Thursday, September 11, 2025
Homeರಾಷ್ಟ್ರೀಯ | Nationalಉಕ್ರೇನ್-ರಷ್ಯಾ ಯುದ್ಧ ಕುರಿತು ಮೋದಿ ಜೊತೆ ಇಟಲಿ ಪ್ರಧಾನಿ ಮೆಲೋನಿ ಮಾತುಕತೆ

ಉಕ್ರೇನ್-ರಷ್ಯಾ ಯುದ್ಧ ಕುರಿತು ಮೋದಿ ಜೊತೆ ಇಟಲಿ ಪ್ರಧಾನಿ ಮೆಲೋನಿ ಮಾತುಕತೆ

PM Modi Speaks To Italian PM Giorgia Meloni, Thanks Her For Backing India-EU Trade Deal

ನವದೆಹಲಿ : ಉಕ್ರೇನ್-ರಷ್ಯಾ ಯುದ್ಧ ಕುರಿತು ಗ ಪ್ರಧಾನಿ ನರೇಂದ್ರ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಉಭಯ ನಾಯಕರು ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸೋ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ನಂತರ, ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಅತ್ಯುತ್ತಮ ಸಂಭಾಷಣೆ ನಡೆಸಿದ್ದೇನೆ. ಭಾರತ-ಇಟಲಿ ಪಾಲುದಾರಿಕೆಯನ್ನು ಹೆಚ್ಚಿಸಲು ಬದ್ಧರಾಗಿದ್ದೇವೆ. ಉಕ್ರೇನ್‌ನಲ್ಲಿನ ಸಂಘರ್ಷವನ್ನು ನಿಲ್ಲಿಸುವಲ್ಲಿ ಉಭಯ ದೇಶಗಳು ಏನು ಮಾಡಬೇಕು ಎಂದು ಚರ್ಚಿಸಿದ್ದೇವೆ’ ಎಂದು ಹೇಳಿದ್ದಾರೆ.

‘ಉಭಯ ನಾಯಕರು ತಮ್ಮ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಚರ್ಚಿಸಿದ್ದಾರೆ. ಹೂಡಿಕೆ, ರಕ್ಷಣೆ, ಭದ್ರತೆ, ಬಾಹ್ಯಾಕಾಶ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಸಾಂಸ್ಕೃತಿಕ ವಿನಿಮಯ ಮತ್ತು ಭಯೋತ್ಪಾದನಾ ವಿರೋಧಿ ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು’ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆ ಬಿಡುಗಡೆ ಮಾಡಿದೆ.

ಸ್ವಯಂ ಘೋಷಿತ ಶಾಂತಿಧೂತ, ನೊಬೆಲ್ ಶಾಂತಿ ಪ್ರಶಸ್ತಿ ಮೇಲೆ ಕಣ್ಣೀಟ್ಟಿರೋ ಮಹಾ ನಾಯಕ, ಅಮೆರಿಕದ ದಿ ಗ್ರೇಟ್ ಅಧ್ಯಕ್ಷ ಡೋನಾಲ್ಡ್ ಟ್ರಂಪ್​ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅದೇ ಟ್ರಂಪ್ ಇತ್ತೀಚೆಗಷ್ಟೇ ರಷ್ಯಾದ ವ್ಲಾಡಿಮೀರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದರು.

ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಿ ಎಂದಿದ್ದರು. ಆದರೂ ಯುದ್ಧ ನಿಲ್ಲಲಿಲ್ಲ. ಆದ್ದರಿಂದ ವಿಶ್ವ ನಾಯಕರು ಯುದ್ಧ ನಿಲ್ಲಿಸುವಂತೆ ಮೋದಿ ಮೊರೆ ಹೋಗುತ್ತಿದ್ದಾರೆ.
ಹೌದು, ಇತ್ತೀಚೆಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್​ರವ್ರು ಮೋದಿಗೆ ಕರೆ ಮಾಡಿದ್ದಾರೆ. ಹೇಗಾದರೂ ಮಾಡಿ, ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

RELATED ARTICLES

Latest News