನನಗಿದೆ ಎಂದು ಮೋದಿ ಹೇಳಿದ್ದಾರೆ. ಅಬುಧಾಬಿಯಲ್ಲಿ ಇಂದು ನಾವು ನೋಡುತ್ತಿರುವ ಭವ್ಯವಾದ ಮಂದಿರದಲ್ಲಿ ಮೊದಲ ಬಾರಿಗೆ 1997ರಲ್ಲಿ ಸ್ವಾಮಿ ಮಹಾರಾಜ್ ಅವರ ಸಂಕಲ್ಪ ಮಡಿದರು. ಇಂದು ಅವರ ಹೃದಯ ಸಂತೋಷದಿಂದ ಹೊಳೆಯುತ್ತಿದ್ದು, ಪೂಜೆ ಫಲಿಸಿದೆ ಎಂದರು.

ಕೆಲವರ ದುರಹಂಕಾರದಿಂದ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ : ಅಜಾದ್

ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಧನ್ಯವಾದ ಹೇಳಬೇಕು. ಏಕೆಂದರೆ ಅವರ ಔದಾರ್ಯವೇ ಮಂದಿರವನ್ನು ಇಷ್ಟು ಸುಂದರ ಮತ್ತು ಭವ್ಯವಾಗಿಸಲು ಸಾಧ್ಯವಾಗಿಸಿದೆ. ಎಲ್ಲಾ ಭಾರತೀಯರ ಪರವಾಗಿ ನಾನು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಮತ್ತು ಯುಎಇ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಸ್ವಾಮಿ ನಾರಾಯಣ ಸಂಸ್ಥಾನ ಅಂತಾರಾಷ್ಟ್ರೀಯ ಸಮುದಾಯ-ಆಧಾರಿತ ಹಿಂದೂ ಫೆಲೋಶಿಪ್ ಆಗಿದೆ. ಅದರ ಒಂದು ಮಿಲಿಯನ್‍ಗಿಂತಲೂ ಹೆಚ್ಚು ಸದಸ್ಯರು, 80,000 ಸ್ವಯಂ ಸೇವಕರು ಮತ್ತು 5025 ಕೇಂದ್ರಗಳ ಮೂಲಕ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮಾಜಗಳ ಒಳಿತಿಗೆ ಶ್ರಮಿಸುತ್ತಿದೆ.

RELATED ARTICLES

Latest News