Monday, May 12, 2025
Homeರಾಷ್ಟ್ರೀಯ | NationalBIG NEWS : 'ಆಪರೇಷನ್ ಸಿಂಧೂರ' ಯಶಸ್ವಿ ಕುರಿತು ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ...

BIG NEWS : ‘ಆಪರೇಷನ್ ಸಿಂಧೂರ’ ಯಶಸ್ವಿ ಕುರಿತು ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ : ಇಲ್ಲಿದೆ ಹೈಲೈಟ್ಸ್

PM Modi to address nation at 8 pm today after India-Pak ceasefire

ನವದೆಹಲಿ, ಮೇ 12 : ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ.ಅದೇ ರೀತಿ ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ನೀರು ಮತ್ತು ರಕ್ತ ಕೂಡ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ನಿಮ್ಮ ಅಣು ಬಾಂಬ್ ಗಳ ಗೊಡ್ಡು ಬೆದರಿಕೆಗೆ ನಾವು ಸೊಪ್ಪು ಹಾಕುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಅಪರೇಷನ್ ಸಿಂಧೂರದ ನಂತರ ಮೊದಲ ಬಾರಿಗೆ ರಾಷ್ಟ್ರ ಉದ್ದೆಶಿಸಿ ಮಾತನಾಡಿದ ಮೋದಿ ಅವರು, ತಮ್ಮ 30 ನಿಮಿಷಗಳ ಭಾಷಣದಲ್ಲಿ ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಬೆಂಕಿಯುಗಿಳಿದರು. ಭಾರತ ಯಾವುದೇ ಪರಮಾಣು ಬೆದರಿಕೆ”ಯನ್ನು ಸಹಿಸುವುದಿಲ್ಲ ಎಂದು ಒತ್ತಿ ಹೇಳಿದ ಮೋದಿ, ಭಾರತ ಅದನ್ನು ಸಹಿಸುವುದಿಲ್ಲ ಎಂದು ಗುಡುಗಿದರು.

ಯಾವುದೇ ಪರಮಾಣು ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಪರಮಾಣು ಬೆದರಿಕೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಮೂಲಸೌಕರ್ಯವನ್ನು ಭಾರತ ಗುರಿಯಾಗಿಸುತ್ತದೆ.ನಮ್ಮ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಗಡಿ ಭದ್ರತಾ ಪಡೆಗಳು ಮತ್ತು ಎಲ್ಲಾ ಭದ್ರತಾ ಸಂಸ್ಥೆಗಳು ಹೆಚ್ಚಿನ ಎಚ್ಚರಿಕೆಯಲ್ಲಿವೆ. ಭಾರತ ಯಾವುದೇ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲಎಂದು
ಅಬ್ಬರಿಸಿದರು.

ಭಾರತದ ಸರ್ಜಿಕಲ್ ದಾಳಿಗಳು ಪಾಕಿಸ್ತಾನದ ಯುದ್ಧ ಸಿದ್ಧತೆಗಳನ್ನು ಛಿದ್ರಗೊಳಿಸಿವೆ. ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಯಿತು. ಆದರೆ ಭಾರತ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿನ ಭಯೋತ್ಪಾದಕ ಕೇಂದ್ರಗಳನ್ನು ನಾಶಮಾಡುವ ಮೂಲಕ ಅವರ ಹೃದಯವನ್ನು ಹೊಡೆದು ಹಾಕಿತು. ನಿಮ್ಮ ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ, ಬಗ್ಗಲ್ಲ. ನಾವು ಯಾವ ರೀತಿ ಪ್ರತಿಕ್ರಿಯೆ ನೀಡಬೇಕೋ ನಾವು ಅದೇ ರೀತಿಯ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳುವ ಮೂಲಕ ಭಾರತ ಎಲ್ಲದ್ದಕ್ಕೂ ಸಿದ್ಧವಿದೆ ಎಂಬ ಸಂದೇಶವನ್ನು ಕಳುಹಿಸಿದರು. ನಾವು ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ. ಆದರೆ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಅಣ್ವಸ್ತ್ರ ಬಳಕೆಗೆ ಹಿಂಜರಿಕೆ ಮಾಡುವುದಿಲ್ಲ ಎಂಬ ನೀತಿಯನ್ನು ಭಾರತ ಅಳವಡಿಸಿಕೊಂಡಿದೆ.

