ವಾಷಿಂಗ್ಟನ್, ಫೆ 13 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರ ಅತಿಥಿ ಗೃಹವಾದ ಬೇರ್ ಹೌಸ್‌ಗೆ ಆಗಮಿಸಿದಾಗ ಭಾರತೀಯ ಅಮೆರಿಕನ್ ಸಮುದಾಯದ ಸದಸ್ಯರು ಅದ್ಧೂರಿ ಸ್ವಾಗತ ಕೋರಿದರು. ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಆಗಮಿಸಿದ್ದು, ಕಳೆದ ತಿಂಗಳ ಉದ್ಘಾಟನಾ ಸಮಾರಂಭದ ನಂತರ ದ್ವಿಪಕ್ಷೀಯ ಸಭೆಗಾಗಿ ಇಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ.
ಮೋದಿ ತಂಗಲಿರುವ ಅಧ್ಯಕ್ಷರ ಅತಿಥಿ ಗೃಹವಾದ ಬೇರ್ ಹೌಸ್‌ಗೆ ತಲುವುತ್ತಿದ್ದಂತೆ ಅವರಿಗೆ ಭಾರತೀಯ-ಅಮೆರಿಕನ್ ಡಯಾಸ್ಪೋರಾ ಸದಸ್ಯರು ಅದ್ಧೂರಿ ಸ್ವಾಗತ ಕೋರಿದರು. ಮೈ ಕೊರೆಯುವ ಚಳಿ ಮತ್ತು ಮಳೆಯನ್ನು ಲೆಕ್ಕಿಸದೆ ಸಮುದಾಯದ ಸದಸ್ಯರು ಬೇರ್ ಹೌಸ್‌ನಲ್ಲಿ ಜಮಾಯಿಸಿದರು ಮತ್ತು ಭಾರತ ಮತ್ತು ಅಮೆರಿಕದ ಧ್ವಜಗಳನ್ನು ಬೀಸಿ ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಮತ್ತು ಮೋದಿ ಮೋದಿ ಎಂದು ಜಯಘೋಷ ಮೊಳಗಿಸಿದರು.
ಚಳಿಗಾಲದ ಚಳಿಯಲ್ಲಿ ಬೆಚ್ಚಗಿನ ಸ್ವಾಗತ) ಶೀತ ಹವಾಮಾನದ ಹೊರತಾಗಿಯೂ, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ವಲಸಿಗರು ನನ್ನನ್ನು ವಿಶೇಷ ಸ್ವಾಗತದೊಂದಿಗೆ ಸ್ವಾಗತಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಎಂದು ಮೋದಿ ಎಕ್ಸ್‌ನಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರದ ವಾರಗಳಲ್ಲಿ ಆತಿಥ್ಯ ವಹಿಸಿದ ನಾಲ್ಕನೇ ವಿದೇಶಿ ನಾಯಕ ಪ್ರಧಾನಿ ಮೋದಿಯಾಗಿದ್ದಾರೆ. ಶ್ವೇತಭವನದಲ್ಲಿ ಟ್ರಂಪ್ ಅವರ ಎರಡನೇ ಅವಧಿಯ ಪ್ರಾರಂಭದ ಒಂದು ತಿಂಗಳೊಳಗೆ, ಅವರು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಗೆರು ಇಶಿವಾ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ ಅವರಿಗೆ ಆತಿಥ್ಯ ನೀಡಿದ್ದಾರೆ.