Monday, November 25, 2024
Homeರಾಷ್ಟ್ರೀಯ | Nationalದೇಶದಲ್ಲಿ ಶೇ.40ರಷ್ಟು ಸಂಪತ್ತು ಶೇ.1ರಷ್ಟು ಜನರಿಗೆ ಹೋಗಿದೆ : ಕಾಂಗ್ರೆಸ್

ದೇಶದಲ್ಲಿ ಶೇ.40ರಷ್ಟು ಸಂಪತ್ತು ಶೇ.1ರಷ್ಟು ಜನರಿಗೆ ಹೋಗಿದೆ : ಕಾಂಗ್ರೆಸ್

ನವದೆಹಲಿ,ಏ. 23 (ಪಿಟಿಐ)- ದೇಶದಲ್ಲಿ ಸೃಷ್ಟಿಯಾಗಿರುವ ಶೇ.40 ರಷ್ಟು ಸಂಪತ್ತು ಕೇವಲ ಶೇ.1 ರಷ್ಟಿರುವ ಜನಸಂಖ್ಯೆಗೆ ಹೋಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅದು ಜನರ ಸಂಪತ್ತನ್ನು ನುಸುಳುಕೋರರಿಗೆ ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಮರುಹಂಚಿಕೆ ಮಾಡುವುದಾಗಿ ಮೋದಿ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಇದೀಗ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‍ನಲ್ಲಿ ಪ್ರಧಾನಿ ನಿಮಗೆ ಎಂದಿಗೂ ಹೇಳುವುದಿಲ್ಲ: 2012 ರಿಂದ 2021 ರವರೆಗೆ ದೇಶದಲ್ಲಿ ಸೃಷ್ಟಿಯಾದ ಶೇ.40ಕ್ಕಿಂತ ಹೆಚ್ಚು ಸಂಪತ್ತು ಕೇವಲ ಶೇ.1ರಷ್ಟಿರುವ ಜನಸಂಖ್ಯೆಗೆ ಹೋಗಿದೆ.

ದೇಶದ ಒಟ್ಟು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‍ಟಿ) ಸರಿಸುಮಾರು ಶೇ.64 ರಷ್ಟು ಬಡವರು, ಕೆಳ ಮಧ್ಯಮ ವರ್ಗದವರು ಮತ್ತು ಮಧ್ಯಮ ವರ್ಗದವರಿಂದ ಬರುತ್ತದೆ ಎಂದು ಅವರು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಮಾರಾಟವಾದ ಹೆಚ್ಚಿನ ಸಾರ್ವಜನಿಕ ಆಸ್ತಿಗಳು ಮತ್ತು ಸಂಪನ್ಮೂಲಗಳು ಒಂದು ಅಥವಾ ಎರಡು ಕಂಪನಿಗಳಿಗೆ ಹೋಗಿವೆ – ಆರ್ಥಿಕತೆಯ ಬೆಳೆಯುತ್ತಿರುವ ಏಕಸ್ವಾಮ್ಯವು ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಅರ್ಥಶಾಸಜ್ಞರು ತೋರಿಸಿದ್ದಾರೆ ಎಂದು ಅವರು ಆರೋಪಿಸಿದರು.

RELATED ARTICLES

Latest News