ಯುದ್ಧ ನಿಲ್ಲಿಸುವಂತೆ ಬೇಡಿಕೊಂಡ ಪಾಕಿಸ್ತಾನ:
ಪಾಕಿಸ್ತಾನವು ದಾಳಿಗಳನ್ನು ನಿಲ್ಲಿಸುವಂತೆ ನಮ್ಮೊಂದಿಗೆ ಬೇಡಿಕೊಂಡಿತು. ಆದರೆ ಅವರು ತಮ್ಮ ದುಸ್ಸಾಹಸವನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ ನಂತರವೇ ನಾವು ಅದನ್ನು ಪರಿಗಣಿಸಿದ್ದೇವೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ದೃಢವಾಗಿ ಸೋಲಿಸಲ್ಪಟ್ಟ ನಂತರವೇ ಪಾಕಿಸ್ತಾನ ಹತಾಶೆಯಿಂದ ನಮ್ಮನ್ನು ಸಂಪರ್ಕಿಸಿದೆ ಎಂಬುದನ್ನು ಇದೇ ವೇಳೆ ಪ್ರಧಾನಿ ಮೋದಿ ದೇಶದ ಗಮನಕ್ಕೆ ತಂದಿದೆ.ಸದ್ಯಕ್ಕೆ ನಮ್ಮ ಕಾರ್ಯಾಚರಣೆಗಳು ಸ್ಥಗಿತ: ನಾವು ಪಾಕಿಸ್ತಾನದ ವಿರುದ್ಧದ ನಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದೇವೆ. ಭವಿಷ್ಯವು ಅವರ ನಡವಳಿಕೆಯನ್ನು ಈ ಕದನ ವಿರಾಮ ಅವಲಂಬಿಸಿರುತ್ತದೆ ಎಂದೂ ಪ್ರಧಾನಿ ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನವು ನಮ್ಮ ಶಾಲೆಗಳು, ಕಾಲೇಜುಗಳು, ಗುರುದ್ವಾರಗಳು, ಮಿಲಿಟರಿ ನೆಲೆಗಳುಮ ದೇವಾಲಯಗಳು ಮತ್ತು ನಾಗರಿಕರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಒಣಹುಲ್ಲಿನಂತೆ ಚದುರಿಹೋಗಿರುವುದನ್ನು ಜಗತ್ತು ನೋಡಿದೆ. ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ಆಕಾಶದಲ್ಲಿ ನಾಶಪಡಿಸಿತು. ಪಾಕಿಸ್ತಾನ ತನ್ನ ಗಡಿಯಲ್ಲಿ ಭಾರತದ ಮೇಲೆ ದಾಳಿ ಮಾಡಲು ಸಿದ್ಧವಾಗಿತ್ತು, ಆದರೆ ಭಾರತ ಪಾಕಿಸ್ತಾನದ ಹೃದಯ ಭಾಗದ ಮೇಲೆ ದಾಳಿ ಮಾಡಿದೆ. ಭಾರತದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನವು ಹೆಮ್ಮೆಪಡುವ ವಾಯುನೆಲೆಗಳಿಗೆ ಹಾನಿ ಮಾಡಿವೆ ಎಂದರು.

ಪಾಕಿಸ್ತಾನದ ಶಾಂತಿಮಾತುಕತೆಯ ಪ್ರಸ್ತಾವನನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಪ್ರಧಾನಿ, ಇಷ್ಟು ದಿನ ಇದ್ದಹಾಗಿ ಇನ್ನು ಮುಂದೆ ಇರುವುದಿಲ್ಲ. ಇನ್ನು ಮುಂದೆ ‘ಟೆರರ್ ಆ್ಯಂಡ್ ಟಾಕ್’ ಎರಡೂ ಒಟ್ಟಿಗೆ ಸಾಗುವುದಿಲ್ಲ. ‘ಟೆರರ್ ಆ್ಯಂಡ್ ಟ್ರೇಡ್’ ಒಟ್ಟಿಗೆ ಆಗುವುದಿಲ್ಲ. ಹಾಗೆಯೇ ‘ನೀರು ಹಾಗೂ ರಕ್ತ’ ಒಟ್ಟಿಗೇ ಹರಿಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಮಾತುಕತೆ ಆಡಿದರೆ ನಾವು ಕೇವಲ ಭಯೋತ್ಪಾದನೆಯ ನಿಗ್ರಹದ ಬಗ್ಗೆ ಮಾತ್ರವೇ ಮಾತನಾಡುತ್ತೇವೆ. ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೇ ಮಾತನಾಡುತ್ತೇವೆ. ಮತ್ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರ್ ಅನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಭವಿಷ್ಯವು ಅವರ ನಡವಳಿಕೆಯನ್ನು ಅವಲಂಬಿಸಿರುತ್ತದೆ.ಪಾಕಿಸ್ತಾನ ಮತ್ತು ಅದರ ಕ್ರಮಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಈ ವಿಜಯವನ್ನು ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸಮರ್ಪಿಸಲಾಗಿದೆ. ಸೈನ್ಯವು ಕಷ್ಟಪಟ್ಟು ಕೆಲಸ ಮಾಡಿತು. ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ಗುಂಡಿನ ದಾಳಿಯು ನನಗೆ ವೈಯಕ್ತಿಕವಾಗಿ ನೋವುಂಟು ಮಾಡಿದೆ. ಅಮಾಯಕ ಜನರನ್ನು ಅವರ ಕುಟುಂಬಗಳ ಮುಂದೆಯೇ ಕೊಲ್ಲಲಾಯಿತು. ಭಯೋತ್ಪಾದಕರಿಗೆ ಭಾರೀ ಹೊಡೆತ ನೀಡಲಾಗಿದೆ ಎಂದು ಭಾವುಕರಾದರು.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಬೆಚ್ಚಿಬಿದ್ದಿರುವ ಪಾಕಿಸ್ತಾನ, ಈಗ ಶಾಂತಿ ಮಾತುಕತೆಯ ಪ್ರಸ್ತಾಪ ಮಾಡುತ್ತಿದೆ. ಆದರೆ, ಭಯೋತ್ಪಾದಕರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಬೆಳೆಸುವಂಥ ನೀಚ ಕೆಲಸವನ್ನು ಅದು ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ. ಪಾಕಿಸ್ತಾನ ಈಗಿರುವ ದುಸ್ಥಿತಿಯಿಂದ ಮೇಲೇಳಲು ಅದು ಬಿಟ್ಟು ಪಾಕಿಸ್ತಾನಕ್ಕೆ ಬೇರೆ ದಾರಿಯಿಲ್ಲ. ಎಂದರು.
ಭಾರತದ ದಾಳಿಗಳು ಭಯೋತ್ಪಾದಕರ ಮೂಲಸೌಕರ್ಯವನ್ನು ನಾಶಪಡಿಸಿದ್ದಲ್ಲದೆ, ಅವರ ನೈತಿಕತೆಯನ್ನು ಸಹ ಮುರಿದಿವೆ . ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಪ್ರತಿಯೊಂದು ಭಯೋತ್ಪಾದಕ ಗುಂಪು “ನಮ್ಮ ಸಹೋದರಿಯರನ್ನು ಕಿಟಕಿಯಲ್ಲಿ ಬಂಧಿಸುವುದರಿಂದ ಉಂಟಾಗುವ ಪರಿಣಾಮಗಳು ಏನೆಂದು ಕಲಿತಿವೆ” ಎಂದು ಎಚ್ಚರಿಸಿದರು.

