ನವದೆಹಲಿ, ಡಿ.22- ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರತಿಷ್ಠಿತ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ನಂತರ ದಿಢೀರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರಿಗೆ ಸುದೀರ್ಘ ಪತ್ರ ಬರೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ತಮ ಎಕ್‌್ಸ ಖಾತೆಯ ಮೂಲಕ ಚೆನ್ನೈ ಮೂಲದ ಸ್ಪಿನ್ ದಿಗ್ಗಜನನ್ನು ನರೇಂದ್ರ ಮೋದಿ ಅವರು ಶ್ಲಾಘಿಸಿದ್ದು, `ಈ ಪತ್ರವು ನಿಮ ಆರೋಗ್ಯ ಹಾಗೂ ಮುಂದಿನ ಜೀವನಕ್ಕೆ ಹೆಚ್ಚು ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
2022ರ ವಿಶ್ವಕಪ್ ಅವಿಸರಣೀಯ:
ರವಿಚಂದ್ರನ್ ಅಶ್ವಿನ್ ಅವರು ತಮ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಹಲವಾರು ಪಂದ್ಯಗಳ ಮೂಲಕ ಜನರ ಗಮನ ಸೆಳೆದಿದ್ದಾರೆ. ಆದರೆ 2022ರ ಟಿ20-ಐ ವಿಶ್ವಕಪ್ ಟೂರ್ನಿಯಲ್ಲಿ ಆರ್. ಅಶ್ವಿನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ತೋರಿದ ಸಾಧನೆ ಅವಿಸರಣೀಯವಾಗಿದೆ’ ಎಂದು ಪ್ರಧಾನಿ ಗುಣಗಾನ ಮಾಡಿದ್ದಾರೆ.
ಕೇರಂ ಎಸೆತದಿಂದ ಎಲ್ಲರನ್ನೂ ಬೌಲ್ಡ್ ಮಾಡಿದ್ದೀರಿ:
ನಿಮ ಕ್ರಿಕೆಟ್ ಜೀವನದಲ್ಲಿ ಇನ್ನೂ ಹಲವು ಪಂದ್ಯಗಳನ್ನು ಆಡಿ ಆಫ್- ಬ್ರೇಕ್‌್ಸ ಎಸೆತದಿಂದ ಸಾಕಷ್ಟು ಆಟಗಾರರನ್ನು ಖೆಡ್ಡಾಕ್ಕೆ ಕೆಡವುತ್ತೀರಿ ಎಂದು ಸಾಕಷ್ಟು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ನೀವು ನಿವೃತ್ತಿ ಎಂಬ ಕೇರಂ ಬಾಲ್ ಅನ್ನು ಎಸೆದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದೀರಿ. ಆದರೆ ನಿಮ ಕ್ರಿಕೆಟ್ ಜೀವನದಲ್ಲಿ ಭಾರತ ತಂಡದ ಪರ ಸಾಕಷ್ಟು ಮರೆಯಲಾಗದ ಪಂದ್ಯಗಳಲ್ಲಿ ಮಿಂಚುವ ಮೂಲಕ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದ್ದೀರಿ’ ಎಂದು ಮೋದಿ ಪ್ರಶಂಸಿಸಿದ್ದಾರೆ.
ಅಮ್ಮ ಆಸ್ಪತ್ರೆಯಲ್ಲಿದ್ದರೂ ದೇಶಕ್ಕಾಗಿ ಆಡಿದ್ದೀರಿ:
ದಕ್ಷಿಣ ಆಫ್ರಿಕಾದ ಸರಣಿಯ ವೇಳೆ ನಿಮ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ದೇಶಕ್ಕಾಗಿ ಆಡಿದ್ದೀರಿ. ತಾಯಿಯನ್ನು ಭೇಟಿ ಮಾಡಿದ ನಂತರ ಮತ್ತೆ ತಂಡವನ್ನು ಕೂಡಿಕೊಂಡಿದ್ದೀರಿ. ಚೆನ್ನೈನಲ್ಲಿ ಪ್ರವಾಹ ಉಂಟಾದ ಸಮಯದಲ್ಲೂ ಕೂಡ ನೀವು ಕುಟುಂಬದ ಬಗ್ಗೆ ಆಲೋಚಿಸದೆ ಟೀಮ್ ಇಂಡಿಯಾ ಪರ ಆಡಿದ್ದು ನಿಜಕ್ಕೂ ನಿಮ ಬದ್ಧತೆ ಬಿಂಬಿಸುತ್ತದೆ’ ಎಂದು ಪ್ರಧಾನಿ ಪ್ರಶಂಸಿಸಿದ್ದಾರೆ.
ಭಾರತದ ಗೆಲುವಿನಲ್ಲಿ ನಿಮ ಪಾತ್ರ ಅಪಾರ:
`ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೀವು ಒಟ್ಟಾರೆ 765 ವಿಕೆಟ್ ಪಡೆದಿರುವುದು ವಿಶೇಷವಾಗಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸರಣಿ ಶ್ರೇಷ್ಠ (11 ಬಾರಿ) ಪ್ರಶಸ್ತಿ ಪಡೆದಿರುವುದು ನೋಡಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಗೆಲುವಿನಲ್ಲಿ ನಿಮ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂಬುದು ತಿಳಿಯುತ್ತದೆ’ ಎಂದು ಸುದೀರ್ಘ ಪತ್ರದಲ್ಲಿ ಪ್ರಧಾನಿ ಮೋದಿ ಅವರು ಅಶ್ವಿನ್ ಅವರನ್ನು ಗುಣಗಾನ ಮಾಡಿದ್ದಾರೆ.