ನವದೆಹಲಿ, ನ.14- ವಿಶ್ವವನ್ನೇ ಕಾಡಿದ್ದ ಕೋವಿಡ್-19 ಮಹಾಮಾರಿ ವೇಳೆ ದ್ವೀಪರಾಷ್ಟ್ರ ಕೆರೆಬಿಯನ್ಗೆ ನೀಡಿದ ಕೊಡುಗೆಗಳನ್ನು ಗುರುತಿಸಿ ಕಾಮನ್ ವೆಲ್ತ್ ಆಫ್ ಡೊಮೆನಿಕ, ಪ್ರಧಾನಿ ನರೇಂದ್ರಮೋದಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಡೊಮೆನಿಕಾ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದೆ.
ಭಾರತ ಮತ್ತು ಡೊಮೆನಿಕಾ ನಡುವಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿಗೆ ಉತ್ತರ ಅಮೆರಿಕಾದ ದ್ವೀಪ ರಾಷ್ಟ್ರವಾದ ಡೊಮೆನಿಕಾವು ಅಲ್ಲಿನ ಅತ್ಯುನ್ನತ ಡೊಮೆನಿಕಾ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಡೊಮೆನಿಕಾದ ಪ್ರಧಾನಿ ಕಚೇರಿ, ಕಾಮನ್ವೆಲ್ತ್ ಆಫ್ ಡೊಮೆನಿಕಾ ತನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಭಾರತದ ಪ್ರಧಾನಿ ನರೇಂದ್ರಮೋದಿ ಅವರಿಗೆ ನೀಡುತ್ತಿದ್ದು, ಕೋವಿಡ್-19 ಸಮಯದಲ್ಲಿ ಅವರು ಡೊಮಿನಿಕಾಗೆ ನೀಡಿದ ಕೊಡುಗೆಗಳನ್ನು ಗುರುತಿಸುತ್ತದೆ. ಸಾಂಕ್ರಾಮಿಕ ಮತ್ತು ಭಾರತ ಮತ್ತು ಡೊಮಿನಿಕಾ ನಡುವಿನ ಪಾಲುದಾರಿಕೆಯನ್ನು ಬಲಪಡಿಸಲು ಅವರ ಸಮರ್ಪಣೆಯನ್ನು ಸರಿಸುತ್ತದೆ ಎಂದು ಹೇಳಿದೆ.