Friday, November 22, 2024
Homeರಾಜ್ಯ'ಪೂಜಿಸಲೆಂದೇ ಹೂಗಳ ತಂದೆ' ಕನ್ನಡ ಹಾಡಿಗೆ ಮನಸೋತ ಮೋದಿ

‘ಪೂಜಿಸಲೆಂದೇ ಹೂಗಳ ತಂದೆ’ ಕನ್ನಡ ಹಾಡಿಗೆ ಮನಸೋತ ಮೋದಿ

ಬೆಂಗಳೂರು,ಜ.16- ಕನ್ನಡದ ಹಾಡಿಗೆ ತಲೆದೂಗಿರುವ ಪ್ರಧಾನಿ ನರೇಂದ್ರಮೋದಿ ಆ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಯೂಟೂಬ್‍ಲ್ಲಿ ಹಾಡಿರುವ, ಪೂಜಿಸಲೆಂದೇ ಹೂಗಳ ತಂದೆ ಹಾಡಿನ ಲಿಂಕ್‍ನ್ನು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರಮೋದಿ, ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಮುಂದೆ ಕೊಂಡೊಯ್ಯುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಬಣ್ಣಿಸಿದ್ದಾರೆ.

ಪೂಜಿಸಲೆಂದೆ ಹೂಗಳ ತಂದೆ ಹಾಡು ಮೂಲತಃ ದೊರೈ-ಭಗವಾನ್ ಜೋಡಿಯಿಂದ ನಿರ್ದೇಶಿಸಲ್ಪಟ್ಟ ರಾಜ್‍ಕುಮಾರ್ ನಟನೆಯ ಎರಡು ಕನಸು ಸಿನಿಮಾದ ಹಾಡು. ಕನ್ನಡದ ಶ್ರೇಷ್ಠ ಪ್ರಣಯ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಈ ಸಿನಿಮಾ 1974ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು.

ಮಗನ ಕೈಯಲ್ಲಿ ಮೂಡಿಬಂದ ರಾಮ ಲಲ್ಲಾ ವಿಗ್ರಹ, ತಾಯಿ ಸಂತಸ

ಪೂಜಿಸಲೆಂದೆ ಹೂಗಳ ತಂದೆ ಹಾಡಿನ ಸಾಹಿತ್ಯ ಬರೆದವರು ಚಿ. ಉದಯಶಂಕರ್ ಅವರು. ಹಿನ್ನೆಲೆ ಗಾಯನ ಖ್ಯಾತ ಗಾಯಕಿ ಎಸ್ ಜಾನಕಿಯವರು. ಎಂದೆಂದೂ ನಿನ್ನನು ಮರೆತು, ಬಾಡಿಹೋದ ಬಳ್ಳ್ಳಿಯಿಂದ, ಎಂದೂ ನಿನ್ನ ನೋಡುವೆ ಇವುಗಳು ಎರಡು ಕನಸು ಸಿನಿಮಾದ ಇತರ ಹಾಡುಗಳು.

ಇದೀಗ ಅದೇ ಹಾಡನ್ನು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಭಾವನಾತ್ಮಕವಾಗಿ ಹಾಡಿ ಯೂಟ್ಯೂಬ್‍ನಲ್ಲಿ ಬಿತ್ತರಿಸಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಲಿಸಿ ತಲೆದೂಗಿದ್ದಾರೆ.

RELATED ARTICLES

Latest News