ನವದೆಹಲಿ, ಫೆ.24– ಪಿಎಂ-ಕಿಸಾನ್ ಯೋಜನೆಯಡಿ ಸುಮಾರು 3.5 ಲಕ್ಷ ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ- ಕಿಸಾನ್ ಯೋಜನೆ ಜಾರಿಯಾಗಿ ಆರು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಎಕ್ಸ್ ಮಾಡಿರುವ ಮೋದಿ ಅವರು, ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರದ ಪ್ರಯತ್ನಗಳಿಂದಾಗಿ ಕೃಷಿ ಕ್ಷೇತ್ರವು ವೇಗವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿಸಿದ್ದಾರೆ.
ಲಕ್ಷಾಂತರ ಸಣ್ಣ ರೈತರಿಗೆ ಆರ್ಥಿಕ ನೆರವು ಮಾರುಕಟ್ಟೆಗೆ ಪ್ರವೇಶವನ್ನು ಹೆಚ್ಚಿಸಿದೆ. ಅವರು ಮಾಡಿದ ವೆಚ್ಚ ಕಡಿಮೆಯಾಗಿದೆ ಮತ್ತು ಆದಾಯ ಹೆಚ್ಚಾಗಿದೆ ಎಂದು ಅವರು ಹೇಳಿದರು.
ನಮ್ಮ ಸರ್ಕಾರ ಇದೇ ರೀತಿ ರೈತೋಪಕಾರಿ ಯೋಜನೆಗಳನ್ನು ಮುಂದುವರೆಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.