Saturday, April 5, 2025
Homeರಾಷ್ಟ್ರೀಯ | Nationalದೇಶದ ಕಡಲ ತೀರಗಳ ಅಭಿವೃದ್ಧಿಗೆ ಮೋದಿ ಪಣ

ದೇಶದ ಕಡಲ ತೀರಗಳ ಅಭಿವೃದ್ಧಿಗೆ ಮೋದಿ ಪಣ

PM reaffirms Government’s commitment to strengthen the maritime sector

ನವದೆಹಲಿ, ಏ.5-ದೇಶದ ಕಡಲ ತೀರಗಳು ಹಾಗೂ ಬಂದರುಗಳನ್ನು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ದೇಶದ ಪ್ರಗತಿಗಾಗಿ ಭಾರತದ ಕಡಲ ವಲಯ ಮತ್ತು ಅದರ ಬಂದರುಗಳನ್ನು ಬಲಪಡಿಸುವುದನ್ನು ತಮ್ಮ ಸರ್ಕಾರ ಮುಂದುವರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ವಲಯದ ಮಹತ್ವವನ್ನು ಸ್ಮರಿಸುವ ರಾಷ್ಟ್ರೀಯ ಕಡಲ ದಿನದ ಅಂಗವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪಿಎಂ ಮೋದಿ, ಇಂದು, ರಾಷ್ಟ್ರೀಯ ಕಡಲ ದಿನದಂದು, ನಾವು ಭಾರತದ ಶ್ರೀಮಂತ ಕಡಲ ಇತಿಹಾಸವನ್ನು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಈ ವಲಯವು ವಹಿಸಿದ ಪಾತ್ರವನ್ನು ನೆನಪಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಭಾರತದ ಪ್ರಗತಿಗಾಗಿ ನಾವು ಕಡಲ ವಲಯ ಮತ್ತು ನಮ್ಮ ಬಂದರುಗಳನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

RELATED ARTICLES

Latest News