ಭಾರತ ಈ ಹೆಜ್ಜೆ ಇಡಬಹುದು ಎಂದು ಭಯೋತ್ಪಾದಕರು ತಮ್ಮ ಕನಸಿನಲ್ಲಿಯೂ ಊಹಿಸಿರಲಿಲ್ಲ, ಆದರೆ ದೇಶವು ಮೊದಲು ರಾಷ್ಟ್ರ ಎಂಬ ಕಲ್ಪನೆಯೊಂದಿಗೆ ಒಂದಾದಾಗ, ನಿರ್ಣಾಯಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಮತ್ತು ಫಲಿತಾಂಶಗಳನ್ನು ಸಾಧಿಸಲಾಗುತ್ತದೆ” ಎಂದು ಹೇಳಿದರು.
ಆಪರೇಷನ್ ಸಿಂಧೂರ್ ಕೇವಲ ಹೆಸರಾಗಿರಲಿಲ್ಲ, ಬದಲಾಗಿ ಕೋಟ್ಯಂತರ ಜನರ ಭಾವನೆಗಳ ಪ್ರತಿಬಿಂಬ ಮತ್ತು ನ್ಯಾಯಕ್ಕಾಗಿ ಪ್ರತಿಜ್ಞೆಯಾಗಿತ್ತು.ಭಯೋತ್ಪಾದಕರನ್ನು ನಿರ್ನಾಮ ಮಾಡಲು ನಾವು ಪಡೆಗಳಿಗೆ ಮುಕ್ತ ಸ್ವಾತಂತ್ರ್ಯವನ್ನು ನೀಡಿದ್ದೇವೆ. ಇಂದು, ಎಲ್ಲಾ ಭಯೋತ್ಪಾದಕ ಶಿಬಿರಗಳು ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಂದ ‘ಸಿಂಧೂರ’ವನ್ನು ಅಳಿಸಿಹಾಕುವುದರ ಪರಿಣಾಮವನ್ನು ಅರ್ಥಮಾಡಿಕೊಂಡಿವೆ” ಎಂದು ಅವರು ಹೇಳಿದರು.

ಸೈನಿಕರಿಗೆ ಸಲಾಂ ಎಂದ ಮೋದಿ :
ಕಳೆದ ಕೆಲವು ದಿನಗಳಲ್ಲಿ ನಾವೆಲ್ಲರೂ ದೇಶದ ಸಾಮರ್ಥ್ಯ ಮತ್ತು ತಾಳ್ಮೆಯನ್ನು ನೋಡಿದ್ದೇವೆ. ನಾನು ಸಶಸ್ತ್ರ ಪಡೆಗಳು, ಮಿಲಿಟರಿ, ಗುಪ್ತಚರ ಸಂಸ್ಥೆ ಮತ್ತು ವಿಜ್ಞಾನಿಗಳಿಗೆ ವಂದಿಸುತ್ತೇನೆ.
ಇಂದು, ನಾನು (ಸಶಸ್ತ್ರ ಪಡೆಗಳ) ಈ ಶೌರ್ಯ, ಶೌರ್ಯ, ಧೈರ್ಯವನ್ನು ನಮ್ಮ ದೇಶದ ಪ್ರತಿಯೊಬ್ಬ ತಾಯಿಗೆ, ದೇಶದ ಪ್ರತಿಯೊಬ್ಬ ಸಹೋದರಿಗೆ ಮತ್ತು ದೇಶದ ಪ್ರತಿಯೊಬ್ಬ ಪುತ್ರಿಗೆ ಅರ್ಪಿಸುತ್ತೇನೆ.

ಏಪ್ರಿಲ್ 22 ರಂದು, ಪಹಲ್ಗಾಮ್‌ನಲ್ಲಿ, ಭಯೋತ್ಪಾದಕರು ತೋರಿಸಿದ ಅನಾಗರಿಕತೆ ದೇಶ ಮತ್ತು ಜಗತ್ತನ್ನು ಬೆಚ್ಚಿಬೀಳಿಸಿದೆ. ಎಲೆಗಳನ್ನು ಆಚರಿಸುತ್ತಿದ್ದ ಆ ಮುಗ್ಧ ಜನರನ್ನು ಅವರ ಧರ್ಮದ ಬಗ್ಗೆ ಕೇಳಿದ ನಂತರ ಅವರ ಕುಟುಂಬಗಳ ಮುಂದೆ ಕೊಲ್ಲಲಾಯಿತು.

ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಮತ್ತು ಇಂದು ಪ್ರತಿಯೊಂದು ಭಯೋತ್ಪಾದಕ, ಪ್ರತಿಯೊಂದು ಭಯೋತ್ಪಾದಕ ಸಂಘಟನೆಯು ನಮ್ಮ ಮಹಿಳೆಯರ ಹಣೆಯಿಂದ ‘ಸಿಂಧೂರ’ ತೆಗೆದರೆ ಆಗುವ ಪರಿಣಾಮಗಳನ್ನು ಅರಿತುಕೊಂಡಿದೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ದಾಳಿ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಅವರ ಪಾತ್ರಕ್ಕಾಗಿ ಧೈರ್ಯಶಾಲಿ ಸಶಸ್ತ್ರ ಪಡೆಗಳು, ಗುಪ್ತಚರ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಗೆ ನಾನು ನಮಿಸುತ್ತೇನೆ.

ಇಂದು, ಪ್ರತಿಯೊಬ್ಬ ಭಯೋತ್ಪಾದಕ, ಪ್ರತಿಯೊಂದು ಭಯೋತ್ಪಾದಕ ಸಂಘಟನೆಯು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹಣೆಯ ಮೇಲಿನ ಸಿಂಧೂರವನ್ನು ತೆಗೆದಾಗ ಏನಾಗುತ್ತದೆ ಎಂದು ತಿಳಿದಿದೆ” ಎಂದು ಭಯೋತ್ಪಾದಕ ಗುಂಪುಗಳಿಗೆ ಕಠಿಣ ಸಂದೇಶವನ್ನು ಕಳುಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಏಪ್ರಿಲ್ 22 ರ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ ನಂತರ ಪ್ರಧಾನಿಯವರ ಸಂದೇಶ ಬಂದಿದೆ. ಆಪರೇಷನ್ ಸಿಂಧೂರ್ ಎಂಬ ಸಂಕೇತನಾಮ ಹೊಂದಿರುವ ಈ ಕಾರ್ಯಾಚರಣೆಯನ್ನು ಮೇ 7 ರ ಮುಂಜಾನೆ ಪ್ರಾರಂಭಿಸಲಾಯಿತು ಮತ್ತು ಅದು ಮುಂದುವರೆದಿದೆ ಎಂದರು.

ಭಯೋತ್ಪಾದಕರು ನಮ್ಮ ಸಹೋದರಿಯರ ‘ಸಿಂದೂರ್’ ಅನ್ನು ತೆಗೆದುಹಾಕಿದರು. ಅದಕ್ಕಾಗಿಯೇ ಭಾರತವು ಭಯೋತ್ಪಾದಕ ಕೇಂದ್ರ ಕಚೇರಿಯನ್ನು ನಾಶಮಾಡಿತು. ಭಾರತದ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯಾನಕ ಭಯೋತ್ಪಾದಕರನ್ನು ಕೊಲ್ಲಲಾಯಿತು. ಭಾರತದ ವಿರುದ್ಧ ಬಹಿರಂಗವಾಗಿ ಪಿತೂರಿ ನಡೆಸುತ್ತಿದ್ದ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಬಹಿರಂಗವಾಗಿ ಸುತ್ತಾಡುತ್ತಿದ್ದರು, ಆದರೆ ಭಾರತ ಅವರನ್ನು ಒಂದೇ ಬಾರಿಗೆ ಹತ್ಯೆ ಮಾಡಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ಕ್ರಮಗಳು ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ.ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ; ಇದು ಕೋಟ್ಯಂತರ ಭಾರತೀಯರ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಆಪರೇಷನ್ ಸಿಂದೂರ್ ನ್ಯಾಯದ ಗಂಭೀರ ಪ್ರತಿಜ್ಞೆಯಾಗಿದೆ.”

ಸರ್ಕಾರವು ಸಶಸ್ತ್ರ ಪಡೆಗಳಿಗೆ ನೀಡಿದ ಸ್ಪಷ್ಟ ಆದೇಶದ ಬಗ್ಗೆ ಮಾತನಾಡಿದ ಅವರು, “ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಾವು ನಮ್ಮ ಪಡೆಗಳಿಗೆ ಮುಕ್ತ ಹಸ್ತವನ್ನು ನೀಡಿದ್ದೇವೆ” ಎಂದು ಹೇಳಿದರು.

ನಮ್ಮ ವೈರಿಗಳಿಗೆ ಭಾರತೀಯ ಮಹಿಳೆಯರ ಸಿಂದೂರ ಅಳಿಸಿದರೆ ಏನಾಗುತ್ತದೆ ಎನ್ನುವ ಪಾಠ ಗೊತ್ತಾಗಿದೆ. ಸಿಂದೂರ ಎನ್ನುವುದು ಸಾಮಾನ್ಯದ ಸಂಗತಿ ಅಲ್ಲ. ಆಪರೇಷನ್ ಸಿಂದೂರ್ (Operation Sindoor) ನ್ಯಾಯದ ಅಖಂಡ ಪ್ರತಿಜ್ಞೆ ಆಗಿದೆ. ವೈರಿಗಳು ಆಪರೇಷನ್ ಸಿಂದೂರ ಇಷ್ಟು ಕಟುವಾಗಿರುತ್ತದೆ ಎಂದು ಎಣಿಸಿರಲಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಹೈಲೈಟ್ಸ್ :

*ಆಪರೇಷನ್ ಸಿಂಧೂರ್‌ನಲ್ಲಿ (Operation Sindoor) ಶೌರ್ಯ ಪ್ರದರ್ಶಿಸಿದ ಸೈನಿಕರಿಗೆ ನಮನ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ (PM Modi) ತಮ್ಮ ಭಾಷಣವನ್ನು ಪ್ರಾರಂಭಿಸಿದರು.

*ಭಾರತೀಯ ಮೂರು ಸೇನೆಗಳು, ತಂತ್ರಜ್ಞರು ಮತ್ತು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು. ದೇಶದ ಜನರು, ತಾಯಂದಿರಿಗೆ ಆಪರೇಷನ್ ಸಿಂದೂರವನ್ನು ಅರ್ಪಿಸುತ್ತೇನೆ. ರಜೆ ಹಿನ್ನೆಲೆ ಪಹಲ್ಗಾಮ್ ನಲ್ಲಿ ಕುಟುಂಬದೊಂದಿಗೆ ಜನರು ಸಮಯ ಕಳೆಯುತ್ತಿದ್ದರು. ಇಲ್ಲಿಗೆ ಬಂದ ಉಗ್ರರು, ಧರ್ಮ ಕೇಳಿ ಕುಟುಂಬಸ್ಥರ ಮುಂದೆಯೇ ಕೊಂದರು. ಈ ಮೂಲಕ ದೇಶದ ಐಕ್ಯತೆಯನ್ನು ಕದಡುವ ಪ್ರಯತ್ನ ಮಾಡಲಾಯ್ತು. ಈ ಉಗ್ರ ದಾಳಿಗೆ ಪ್ರತೀಕಾರ ಬೇಕೆಂದು ಇಡೀ ದೇಶದ ಜನರು ಒಗ್ಗಟ್ಟಿನಿಂದ ಆಗ್ರಹಿಸಿದ್ದರು.

*ಭಯೋತ್ಪಾದನೆಯನ್ನು ಮಣ್ಣಿನಲ್ಲಿ ಸೇರಿಸಲಾಗುವುದು ಎಂದು ನಾವು ದೇಶದ ಜನತೆಗೆ ಮಾತು ನೀಡಿದ್ದೇವೆ. ನಮ್ಮ ದೇಶದ ಮಹಿಳೆಯರ ಸಿಂದೂರವನ್ನು ಅಳಿಸಿದ್ರೆ ಏನಾಗುತ್ತೆ ಎಂದು ಆಪರೇಷನ್ ಸಿಂದೂರ ಮೂಲಕ ಉತ್ತರ ನೀಡಲಾಗಿದೆ.

*ಮೇ 6ರ ರಾತ್ರಿ, ಮೇ 7ರ ಬೆಳಗಿನ ಜಾವ ಆಪರೇಷನ್ ಸಿಂದೂರ ಕಾರ್ಯಚರಣೆ ನಡೆಸಲಾಯ್ತು. ನಾವು ನೇರವಾಗಿ ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಲಾಯ್ತು. ಭಾರತ ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಪಾಕಿಸ್ತಾನ ಕಲ್ಪನೆಯೂ ಮಾಡಿಕೊಂಡಿರಲಿಲ್ಲ.

