Tuesday, September 2, 2025
Homeರಾಷ್ಟ್ರೀಯ | Nationalಸೆ.13ರಂದು ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ..?

ಸೆ.13ರಂದು ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ..?

PM Modi likely to visit Manipur in second week of September

ಐಜ್ವಾಲ್‌, ಸೆ.2- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್‌ 13 ರಂದು ಮಿಜೋರಾಂ ಮತ್ತು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಐಜ್ವಾಲ್‌ನಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.ಮೋದಿ ಅವರು ಮೊದಲು ಮಿಜೋರಾಂಗೆ ಭೇಟಿ ನೀಡಿ ನೂತನ ಬೈರಾಬಿ-ಸಾಯಿರಂಗ್‌ ರೈಲ್ವೆ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಿ ಮೋದಿ ಐಜ್ವಾಲ್‌ನಿಂದ ಮಣಿಪುರಕ್ಕೆ ವಿಮಾನದಲ್ಲಿ ತೆರಳಲಿದ್ದಾರೆ ಎಂಬ ಮಾಹಿತಿ ಬಂದಿರುವುದಾಗಿ ಮಿಜೋರಾಂ ಸರ್ಕಾರದ ಅನೇಕ ಅಧಿಕಾರಿಗಳು ಹೇಳಿದ್ದಾರೆ. ಇದು 2023ರ ಮೇನಲ್ಲಿ ರಾಜ್ಯದಲ್ಲಿ ಜನಾಂಗೀಯ ಹಿಂಸೆ ಭುಗಿಲೆದ್ದ ಬಳಿಕ ಅಲ್ಲಿಗೆ ಮೋದಿ ನೀಡುತ್ತಿರುವ ಪ್ರಥಮ ಭೇಟಿಯಾಗಿದೆ.ಹೀಗಿದ್ದರೂ ಪ್ರಧಾನಿಯವರ ಭೇಟಿಯ ಅಂತಿಮ ದೃಢೀಕರಣವನ್ನು ಇನ್ನಷ್ಟೇ ಸ್ವೀಕರಿಸಬೇಕಾಗಿದೆ ಎಂದು ಅವರು ನುಡಿದಿದ್ದಾರೆ.

ಆದರೆ ಇಂಫಾಲದಲ್ಲಿನ ಅಧಿಕಾರಿಗಳು ಪ್ರಧಾನಿಯವರ ಭೇಟಿಯನ್ನು ಖಚಿತಪಡಿಸಿಲ್ಲ.
ಪ್ರಧಾನಿಯವರ ಭೇಟಿಗಾಗಿ ಪೂರ್ವಸಿದ್ಧತಾ ಕ್ರಮಗಳನ್ನು ಪರಿಶೀಲಿಸಲು ಮಿಜೋರಾಂ ಮುಖ್ಯ ಕಾರ್ಯದರ್ಶಿ ಖಿಲ್ಲಿರಾಂ ಮೀನಾ ಅವರು ವಿವಿಧ ಇಲಾಖೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ಸಭೆ ನಡೆಸಿದರು.

ಸಭೆಯಲ್ಲಿ ಭದ್ರತಾ ಕ್ರಮಗಳು, ಸಂಚಾರ ನಿರ್ವಹಣೆ, ಸ್ವಾಗತ ಮತ್ತು ರಸ್ತೆಗಳ ಅಲಂಕಾರ ಸೇರಿದಂತೆ ವಿವಿಧ ವಿಷಯಗಳ ಚರ್ಚೆ ನಡೆಯಿತು ಎಂದು ಹೇಳಿಕೆ ನೀಡಲಾಗಿದೆ.ಮಣಿಪುರದಲ್ಲಿ ಜನಾಂಗೀಯ ಹಿಂಸೆ ಸ್ಫೋಟಗೊಂಡು ಗಲಭೆ-ದೊಂಬಿಗಳು ನಡೆದು ಅಪಾರ ಸಾವು-ನೋವು ಸಂಭವಿಸಿತ್ತು. ಆಸ್ತಿಪಾಸ್ತಿಗಳಿಗೆ ಅಗಾಧ ಹಾನಿಯಾಗಿತ್ತು.

ಇಷ್ಟಾದರೂ ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಲಿಲ್ಲ ಮತ್ತು ಈ ಬಗ್ಗೆ ಮೌನ ಮುರಿಯಲಿಲ್ಲ ಎಂದು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.ಈ ಹಿನ್ನೆಲೆಯಲ್ಲಿ ಮೋದಿ ಅವರ ಮಣಿಪುರ ಭೇಟಿ ಕುತೂಹಲ ಕೆರಳಿಸಿದೆ.

RELATED ARTICLES

Latest News