ನವದೆಹಲಿ,ಡಿ.27- ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗ್ ಮಾತನಾಡಿದ್ದು ಬಹಳ ಕಡಿಮೆಯೇ. ಆದರೆ ಅವರು ಮಾತನಾಡಿದಾಗಲೆಲ್ಲ ದೊಡ್ಡ ಸುದ್ದಿಯಾಗಿತ್ತಲ್ಲದೆ, ಚರ್ಚೆಗೂ ಗ್ರಾಸವಾಗಿತ್ತು.
ಸಂಸತ್‌ನಲ್ಲಿ ಅಂದಿನ ಪ್ರತಿಪಕ್ಷ ನಾಯಕಿ ಸುಷಾ ಸ್ವರಾಜ್ ನೀಡಿದ್ದ ಹೇಳಿಕೆಗೆ ಮನಮೋಹನ್ ಸಿಂಗ್ ಕಾವ್ಯಾತಕವಾಗಿ ಪ್ರತಿಕ್ರಿಯಿಸಿದ್ದರು. ಮನಮೋಹನ್ ಸಿಂಗ್ ಕಾವ್ಯ ಶೈಲಿಯಲ್ಲಿ ನೀಡಿದ ಉತ್ತರದಿಂದ ಇಡೀ ಸಂಸತ್ ನಗೆಗಡಲಲ್ಲಿ ತೇಲಿತು.
ಅಲ್ಲಮ ಇಕ್ಬಾಲ್ ಅವರ ಕವನದ ಸಾಲನ್ನು ಮಹಮೋಹನ್ ಸಿಂಗ್ ಉಲ್ಲೇಖಿಸಿದ್ದರು. ಮಾನ್ ಕೀ ತೇರಿ ದೀದ್ ಕೆ ಕಾಬಿಲ್ ನಹೀಂ ಹೂಂ ಮೈನ್, ತು ಮೇರಾ ಶೌಕ್ ದೇಖ್ ಮಿರಾ ಇಂತಿಜಾರ್ ದೇಖ್ ಎಂದು ಮನಹೋಹನ್ ಸಿಂಗ್ ಹೇಳಿದರೆ ಇಡೀ ಸದನ ನಗೆಗಡಲಲ್ಲಿ ತೇಲಿತ್ತು.