ಅಯೋಧ್ಯೆ (ಉತ್ತರ ಪ್ರದೇಶ),ಡಿ.30- ಹಿಂದೂಗಳ ಆರಾಧ್ಯದೈವ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ ನೀಡುವ ಮೂಲಕ ಲೋಕಸಭಾ ಚುನಾವಣೆಗೆ ಕಹಳೆ ಮೊಳಗಿಸಿದರು.
ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹಿಂದಿ ಹೃದಯ ಭಾಗಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಘಡದಲ್ಲಿ ಬಿಜೆಪಿ ಸ್ಪಷ್ಟ ಜನಾದೇಶ ಪಡೆದು ಅಕಾರ ಹಿಡಿದಿತ್ತು. ಇದೀಗ ದೇಶದ ರಾಜಕಾರಣದ ದಿಕ್ಕುದೆಸೆಯನ್ನು ನಿರ್ಧರಿಸುವ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಮೋದಿಯವರು ಮೆಗಾ ರೋಡ್ ಶೋ ನಡೆಸುವ ಮೂಲಕ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಿದರು.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿ ಬಿನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಮತ್ತಿತರರು ಆತ್ಮೀಯವಾಗಿ ಬರಮಾಡಿಕೊಂಡರು.
ಭಾರತದ ಆಟಗಾರರ ಬರುವಿಕೆಯನ್ನು ಕಾಯುತ್ತದೆಯಂತೆ ಪಾಕ್
ವಿಮಾನ ನಿಲ್ದಾಣದಿಂದ ಸುಮಾರು 15 ಕಿ.ಮೀವರೆಗೂ ಮೋದಿಯವರು ಮೆಗಾ ರೋಡ್ ಶೋ ನಡೆಸಿದರು. ಪ್ರಧಾನಿಯವರನ್ನು ಕಣ್ತುಂಬಿಸಿಕೊಳ್ಳಲು ದೇಗುಲ ನಗರಿ ಅಯೋಧ್ಯೆಗೆ ಬೆಳಗಿನಿಂದಲೇ ಭಾರೀ ಪ್ರಮಾಣದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ರಸ್ತೆಯ ಇಕ್ಕೆಲಗಳಲ್ಲೂ ಬಿಜೆಪಿ ಬಾವುಟ ಮತ್ತು ಕೇಸರಿ ರುಮಾಲು ಧರಿಸಿದ್ದ ಕಾರ್ಯಕರ್ತರು ಮೋದಿ ಮೋದಿ ಎನ್ನುತ್ತಲೇ ಜಯಕಾರದ ಘೋಷಗಳನ್ನು ಮೊಳಗಿಸಿದರು.
15 ಕಿ.ಮೀವರೆಗೂ ಸಾಗಿಬಂದ ಮೆರವಣಿಗೆಯು ಪರೋಕ್ಷವಾಗಿ ಚುನಾವಣಾ ಅಖಾಡಕ್ಕೆ ಸಿದ್ದವಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸುವಂತಿತ್ತು. ಕಾರ್ಯಕರ್ತರು, ಅಭಿಮಾನಿಗಳು ಮೋದಿ ಅವರಿಗೆ ಅಭಿಮಾನದಿಂದ ಹೂಮಳೆ ಸುರಿಸಿದರು. ರೋಡ್ ಶೋ ಮುಗಿದ ನಂತರ ಮೋದಿ ಅವರು 15,000 ಕೋಟಿ ರೂ. ಮೊತ್ತದ ಹಲವು ಮೂಲ ಸೌಕರ್ಯ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.
ಪ್ರಧಾನಿ ಮೋದಿ ಅವರ ಆಗಮನದ ಮೂಲಕ ಅಯೋಧ್ಯಾ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಅಂತಿಮ ಸಿದ್ದತೆಗಳಿಗೆ ಶರವೇಗ ಸಿಕ್ಕಂತಾಗಿದೆ. ಪ್ರಧಾನಿ ಮೋದಿ ಅವರು ನವೀಕರಣಗೊಂಡಿರುವ ಹಾಗೂ ಅಯೋಧ್ಯಾ ಧಾಮ್ ಜಂಕ್ಷನ್ ಎಂದು ಮರು ನಾಮಕರಣಗೊಂಡಿರುವ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಿದರು.
ಇದೇ ವೇಳೆ ಅಮೃತ ಭಾರತ್ ಮತ್ತು ¾ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಅಯೋಧ್ಯೆಯಲ್ಲಿ ನೂತನವಾಗಿ 1450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಯೋಧ್ಯಾ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಈ ವಿಮಾನ ನಿಲ್ದಾಣದ ಟರ್ಮಿನಲ್ 6,500 ಚದರ ಮೀಟರ್ ಇದ್ದು, ಅಯೋಧ್ಯಾ ಶ್ರೀರಾಮ ಮಂದಿರವನ್ನೇ ಹೋಲುವಂತಿದೆ. ಎಲ್‍ಇಡಿ ಲೈಟಿಂಗ್, ಮಳೆ ನೀರು ಕೊಯ್ಲು ಸೇರಿದಂತೆ ಹಲವು ಸೌಲಭ್ಯಗಳಿವೆ.
ಜರ್ಮನ್ ಆರೈಕೆಯಲ್ಲಿರುವ ಅರಿಹಾ ಶಾ ಜತೆ ದೀಪಾವಳಿ ಆಚರಿಸಿದ ಭಾರತೀಯ ಅಧಿಕಾರಿಗಳು
240 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಿಸಿರುವ ಅಯೋಧ್ಯಾ ಧಾಮ ರೈಲು ನಿಲ್ದಾಣ ಉದ್ಘಾಟನೆ. ಈ ರೈಲು ನಿಲ್ದಾಣ 3 ಮಹಡಿಗಳನ್ನು ಹೊಂದಿದ್ದು, ಲಿಫ್ಟ್, ಎಸ್ಕಲೇಟರ್, ಫುಡ್ ಕೋರ್ಟ್ ಸೇರಿದಂತೆ ಹಲವು ಸೌಲಭ್ಯಗಳಿವೆ. ಅಲ್ಲದೇ ಅಯೋಧ್ಯೆಯಲ್ಲಿ ನವೀಕರಣ ಮಾಡಲಾದ 4 ರಸ್ತೆಗಳು, ಮೆಡಿಕಲ್ ಕಾಲೇಜು, ತ್ಯಾಜ್ಯ ಸಂಸ್ಕರಣಾ ಘಟಕಗಳ ಉದ್ಘಾಟನೆಯನ್ನು ನೆರವೇರಿಸಿದರು. 2180 ಕೋಟಿ ರೂ. ವೆಚ್ಚದ ಗ್ರೀನ್ ಫೀಲ್ಡ್ ಟೌನ್ ಶಿಪ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ, 300 ಕೋಟಿ ರೂ. ವೆಚ್ಚದ ವಶಿಷ್ಟ್ಯ ಕುಂಜ ವಸತಿ ಯೋಜನೆಗೂ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದರು.