Tuesday, September 17, 2024
Homeರಾಷ್ಟ್ರೀಯ | National2047ರ ವಿಕಸಿತ ಭಾರತ 140 ಕೋಟಿ ಜನರ ಸಂಕಲ್ಪವಾಗಿದೆ : ಪ್ರಧಾನಿ ಮೋದಿ

2047ರ ವಿಕಸಿತ ಭಾರತ 140 ಕೋಟಿ ಜನರ ಸಂಕಲ್ಪವಾಗಿದೆ : ಪ್ರಧಾನಿ ಮೋದಿ

ನವದೆಹಲಿ,ಆ.15- ಅಸಂಖ್ಯಾತ ಸ್ವಾತಂತ್ರ್ಯ ಪ್ರೀಮಿಗಳ ಬಲಿದಾನಕ್ಕೊಂದು ದೊಡ್ಡ ಪ್ರಣಾಮ. ವಿಕಸಿತ ಭಾರತ 2047 ಕೇವಲ ಪದಗಳಲ್ಲ. 140 ಕೋಟಿ ಜನರ ಸಂಕಲ್ಪ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ.

ದೆಹಲಿಯ ಕೆಂಪುಕೋಟೆಯ ಮೇಲೆ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ್ದಾರೆ. ಧ್ವಜಾರೋಹಣದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಕೃತಿ ವಿಕೋಪದಿಂದ ಹಲವಾರು ಮಂದಿ ತಮ ಕುಟುಂಬ, ಆಸ್ತಿಯನ್ನು ಕಳೆದುಕೊಂಡಿದ್ದಾರೆ.

ಹೊರ ರಾಷ್ಟ್ರವೂ ನಷ್ಟ ಅನುಭವಿಸಿದೆ. ಇಂದು, ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಈ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ. ಇಂದು ನಾವು 140 ಕೋಟಿ ಜನರಿದ್ದೇವೆ, ನಾವು ಸಂಕಲ್ಪ ಮಾಡಿ ಒಂದು ದಿಕ್ಕಿನಲ್ಲಿ ಒಟ್ಟಾಗಿ ಸಾಗಿದರೆ, 2047 ರ ವೇಳೆಗೆ ನಾವು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ವಿಕಸಿತ ಭಾರತ್ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದರು.

ಈ ವರ್ಷ ಮತ್ತು ಕಳೆದ ಕೆಲವು ವರ್ಷಗಳಿಂದ, ನೈಸರ್ಗಿಕ ವಿಕೋಪದಿಂದಾಗಿ, ನಮ ಕಳವಳಗಳು ಹೆಚ್ಚುತ್ತಿವೆ. ಈ ನೈಸರ್ಗಿಕ ವಿಕೋಪದಿಂದ ಹಲವಾರು ಜನರು ತಮ ಕುಟುಂಬ ಸದಸ್ಯರನ್ನು, ಆಸ್ತಿಯನ್ನು ಕಳೆದುಕೊಂಡಿದ್ದಾರೆ, ರಾಷ್ಟ್ರವೂ ನಷ್ಟ ಅನುಭವಿಸಿದೆ. ಇಂದು, ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಈ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಎಂದು ಅವರಿಗೆ ಭರವಸೆ ನೀಡುತ್ತೇನೆ ಶಪಥ ಮಾಡಿದರು.

ಭಾರತದಿಂದ ವಸಾಹತುಶಾಹಿ ಆಡಳಿತವನ್ನು ಬೇರುಸಹಿತ ಕಿತ್ತೊಗೆದ 40 ಕೋಟಿ ಜನರ ರಕ್ತವನ್ನು ನಾವು ಕೊಂಡೊಯ್ಯುಲು ನಾವು ಹೆಮೆಪಡುತ್ತೇವೆ. ಇಂದು ನಾವು 140 ಕೋಟಿ ಜನರಿದ್ದೇವೆ, ನಾವು ಒಂದು ದಿಕ್ಕಿನಲ್ಲಿ ಸಂಕಲ್ಪ ಮಾಡಿ ಒಟ್ಟಿಗೆ ಸಾಗಿದರೆ, ದಾರಿಯಲ್ಲಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಮೂಲಕ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಹುದು. ವಿಕಸಿತ ಭಾರತ 2047 ಕೇವಲ ಹೇಳಿಕೆಯಲ್ಲ, ಅದನ್ನು ಸಾಽಸಲು ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪಡಿಸಲು ಜನರು ಹಲವು ಸಲಹೆಗಳನ್ನು ನೀಡಿದ್ದಾರೆ. ವಿಕಸಿತ ಭಾರತಕ್ಕಾಗಿ ಜನರು ಆಡಳಿತ ಸುಧಾರಣೆಗಳು, ತ್ವರಿತ ನ್ಯಾಯ ವಿತರಣಾ ವ್ಯವಸ್ಥೆ, ಸಾಂಪ್ರದಾಯಿಕ ಔಷಧಗಳನ್ನು ಉತ್ತೇಜಿಸುವುದು ಸೇರಿ ಹಲವು ಸಲಹೆಗಳನ್ನು ತಿಳಿಸಿದ್ದಾರೆ.

ಸುಧಾರಣೆಗಳ ಕಡೆಗೆ ನಮ ಸಮರ್ಪಣೆ ಕೇವಲ ಕಾಗದಗಳಿಗೆ ಸೀಮಿತವಾಗಿಲ್ಲ, ನಾವು ಅದನ್ನು ಮೆಚ್ಚುಗೆ ಗಳಿಸಲು ಮಾಡುವುದಿಲ್ಲ. ಭಾರತವನ್ನು ಬಲಿಷ್ಠಗೊಳಿಸಲು ಈ ಕೆಲಸ ಮಾಡುತ್ತೇವೆ. ನಮ ಸುಧಾರಣೆಗಳು ಭಾರತದ ಬೆಳವಣಿಗೆಗೆ ನೀಲನಕ್ಷೆಯಾಗಿದೆ. ನಾವು ತರುವ ಸುಧಾರಣೆಗಳು ಯಾವುದೇ ರಾಜಕೀಯ ಬಲವಂತದ ಕಾರಣದಿಂದಲ್ಲ, ನಮಗೆ ರಾಷ್ಟ್ರವೇ ಮೊದಲು ಎಂದು ಪ್ರಧಾನಿ ಮೋದಿ ಹೇಳಿದರು.

ವೋಕಲ್‌ ಫಾರ್ ಲೋಕಲ್ :
ನಾವು ವೋಕಲ್‌ ಫಾರ್ ಲೋಕಲ್ ಎಂಬ ಮಂತ್ರವನ್ನು ನೀಡಿದ್ದೇವೆ. ಇಂದು ವೋಕಲ್‌ ಫಾರ್ ಲೋಕಲ್ ಆರ್ಥಿಕ ವ್ಯವಸ್ಥೆಗೆ ಹೊಸ ಮಂತ್ರವಾಗಿ ಮಾರ್ಪಟ್ಟಿದೆ ಎಂದು ನನಗೆ ಸಂತೋಷವಾಗಿದೆ. ಪ್ರತಿಯೊಂದು ಜಿಲ್ಲೆಯೂ ತನ್ನ ಉತ್ಪನ್ನಗಳ ಬಗ್ಗೆ ಹೆಮೆ ಪಡಲಾರಂಭಿಸಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಪರಿಸರವಿದೆ ಎಂದರು.

ನಾವು ಕೊರೋನಾ ಅವಧಿಯನ್ನು ಹೇಗೆ ಮರೆಯಲು ಸಾಧ್ಯ? ನಮ ದೇಶವು ಪ್ರಪಂಚದಾದ್ಯಂತ ಎಲ್ಲರಿಗಿಂತ ವೇಗವಾಗಿ ಕೋಟಿಗಟ್ಟಲೆ ಜನರಿಗೆ ಲಸಿಕೆಗಳನ್ನು ನೀಡಿತು. ಇದೇ ದೇಶಕ್ಕೆ ಉಗ್ರರು ಬಂದು ನಮ ಮೇಲೆ ದಾಳಿ ನಡೆಸುತ್ತಿದ್ದರು. ದೇಶದ ಸಶಸ ಪಡೆಗಳು ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ, ವೈಮಾನಿಕ ದಾಳಿ ನಡೆಸಿದಾಗ, ದೇಶದ ಯುವಕರು ಹೆಮೆಪಟ್ಟರು. ಅದಕ್ಕಾಗಿಯೇ ದೇಶದ 140 ಕೋಟಿ ನಾಗರಿಕರು ಇಂದು ಹೆಮೆ ಪಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದರು.

ಸುಧಾರಣೆಗಳ ಕಡೆಗೆ ನಮ ಸಮರ್ಪಣೆ ಕೇವಲ ಕಾಗದಗಳಿಗೆ ಸೀಮಿತವಾಗಿಲ್ಲ, ನಾವು ಅದನ್ನು ಸಾಕಾರ ಮಾಡಿ ತೋರಿಸಿದ್ದೇವೆ.ವೋಕಲ್‌ ಾರ್ ಲೋಕಲ್ (ಸ್ಥಳೀಯರಿಗಾಗಿ ಧ್ವನಿ) ಎಂಬ ಪರಿಕಲ್ಪನೆ ಆರ್ಥಿಕ ವ್ಯವಸ್ಥೆಗೆ ಹೊಸ ಮಂತ್ರವಾಗಿದೆ.ಇತ್ತೀಚಿನ ದಿನಗಳಲ್ಲಿ ಅನಿಯಮಿತ ಉದ್ಯೋಗಾವಕಾಶಗಳಿವೆ.

