ಚಂಡೀಗಢ, ನ.26 (ಪಿಟಿಐ) ಕಳೆದ 2022ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತಾ ಲೋಪ ಎಸಗಿದ ಆರೋಪದಲ್ಲಿ ಇನ್ನೂ ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈ ಆರು ಮಂದಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯೊಂದಿಗೆ ಅಮಾನತುಗೊಳಿಸಲಾಗಿದೆ, ಅವರನ್ನು ಈ ಹಿಂದೆ ಅಮಾನತುಗೊಳಿಸಲಾಗಿತ್ತು ಎಂದು ವರದಿಯಾಗಿದೆ.
ರಾಜ್ಯ ಗೃಹ ಇಲಾಖೆಯ ನವೆಂಬರ್ 22 ರ ಆದೇಶದ ಪ್ರಕಾರ ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಗಳಾದ ಪರ್ಸನ್ ಸಿಂಗ್ ಮತ್ತು ಜಗದೀಶ್ ಕುಮಾರ್, ಇನ್‍ಸ್ಪೆಕ್ಟರ್‍ಗಳಾದ ಜತೀಂದರ್ ಸಿಂಗ್ ಮತ್ತು ಬಲ್ವಿಂದರ್ ಸಿಂಗ್, ಸಬ್ ಇನ್‍ಸ್ಪೆಕ್ಟರ್ ಜಸ್ವಂತ್ ಸಿಂಗ್ ಮತ್ತು ಸಹಾಯಕ ಸಬ್ ಇನ್ಸ್‍ಪೆಕ್ಟರ್ ರಮೇಶ್ ಕುಮಾರ್ ಎಂಬುವರನ್ನು ಅಮಾನತುಗೊಳಿಸಲಾಗಿದೆ.
ಪ್ರಸ್ತುತ ಬಟಿಂಡಾ ಜಿಲ್ಲೆಯಲ್ಲಿ ಎಸ್ಪಿಯಾಗಿ ನಿಯೋಜನೆಗೊಂಡಿರುವ ಎಸ್ಪಿ ಗುರ್ಬಿಂದರ್ ಸಿಂಗ್ ಅವರನ್ನು ಶನಿವಾರ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಆದೇಶದ ಪ್ರಕಾರ, ಪಂಜಾಬ್ ನಾಗರಿಕ ಸೇವೆಗಳ ನಿಯಮ (ಶಿಕ್ಷೆ ಮತ್ತು ಮೇಲ್ಮನವಿ) 1970 ರ ಸೆಕ್ಷನ್ 8 ರ ಅಡಿಯಲ್ಲಿ ಎಲ್ಲಾ ಏಳು ಪೊಲೀಸರನ್ನು ಚಾರ್ಜ್ ಶೀಟ್‍ನಲ್ಲಿ ಹೆಸರಿಸಲಾಗಿದೆ.
“ಜಾಗತೀಕ ಸಂಘರ್ಷ ನಿವಾರಣೆಯಲ್ಲಿ ಮಧ್ಯವರ್ತಿಯಾಗಿ ಭಾರತ ಬೆಳೆದಿದೆ”
ಜನವರಿ 5, 2022 ರಂದು, ಫಿರೋಜ್‍ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಫ್ಲೈಓವರ್‍ನಲ್ಲಿ ಸಿಕ್ಕಿಹಾಕಿಕೊಂಡಿತು, ನಂತರ ಅವರು ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ಪಂಜಾಬ್‍ನಿಂದ ಹಿಂತಿರುಗಿದರು ಮತ್ತು ರ್ಯಾಲಿಯನ್ನು ರದ್ದುಗೊಳಿಸಬೇಕಾಯಿತು.
2022 ರ ಜನವರಿಯಲ್ಲಿ ಪ್ರಧಾನಿ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತಾ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಹಲವಾರು ರಾಜ್ಯ ಅಧಿಕಾರಿಗಳನ್ನು ಲೋಪದೋಷಗಳಿಗೆ ದೋಷಾರೋಪಣೆ ಮಾಡಿತ್ತು.