*ಆಪರೇಷನ್ ಸಿಂಧೂರ್ ಇಡೀ ಭಾರತದ ಭಾವನೆಗಳ ಪ್ರತೀಕ. ಮೇ 6ರ ರಾತ್ರಿ ಹಾಗೂ ಮೇ 7ರ ನಡುವಿನ ಮಧ್ಯರಾತ್ರಿ ಇಡೀ ಜಗತ್ತು ನಮ್ಮ ಪ್ರತಿಜ್ಞೆ ಏನಾಗಿತ್ತು ಎಂಬುದನ್ನು ಕಣ್ಣಾರೆ ನೋಡಿತು. ಪಾಕಿಸ್ತಾನದ 9 ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಿದೆವು. ಅವರು ಇದನ್ನು ಕನಸಲ್ಲೂ ಎಣಿಸಿರಲಿಲ್ಲ. ಆದರೆ, ನಮ್ಮ ನಿರ್ಧಾರ ಸ್ಪಷ್ಟವಾಗಿತ್ತು. ನಮಗೆ ದೇಶ ಮೊದಲು ಆಗಿತ್ತು. ಯಾವಾಗ ಇಂಥ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತೋ ಆಗ ಇಂಥ ದಾಳಿಗಳನ್ನು ನಡೆಸಬೇಕಾಗುತ್ತದೆ.

*ನಾವು ಹೊಡೆದುರುಳಿಸಿರುವ ಉಗ್ರರ ತರಬೇತಿ ಕೇಂದ್ರಗಳು ಇಡೀ ಜಗತ್ತಿನ ಉಗ್ರರಿಗೆ ವಿಶ್ವವಿದ್ಯಾಲಯಗಳಿದ್ದಂತೆ. ಜಗತ್ತಿನಲ್ಲಿ ಇದುವರೆಗೆ ನಡೆದಿರುವ ಉಗ್ರರ ದಾಳಿಗಳಿಗೆ ಈ ತರಬೇತಿ ಕೇಂದ್ರಗಳೊಂದಿಗೆ ಒಂದಲ್ಲ ಒಂದು ರೀತಿ ನಂಟು ಹೊಂದಿರುವಂಥವು. ಹಾಗಾಗಿಯೇ ಅಂಥ 100ಕ್ಕೂ ಹೆಚ್ಚು ಉಗ್ರರನ್ನು ಅವರ ವಿಶ್ವವಿದ್ಯಾಲಯಗಳೊಂದಿಗೇ ಹೊಡೆದುಹಾಕಿದ್ದೇವೆ.

*ಅವರೆಲ್ಲರೂ ಪಾಕಿಸ್ತಾನದಲ್ಲಿ ಆರಾಮಾಗಿ ಓಡಾಡಿಕೊಂಡಿದ್ದವರು. ಭಾರತದ ವಿರುದ್ಧ ಷಡ್ಯಂತ್ರಗಳನ್ನು ಮಾಡುತ್ತಿದ್ದರು. ಅಂಥವರನ್ನೆಲ್ಲಾ ಒಂದೇ ರಾತ್ರಿಯಲ್ಲಿ ಇಲ್ಲವಾಗಿಸಿದ್ದೇವೆ. ಅದರಿಂದ ಪಾಕಿಸ್ತಾನ ಹತಾಶೆಗೆ ಜಾರಿತು. ದುಃಖದ ಮಡುವಿನಲ್ಲಿ ಮುಳುಗಿತು. ಆದರೆ, ಅಂಥ ಸಂದರ್ಭದಲ್ಲಿ ಪಾಕಿಸ್ತಾನ ಮತ್ತೊಂದು ತಪ್ಪು ಮಾಡಿತು. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟಕ್ಕೆ ಸಾಥ್ ನೀಡುವ ಬದಲು ನಮ್ಮ ವಿರುದ್ಧವೇ ದಾಳಿ ಮಾಡಿತು.

*ಇಷ್ಟಾದರೂ ಪಾಕಿಸ್ತಾನ ತನ್ನ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿತು. ಇವುಗಳನ್ನು ನಾಶಪಡಿಸುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಲಾಗಿದೆ. ಡ್ರೋನ್ ಮತ್ತು ಕ್ಷಿಪಣಿ ದಾಳಿಯೂ ಭಯೋತ್ಪಾದಕ ಚಟುವಟಿಕೆ ಎಂದು ಹೇಳಿದರು.

*ಭಯೋತ್ಪಾದಕ ಪ್ರಧಾನ ಕಚೇರಿಯನ್ನೇ ಭಾರತ ನೆಲಸಮಗೊಳಿಸಿದೆ. ಉಗ್ರರ ವಿದ್ಯಾಲಯಗಳಾಗಿದ್ದ ತಾಣಗಳನ್ನು ಭಾರತ ಉಡೀಸ್ ಮಾಡಿದೆ. ಭಾರತ ಪ್ರತೀಕಾರದಿಂದ ಪಾಕಿಸ್ತಾನ ಅಕ್ಷರಷಃ ಕಂಗಾಲು ಆಗಿತ್ತು. ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಭಾರತದ ಶಾಲಾ ಕಾಲೇಜು, ಮಸೀದಿ, ಗುರುದ್ವಾರ, ಚರ್ಚ್, ನಾಗರೀಕರ ನಿವಾಸಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಪಾಕ್‌ನಿಂದ ಹಾರಿ ಬಂದ ಡ್ರೋನ್‌ಗಳನ್ನು ಆಕಾಶದಲ್ಲಿಯೇ ಭಾರತ ನಾಶ ಮಾಡಿದೆ.

*ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಾಕ್ ಸೊಕ್ಕನ್ನು ಅಡಗಿಸಲಾಗಿದೆ. ಭಾರತ ಪ್ರತೀಕಾರಕ್ಕೆ ಬೆಚ್ಚಿದ ಪಾಕಿಸ್ತಾನ ಹಲವು ರಾಷ್ಟ್ರಗಳ ಮುಂದೆ ಹೋಗಿತ್ತು. ಭಾರತದ ಡಿಸಿಎಂಒಗೆ ಕರೆ ಮಾಡುವ ಮುನ್ನವೇ ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಗಿತ್ತು.

*ರಣರಂಗದಲ್ಲಿ ಪಾಕಿಸ್ತಾನಕ್ಕೆ ಭಾರತ ಎಂದಿಗೂ ಸೋತಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಜೊತೆಯಾಗಲಾರದು. ನೀರು ಮತ್ತು ರಕ್ತ ಜೊತೆಯಾಗಿ ಹರಿಯಲು ಸಾಧ್ಯವಿಲ್ಲ.

*ಪಾಕಿಸ್ತಾನದ ಜೊತೆ ಮಾತುಕತೆ ಅಂದ್ರೆ ಅದು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಯೋತ್ಪಾದನೆ ನಿರ್ಮೂಲನೆಗೆ ಮಾತ್ರ ಎಂದು ಮಧ್ಯಸ್ಥಿಕೆಗೆ ಬರುತ್ತಿರುವ ರಾಷ್ಟ್ರಗಳಿಗೂ ಪ್ರಧಾನಿ ನರೇಂದ್ರ ಮೋದಿ ಸಂದೇಶ ರವಾನಿಸಿದರು.

*ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಾಕ್ ಸೊಕ್ಕನ್ನು ಅಡಗಿಸಲಾಗಿದೆ. ಭಾರತ ಪ್ರತೀಕಾರಕ್ಕೆ ಬೆಚ್ಚಿದ ಪಾಕಿಸ್ತಾನ ಹಲವು ರಾಷ್ಟ್ರಗಳ ಮುಂದೆ ಹೋಗಿತ್ತು. ಭಾರತದ ಡಿಸಿಎಂಒಗೆ ಕರೆ ಮಾಡುವ ಮುನ್ನವೇ ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಗಿತ್ತು.

*ರಣರಂಗದಲ್ಲಿ ಪಾಕಿಸ್ತಾನಕ್ಕೆ ಭಾರತ ಎಂದಿಗೂ ಸೋತಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಜೊತೆಯಾಗಲಾರದು. ನೀರು ಮತ್ತು ರಕ್ತ ಜೊತೆಯಾಗಿ ಹರಿಯಲು ಸಾಧ್ಯವಿಲ್ಲ.

*ಪಾಕಿಸ್ತಾನದ ಜೊತೆ ಮಾತುಕತೆ ಅಂದ್ರೆ ಅದು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಯೋತ್ಪಾದನೆ ನಿರ್ಮೂಲನೆಗೆ ಮಾತ್ರ ಎಂದು ಮಧ್ಯಸ್ಥಿಕೆಗೆ ಬರುತ್ತಿರುವ ರಾಷ್ಟ್ರಗಳಿಗೂ ಪ್ರಧಾನಿ ನರೇಂದ್ರ ಮೋದಿ ಸಂದೇಶ ರವಾನಿಸಿದರು.

*ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟೈಕ್ ನಂತರ ನಾವು ಆಪರೇಷನ್ ಸಿಂಧೂರ್ ಇನ್ನು ನಮ್ಮ ಹೊಸ ನೀತಿಯಾಗಲಿರದೆ. ರಣರಂಗದಲ್ಲಿ ನಮ್ಮ ಆಪರೇಷನ್ ಸಿಂಧೂರ್ ನ್ಯೂ ನಾರ್ಮಲ್ ಎಂದಿಸಿದೆ. ಮೊದಲನೆಯಾದಾಗಿ, ಭಾರತದ ಮೇಲೆ ಮತ್ತೆ ದಾಳಿ ನಡೆಸಿದರೆ ಮುಲಾಜಿಲ್ಲದೆ ಜವಾಬು ನೀಡುತ್ತೇವೆ. ಯಾವ ಜಾಗದಿಂದ ಉಗ್ರವಾದಿಗಳು ಬಂದಿದ್ದಾರೋ ಆ ಜಾಗಗಳೇ ಹೋಗಿ ನೇರವಾಗಿ ಹೊಡೆಯುತ್ತೇವೆ.ಎರಡನೆಯಾದ್ದಾಗಿ, ಪರಮಾಣು ಬಾಂಬ್ ಬೆದರಿಕೆಯನ್ನು ಸಹಿಸುವುದಿಲ್ಲ.