ಇದು ನಮ ಸುವರ್ಣ ಯುಗ. ಸಶಸ ಪಡೆಗಳು ಸರ್ಜಿಕಲ್ ಮತ್ತು ವೈಮಾನಿಕ ದಾಳಿಗಳನ್ನು ನಡೆಸಿದಾಗ, ಪ್ರತಿಯೊಬ್ಬ ಭಾರತೀಯನು ಹೆಮೆಯಿಂದ ಬೀಗಿದ್ದ. ಬಾಹ್ಯಾಕಾಶ ಕ್ಷೇತ್ರವು ಅಸಂಖ್ಯಾತ ಸುಧಾರಣೆಗಳನ್ನು ಕಂಡಿದೆ. ಕಳೆದ 10 ವರ್ಷಗಳಲ್ಲಿ 10 ಕೋಟಿ ಮಹಿಳೆಯರು ಮಹಿಳಾ ಸ್ವಸಹಾಯ ಸಂಘಗಳಿಗೆ ಸೇರ್ಪಡೆಯಾಗಿದ್ದಾರೆ. 10 ಕೋಟಿ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ ಎಂದು ಪ್ರಶಂಸೆ ವ್ಯಪ್ತಪಡಿಸಿದರು.

ಬಡವರು, ಮಧ್ಯಮ ವರ್ಗದವರು, ವಂಚಿತರು ನಮ ಯುವಕರ ಆಕಾಂಕ್ಷೆಗಳಿಗಾಗಿ, ಅವರ ಜೀವನದಲ್ಲಿ ಸುಧಾರಣೆಗಳನ್ನು ತರಲು ನಾವು ಸುಧಾರಣಾ ಮಾರ್ಗವನ್ನು ಕೈಗೆತ್ತಿಕೊಂಡಿದ್ದೇವೆ.ಪ್ರವಾಸೋದ್ಯಮ, ಎಂಎಸ್ಎಂಇ, ಶಿಕ್ಷಣ, ಆರೋಗ್ಯ, ಸಾರಿಗೆ, ಕೃಷಿ ಅಥವಾ ಇತರ ಯಾವುದೇ ಕ್ಷೇತ್ರವಾಗಿರಲಿ, ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಿತ ತಂತ್ರಜ್ಞಾನ ವ್ಯವಸ್ಥೆ ಇದೆ.ಬಾಹ್ಯಾಕಾಶ ಕ್ಷೇತ್ರದಲ್ಲಿ ನೂರಾರು ಸ್ಟಾರ್ಟ್ಅಪ್ಗಳು ಬಂದಿವೆ. ಖಾಸಗಿ ಉಪಗ್ರಹಗಳು ಮತ್ತು ರಾಕೆಟ್ಗಳನ್ನು ಉಡಾವಣೆ ಮಾಡಲಾಗುತ್ತಿದೆ.

ಜಾಗತಿಕ ಸಂಸ್ಥೆಗಳಿಗೆ ಭಾರತದ ಮೇಲೆ ಅತೀವ ಭರವಸೆ ಇದೆ, ರ್ತ, ವಿದೇಶಿ ವಿನಿಮಯ ಪ್ರಮಾಣ ಹೆಚ್ಚಾಗಿದೆ. ಮೆಡಿಕಲ್ ಸೀಟ್ಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.ರಕ್ಷಣೆ ವಿಚಾರದಲ್ಲಿ ಭಾರತ ಆತ ನಿರ್ಭರವಾಗಿದೆ ಎಂದು ತಮ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯಗಳು, ರೈತರು, ಮಹಿಳೆಯರು, ಆಶಾ ಕಾರ್ಯಕರ್ತರು, ನರ್ಸ್ ಶುಶ್ರೂಷಕಿಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಒಲಿಂಪಿಕ್ ಕ್ರೀಡಾಪಟುಗಳು ಸೇರಿ ಬರೋಬ್ಬರಿ 6,000 ವಿಶೇಷ ಅತಿಥಿಗಳು ಭಾಗವಹಿಸಿದ್ದರು. ಇನ್ನು ಧ್ವಜಾರೋಹಣದ ಬಳಿಕ ಸತತ 11ನೇ ಬಾರಿ ಭಾಷಣ ಮಾಡುವ ಮೂಲಕ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರ ದಾಖಲೆಯನ್ನು ಪ್ರಧಾನಿ ಮೋದಿ ಸರಿಗಟ್ಟಿದ್ದಾರೆ.

RELATED ARTICLES

Latest News