Monday, April 21, 2025
Homeರಾಷ್ಟ್ರೀಯ | Nationalಅಪ್ರಸ್ತುತ ವ್ಯವಸ್ಥೆಗಳಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ : ಪ್ರಧಾನಿ ಮೋದಿ ಅಭಿಪ್ರಾಯ

ಅಪ್ರಸ್ತುತ ವ್ಯವಸ್ಥೆಗಳಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ : ಪ್ರಧಾನಿ ಮೋದಿ ಅಭಿಪ್ರಾಯ

PM Modi's Inspiring Speech on Civil Services Day:

ನವದೆಹಲಿ, ಏ.21- ಅಪ್ರಸ್ತುತ ವ್ಯವಸ್ಥೆಗಳಲ್ಲಿ ನೀತಿ ರೂಪಿಸಲು ಮತ್ತು ಆಡಳಿತ ನಿರ್ವಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿಂದು ನಡೆದ 17ನೇ ಸಿವಿಲ್‌ ಸಿವಿಲ್‌ ಸರ್ವಿಸ್‌ ದಿನಾಚರಣೆಯ ಕಾರ್ಯಕ್ರಮದಲ್ಲಿ ನಾಗರಿಕ ಸೇವೆಯ ಮಹತ್ವದ ಕುರಿತು ಮಾತನಾಡಿದ ಅವರು, ಈ ವರ್ಷ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150ನೇ ಜಯಂತಿಯನ್ನು ಸ್ಮರಿಸಿದರು.

1947ರ ಏಪ್ರಿಲ್‌ 21ರಂದು ವಲ್ಲಭಭಾಯ್‌ ಪಟೇಲ್‌ ಅವರು ಆಡಳಿತಶಾಹಿಯ ಎಲ್ಲರನ್ನೂ ಭಾರತದ ಉಕ್ಕಿನ ಚೌಕಟ್ಟು ಎಂದು ಕರೆದಿದ್ದರು. ಸರ್ಕಾರಿ ನೌಕರರು ದೇಶಸೇವೆಯೇ ತಮ್ಮ ಆದ್ಯ ಕರ್ತವ್ಯ ಎಂದು ಭಾವಿಸಬೇಕು. ಪ್ರಜಾತಂತ್ರಾತ್ಮಕವಾಗಿ ಆಡಳಿತ ನಿರ್ವಹಿಸಬೇಕು. ಪ್ರಾಮಾಣಿಕತೆ, ಶಿಸ್ತು ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು. ರಾಷ್ಟ್ರ ಗುರಿಗಾಗಿ ಹಗಲು-ರಾತ್ರಿ ಸೇವೆ ಸಲ್ಲಿಸಬೇಕು ಎಂಬುದು ವಲ್ಲಭಭಾಯ್‌ ಪಟೇಲ್‌ ಅವರ ಕನಸಾಗಿತ್ತು. ಇಂದು ನಾವು ವಿಕಸಿತ ಭಾರತವನ್ನು ಸಾಕಾರಗೊಳಿಸುವತ್ತ ಸಾಗುತ್ತಿದ್ದೇವೆ ಎಂದರು.

ಸಣ್ಣ ಸಣ್ಣ ಬದಲಾವಣೆಗಳು ಆಗುವುದು ನಿಜವಾದ ಪ್ರಗತಿಯಲ್ಲ. ದೊಡ್ಡ ಮಟ್ಟದಲ್ಲಿ ಮತ್ತು ಸಕಾರಾತ್ಮಕವಾಗಿ ಪರಿಣಾಮ ಬೀರುವುದೇ ನಿಜವಾದ ಪ್ರಗತಿ. ಇವತ್ತು ನಾವು ರೂಪಿಸುತ್ತಿರುವ ನೀತಿಗಳು ಮತ್ತು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮುಂದಿನ ಸಾವಿರ ವರ್ಷದ ಭವಿಷ್ಯಕ್ಕೆ ಬುನಾದಿ ಹಾಕುತ್ತವೆ ಎಂದು ಹೇಳಿದರು.

ಭಾರತದ ಯುವಜನರು, ರೈತರು ಮತ್ತು ಮಹಿಳೆಯರ ಕನಸುಗಳು ಹೊಸ ಎತ್ತರಕ್ಕೆ ಹೋಗುತ್ತಿವೆ. ಇದನ್ನು ಆಶೋತ್ತರಗಳು ಈಡೇರಬೇಕಾದರೆ ಅಸಾಧಾರಣ ವೇಗದ ಪ್ರಗತಿ ಅವಶ್ಯಕ. ದೇಶದ ಪ್ರಗತಿಯಲ್ಲಿ ಯಾವ ಹಳ್ಳಿಯೂ, ಯಾವ ಕುಟುಂಬವೂ ಮತ್ತು ಯಾವ ನಾಗರಿಕನೂ ಹಿಂದುಳಿಯಬಾರದು. ಎಲ್ಲರ ಸಮಗ್ರ ಅಭ್ಯುದಯವಾಗಬೇಕು ಎಂದರು.

ಆಡಳಿತದಲ್ಲಿ, ಪಾರದರ್ಶಕತೆ ಯಲ್ಲಿ ಮತ್ತು ನಾವೀನ್ಯತೆಯಲ್ಲಿ ಭಾರತವು ಹೊಸ ಮಾದರಿ ಸ್ಥಾಪಿಸುತ್ತಿದೆ. ನಮ್ಮ ಯೋಜನೆಗಳು ಜನಸಾಮಾನ್ಯರನ್ನು ಎಷ್ಟರಮಟ್ಟಿಗೆ ತಲುಪುತ್ತದೆ. ಅದರ ವಾಸ್ತವ ಪರಿಣಾಮ ಏನು ಎಂಬುದು ಆಡಳಿತದ ಗುಣಮಟ್ಟದ ಸೂಚಕವಾಗಿರುತ್ತದೆ ಸರ್ಕಾರಿ ನೌಕರರಿಗೆ ಮೋದಿ ಕರೆ ನೀಡಿದರು.

RELATED ARTICLES

Latest News