Monday, October 7, 2024
Homeರಾಷ್ಟ್ರೀಯ | Nationalಮೋದಿ ಅಧಿಕಾರಕ್ಕೆ ಬಂದು 23 ವರ್ಷ: ಶಾ ಅಭಿನಂದನೆ

ಮೋದಿ ಅಧಿಕಾರಕ್ಕೆ ಬಂದು 23 ವರ್ಷ: ಶಾ ಅಭಿನಂದನೆ

ನವದೆಹಲಿ, ಅ. 7 (ಪಿಟಿಐ) ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆಯ ಸುದೀರ್ಘ ಪ್ರಯಾಣವು ಒಬ್ಬ ವ್ಯಕ್ತಿಯು ತನ್ನ ಇಡೀ ಜೀವನವನ್ನು ರಾಷ್ಟ್ರೀಯ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಹೇಗೆ ಮುಡಿಪಾಗಿಡಬಹುದು ಎಂಬ ಅನನ್ಯ ಸಮರ್ಪಣೆಯ ಸಂಕೇತವಾಗಿದೆ ಎಂದು ಕೇಂದ್ರ ಗಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 23 ವರ್ಷಗಳನ್ನು ಪೂರೈಸಿದ್ದಾರೆ, ಮೊದಲು ಗುಜರಾತ್‌ ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಿಯಾಗಿ, ದೀರ್ಘ ಪ್ರಯಾಣವು ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಜೀವಂತ ಸ್ಫೂರ್ತಿಯಾಗಿದೆ ಎಂದು ಶಾ ಹೇಳಿದರು.
ಇಂದು ಪ್ರಧಾನಮಂತ್ರಿನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿ ತಮ ಸಾರ್ವಜನಿಕ ಜೀವನದಲ್ಲಿ 23 ವರ್ಷಗಳನ್ನು ಪೂರೈಸಿದ್ದಾರೆ. ಸಾರ್ವಜನಿಕ ಸೇವೆಯ ಈ 23 ವರ್ಷಗಳ ಸುದೀರ್ಘ ಪಯಣವು ಒಬ್ಬ ವ್ಯಕ್ತಿಯು ತನ್ನ ಸಂಪೂರ್ಣ ಜೀವನವನ್ನು ಹೇಗೆ ಮುಡಿಪಾಗಿಡಬಹುದು ಎಂಬ ಅನನ್ಯ ಸಮರ್ಪಣೆಯ ಸಂಕೇತವಾಗಿದೆ. ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನರ ಕಲ್ಯಾಣವೇ ಅವರ ಗುರಿಯಾಗಿದೆ ಎಂದು ಶಾ ಹಿಂದಿಯಲ್ಲಿ ಎಕ್‌್ಸ ಮಾಡಿದ್ದಾರೆ.

ತಮ ರಾಜಕೀಯ ಪಯಣದಲ್ಲಿ ಮೋದಿಯವರ ನಿರಂತರ ಒಡನಾಡಿಯಾಗಿರುವ ಗಹ ಸಚಿವರು, ಮೋದಿಯವರ ಈ ಸುದೀರ್ಘ ಸಾರ್ವಜನಿಕ ಜೀವನಕ್ಕೆ ಸಾಕ್ಷಿಯಾಗಿರುವುದು ಅವರ ಅದಷ್ಟದ ಸಂಗತಿ ಎಂದು ಹೇಳಿಕೊಂಡಿದ್ದಾರೆ. ಬಡವರ ಕಲ್ಯಾಣ, ದೇಶದ ಅಭಿವದ್ಧಿ, ಭದ್ರತೆ ಮತ್ತು ಭಾರತದ ಜಾಗತಿಕ ಗುರುತನ್ನು ಏಕಕಾಲದಲ್ಲಿ ಹೇಗೆ ಬಲಪಡಿಸಬೇಕು ಎಂಬುದನ್ನು ಮೋದಿ ಅವರು ತೋರಿಸಿಕೊಟ್ಟಿದ್ದಾರೆ. ಸಮಸ್ಯೆಗಳನ್ನು ತುಂಡು ತುಂಡಾಗಿ ನೋಡುವ ಬದಲು ಮೋದಿ ಸಮಗ್ರ ಪರಿಹಾರದ ದಷ್ಟಿಕೋನವನ್ನು ದೇಶಕ್ಕೆ ಪ್ರಸ್ತುತಪಡಿಸಿದರು ಎಂದು ಶಾ ಹೇಳಿದರು.

23 ವರ್ಷಗಳ ಕಾಲ ಅವಿರತವಾಗಿ, ದಣಿವಾಗದೆ, ತನ್ನ ಬಗ್ಗೆ ಕಾಳಜಿ ವಹಿಸದೆ ರಾಷ್ಟ್ರ ಮತ್ತು ಜನತೆಯ ಸೇವೆಗೆ ಮುಡಿಪಾಗಿಟ್ಟಿರುವ ರಾಷ್ಟ್ರ ನಿರ್ಮಾತ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದು ಶಾ ಹೇಳಿದ್ದಾರೆ.

RELATED ARTICLES

Latest News