Friday, November 22, 2024
Homeರಾಷ್ಟ್ರೀಯ | Nationalಗಾಯಕಿ ಸ್ವಸ್ತಿ ಮೆಹುಲ್ ರಚಿಸಿರುವ ಭಜನೆಗೆ ಮನಸೋತ ಮೋದಿ

ಗಾಯಕಿ ಸ್ವಸ್ತಿ ಮೆಹುಲ್ ರಚಿಸಿರುವ ಭಜನೆಗೆ ಮನಸೋತ ಮೋದಿ

ನವದೆಹಲಿ,ಜ.6- ಭಗವಾನ್ ಶ್ರೀರಾಮನ ಕುರಿತಂತೆ ಗಾಯಕಿ ಸ್ವಸ್ತಿ ಮೆಹುಲ್ ರಚಿಸಿರುವ ಭಜನೆ ಕೇಳಿದರೆ ಅದು ಧೀರ್ಘಕಾಲ ಕಿವಿಯಲ್ಲಿ ಅನುರಣಿಸುತ್ತದೆ ಮಾತ್ರವಲ್ಲ ರಾಮನ ಹಲವಾರು ಲೀಲೆಗಳನ್ನು ಮನಸ್ಸಿಗೆ ನಾಟುವಂತೆ ಹೇಳಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ದೇಶದೆಲ್ಲೇಡೆ ರಾಮ ನಾಮ ಜಪ ಆರಂಭವಾಗಿರುವ ಬೆನ್ನಲ್ಲೇ ಮೋದಿ ಅವರು ಎಕ್ಸ್‍ನಲ್ಲಿನ ಪೋಸ್ಟ್‍ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ನೀವು ಒಮ್ಮೆ ಸ್ವಸ್ತಿ ಜೀಯವರ ಈ ಭಜನೆಯನ್ನು ಕೇಳಿದರೆ, ಅದು ದೀರ್ಘಕಾಲದವರೆಗೆ ಕಿವಿಯಲ್ಲಿ ಅನುರಣಿಸುತ್ತದೆ. ಇದು ಕಣ್ಣುಗಳಲ್ಲಿ ಕಣ್ಣೀರು ಮತ್ತು ಮನಸ್ಸನ್ನು ಭಾವನೆಗಳಿಂದ ತುಂಬಿಸುತ್ತದೆ ಎಂದು ಮೋದಿ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಮೋದಿ ಪೋಸ್ಟ್ ಹಂಚಿಕೊಂಡ ಕೇವಲ ಒಂದು ಗಂಟೆಯಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಏತನ್ಮಧ್ಯೆ, ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಸಾವಿರಾರು ಗಣ್ಯರು, ಸಮಾಜದ ಎಲ್ಲಾ ವರ್ಗದ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ (ಶಿಶು ಭಗವಾನ್ ರಾಮ) ಅವರ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದ ವೈದಿಕ ಆಚರಣೆಗಳು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಅಂದರೆ ಜನವರಿ 16 ರಂದು ಪ್ರಾರಂಭವಾಗುತ್ತವೆ.

ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಟಿಕೆಟ್ ಪಡೆಯೋದು ಹೇಗೆ..?

ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಜನವರಿ 22 ರಂದು ರಾಮ್ ಲಲ್ಲಾ ಅವರ ಪ್ರತಿಷ್ಠಾಪನೆಯ ಮುಖ್ಯ ವಿವಿಧಾನಗಳನ್ನು ನಿರ್ವಹಿಸಲಿದ್ದಾರೆ. ಜನವರಿ 14 ರಿಂದ ಜನವರಿ 22 ರವರೆಗೆ ಅಯೋಧ್ಯೆಯು ಅಮೃತ ಮಹೋತ್ಸವವನ್ನು ಆಚರಿಸಲಿದೆ.

1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಯೋಧ್ಯೆಯಲ್ಲಿ ಸಾವಿರಾರು ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ಹಲವಾರು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ, ಅವರು ಮಹಾ ಸಮರ್ಪಣೆಗಾಗಿ ಉತ್ತರ ಪ್ರದೇಶದ ದೇವಾಲಯ ಪಟ್ಟಣಕ್ಕೆ ಆಗಮಿಸುವ ನಿರೀಕ್ಷೆಯಿದೆ.

RELATED ARTICLES

Latest News