*ಮೂರನೇಯದಾಗಿ, ನಾವು ದೇಶ ಹಾಗೂ ಭಯೋತ್ಪಾದನೆಯನ್ನು ಪ್ರತ್ಯೇಕವಾಗಿ ನಾವಿನ್ನು ನೋಡುವುದಿಲ್ಲ. ಯಾಕೆಂದರೆ, ಆಪರೇಷನ್ ಸಿಂದೂರ್ ನಲ್ಲಿ ಮಡಿದ ಉಗ್ರರಿಗೆ ಸರ್ಕಾರಿ ಗೌರವಗಳೊಂದಿಗೆ ಪಾಕಿಸ್ತಾನದಲ್ಲಿ ಮಣ್ಣುಮಾಡಲಾಗಿದೆ. ಅದರಲ್ಲಿ ಪಾಕಿಸ್ತಾನ ಸೇನಾಧಿಕಾರಿಗಳೇ ಬಾಗವಹಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದನಾ ರಾಷ್ಟ್ರ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಮತ್ತೊಂದಿಲ್ಲ.

*ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ನಮ್ಮ ಸೇನಾ ಶಕ್ತಿಯನ್ನು ಇಡೀ ಜಗತ್ತಿಗೆ ಪಸರಿಸಿದೆ. ನಮ್ಮ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ತಾಕತ್ತೇನು ಎಂಬುದನ್ನು ಜಗತ್ತಿಗೆ ತೋರಿಸಿದೆ. 21ನೇ ಶತಮಾನದಲ್ಲಿ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಶಕ್ತಿ ಏನೆಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಇದು ನಿಜಕ್ಕೂ ಹೆಮ್ಮೆಯ ವಿಚಾರ.

*ಇಂಥ ಸಂದರ್ಭಗಳಲ್ಲಿ ನಮ್ಮ ಏಕತೆಯೇ ನಮ್ಮ ಶಕ್ತಿ. ನಿಜ… ಈ ಯುಗ ಯುದ್ಧದ ಯುಗ ಅಲ್ಲ. ಆದರೆ, ಈ ಯುಗ ಆತಂಕವಾದಿಗಳ ಯುಗವೂ ಅಲ್ಲ. ಉಗ್ರವಾದಿಗಳ ವಿರೋಧ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿರುತ್ತೇವೆ. ಇದು ನಾವು ಜಗತ್ತಿಗೆ ಕೊಡುತ್ತಿರುವ ಗ್ಯಾರಂಟಿ.

*ಪಾಕಿಸ್ತಾನ ಸೇನೆ, ಪಾಕಿಸ್ತಾನ ಸರ್ಕಾರ ಆತಂಕವಾಗಿಗಳಿಗೆ ಇಂದು ಆಶ್ರಯ ಕೊಟ್ಟಿವೆ. ಆದರೆ, ಅದೇ ಆತಂಕವಾದಿಗಳು ಪಾಕಿಸ್ತಾನವನ್ನು ಮುಗಿಸುತ್ತೇವೆ. ಹಾಗಾಗಿ, ಈಗಲಾದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳಲಿ. ಇದು ಬಿಟ್ಟು ಪಾಕಿಸ್ತಾನಕ್ಕೆ ಬೇರೆ ದಾರಿಯಿಲ್ಲ. ಅಲ್ಲದೆ, ಟೆರರ್ ಆ್ಯಂಡ್ ಟಾಕ್ ಎರಡೂ ಒಟ್ಟಿಗೆ ಸಾಗುವುದಿಲ್ಲ. ಟೆರರ್ ಆ್ಯಂಡ್ ಟ್ರೇಡ್ ಒಟ್ಟಿಗೆ ಆಗದು. ನೀರು ಹಾಗೂ ರಕ್ತ ಒಟ್ಟಿಗೇ ಹರಿಯುವುದಿಲ್ಲ. ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಮಾತುಕತೆ ಆಡಿದರೆ ನಾವು ಭಯೋತ್ಪಾದನೆ ಬಗ್ಗೆ ಮಾತ್ರವೇ ಮಾತಾಡುತ್ತೇವೆ. ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೇ ಮಾತನಾಡುತ್ತೇವೆ.

*ಇಂದು ಬುದ್ಧ ಪೂರ್ಣಿಮೆ. ಭಗವಾನ್ ಬುದ್ಧನು ನಮಗೆ ಶಾಂತಿಯ ಮಾರ್ಗ ತೋರಿಸಿದ್ದಾರೆ. ಮಾನವರು ಶಾಂತಿಯ ಮಾರ್ಗದಲ್ಲಿ ಮುನ್ನಡೆಯಬೇಕು. ಇಂಥ ಸಂದರ್ಭದಲ್ಲಿ ಭಾರತವು ಶಕ್ತಿಶಾಲಿಯಾಗಿರುವುದು ಅತ್ಯಂತ ಅವಶ್ಯಕ. ಅಷ್ಟೇ ಅಲ್ಲ ನಮ್ಮ ಮೇಲೆ ಬಿದ್ದವರಿಗೆ ಬುದ್ಧಿ ಕಲಿಸುವುದರ ಅವಶ್ಯಕತೆಯೂ ಇದೆ.

RELATED ARTICLES

Latest News