Thursday, August 7, 2025
Homeರಾಜ್ಯಕರ್ತವ್ಯ ಭವನ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಕರ್ತವ್ಯ ಭವನ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

PM Modi inaugurates Kartavya Bhavan

ನವದೆಹಲಿ,ಆ.6- ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಮುಖ ಸಚಿವಾಲಯಗಳನ್ನು ಹೊಂದಿರುವ ಹತ್ತು ಹೊಸ ಕಟ್ಟಡಗಳಲ್ಲಿ ಮೊದಲನೆಯದಾದ ಕರ್ತವ್ಯಭವನವನ್ನು ಪ್ರಧಾನಿ ನರೇಂದ್ರಮೋದಿ ಅವರು ಲೋಕಾರ್ಪಣೆ ಮಾಡಿದರು.

ಮುಂದಿನ ಎರಡು ವರ್ಷಗಳಲ್ಲಿ 10 ಕರ್ತವ್ಯಭವನಗಳನ್ನು ಪೂರ್ಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಒಂದೇ ಸೂರಿನಡಿ ಎಲ್ಲಾ ಸಚಿವಾಲಯಗಳ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಈ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಇದು ಸೆಂಟ್ರಲ್‌ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿದ್ದು, ಇದರಡಿ ಮೋದಿ ಸರ್ಕಾರವು ಹೊಸ ಸಂಸತ್ತಿನ ಕಟ್ಟಡ ಮತ್ತು ಉಪಾಧ್ಯಕ್ಷರ ಎನ್‌ಕ್ಲೇವ್‌ ಅನ್ನು ನಿರ್ಮಿಸಿದೆ. ದೇಶದ ಶಕ್ತಿ ಕೇಂದ್ರದ ಬಳಿಯಿರುವ ಪ್ರಮುಖ ರಸ್ತೆಯನ್ನು, ಹಿಂದೆ ರಾಜ್‌ಪಥ್‌ ಎಂದು ಕರೆಯಲಾಗುತ್ತಿತ್ತು, ಇದನ್ನು ಪುನರಾಭಿವೃದ್ಧಿ ಮಾಡಿ ಕರ್ತವ್ಯಪಥ್‌ ಎಂದು ಮರುನಾಮಕರಣ ಮಾಡಲಾಗಿದೆ.

ಕರ್ತವ್ಯಭವನದಲ್ಲಿ ಗ್ರಾಮೀಣಾಭಿವೃದ್ಧಿಯ ಜೊತೆಗೆ ಗೃಹ ವ್ಯವಹಾರ ಮತ್ತು ವಿದೇಶಾಂಗ ವ್ಯವಹಾರಗಳಂತಹ ಉನ್ನತ ಸಚಿವಾಲಯಗಳ ಕಚೇರಿಗಳು; ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲ್ಲಿಂದ ಕಾರ್ಯ ನಿರ್ವಹಿಸುತ್ತವೆ.

ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸಹ ಕರ್ತವ್ಯ ಭವನದಲ್ಲಿ ನೆಲೆಗೊಳ್ಳಲಿವೆ.ಮುಂದಿನ ತಿಂಗಳೊಳಗೆ ಇನ್ನೂ ಎರಡು ಕಟ್ಟಡಗಳು ಪೂರ್ಣಗೊಳ್ಳುವ ಗುರಿ ಹೊಂದಿದ್ದು, ಇನ್ನೊಂದು ಕಟ್ಟಡವು ಮುಂದಿನ ವರ್ಷ ಏಪ್ರಿಲ್‌ನಲ್ಲಿ ಪೂರ್ಣಗೊಳ್ಳುವ ಗುರಿ ಇದೆ. ಇದಾದ ಬಳಿಕ ಅಕ್ಟೋಬರ್‌ 2026ರೊಳಗೆ ಮತ್ತೆರಡು ಕಟ್ಟಡಗಳು ಪೂರ್ಣಗೊಳ್ಳಲಿವೆ.

ಕಾರ್ಯನಿರ್ವಾಹಕ ಎನ್‌ಕ್ಲೇವ್‌ ಎರಡನೇ ಹಂತವನ್ನು ಹೊಂದಿದ್ದು, ಇದರಲ್ಲಿ ಪ್ರಧಾನಮಂತ್ರಿಯ ಹೊಸ ನಿವಾಸವನ್ನು ಸಹ ನಿರ್ಮಿಸಲಾಗುವುದು. ಕರ್ತವ್ಯಭವನದ ಕಟ್ಟಡವು 2 ನೆಲಮಾಳಿಗೆಗಳು, 1 ನೆಲ ಮಹಡಿ ಮತ್ತು 6 ಮಹಡಿಗಳನ್ನು ಹೊಂದಿದೆ. ಒಟ್ಟು 850 ಕಚೇರಿ ಕೊಠಡಿಗಳಿದ್ದು, 600 ವಾಹನಗಳಿಗೆ ಪಾರ್ಕಿಂಗ್‌ ಸೌಲಭ್ಯ ಇರಲಿದೆ.

ಕರ್ತವ್ಯ ಭವನದ 1ನೇ ಮಹಡಿಯಲ್ಲಿ ಪೆಟ್ರೋಲಿಯಂ ಸಚಿವಾಲಯ, 2ನೇ ಮಹಡಿಯಲ್ಲಿ ಒಒಇ ಮತ್ತು ಆಔಖಿ, 3ನೇ ಮಹಡಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, 4ನೇ, 5ನೇ ಮತ್ತು 6ನೇ ಮಹಡಿಗಳಲ್ಲಿ ಗೃಹ ಸಚಿವಾಲಯದ ಕಚೇರಿ ಇರಲಿದೆ. ಗೃಹ ಸಚಿವರ ಕಚೇರಿ ಐದನೇ ಮಹಡಿಯಲ್ಲಿದೆ. 6ನೇ ಮಹಡಿಯಲ್ಲಿ ಗುಪ್ತಚರ ಬ್ಯೂರೋ ಕಚೇರಿಯಿದೆ.ಇಡೀ ಕಟ್ಟಡದ ಒಳಗೆ ಮತ್ತು ಹೊರಗೆ 700 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇವುಗಳನ್ನು ನಿಯಂತ್ರಣ ಕೊಠಡಿಯಿಂದ 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತದೆ.

RELATED ARTICLES

Latest News