ಬೆಂಗಳೂರು,ಫೆ.16-ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಯು.ಎ.ಪಿ.ಎ ಪ್ರಕರಣವೊಂದರಲ್ಲಿ ತಲೆ ಮರೆಸಿಕೊಂಡಿದ್ದ
ಪಿ.ಎಫ್.ಐ ನ ದಾವಣಗೆರೆ ಜಿಲ್ಲಾ ಕಾರ್ಯದರ್ಶಿಯನ್ನು ಕೆ.ಜಿ.ಹಳ್ಳಿ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ತಾಹೀರ್ ಹುಸೇನ್ ಅಲಿಯಾಸ್ ಆರ್ ಕೆ ಹುಸೇನ್ ಬಂಧಿತ ಆರೋಪಿ. ಸೆ.20, 2022 ರಂದು ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ) ಕಾರ್ಯಕರ್ತರು ದೇಶದಾದ್ಯಂತ ಧರ್ಮ ಧರ್ಮದ ಮಧ್ಯೆ ಕೋಮು ದ್ವೇಷವನ್ನು ಉಂಟು ಮಾಡಲು ಮುಸ್ಲಿಂ ಯುವಕರನ್ನು ರಾಜ್ಯಾದ್ಯಂತ ಸಂಘಟನೆಯನ್ನು ಮಾಡುತ್ತಿದ್ದರು.
ಈ ಸಂಬಂಧ ತರಬೇತಿಯನ್ನು ಸಹ ನೀಡುತ್ತಿದ್ದು, ಮಾರಕಾಸ್ತ್ರಗಳನ್ನು ಹೊಂದಿರಬಹುದಾಂತಹ ಸಾಧ್ಯತೆ ಇರುತ್ತದೆ ಎಂಬ ಖಚಿತ ಮಾಹಿತಿಯ ಮೇರೆಗೆ ಒಟ್ಟು 19 ವ್ಯಕ್ತಿಗಳ ವಿರುದ್ಧ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಯು.ಎ.ಪಿ.ಎ ಪ್ರಕರಣ ದಾಖಲಾಗಿರುತ್ತದೆ. ಸೆ.21, 2022ರಂದು ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು ರಾಜ್ಯಾದ್ಯಂತ ಏಕಾಕಾಲದಲ್ಲಿ ದಾಳಿಯನ್ನು ಕೈಗೊಂಡು 15 ಪಿಎಫ್‍ಐ. ಸಂಘಟನೆಯ ಪ್ರಮುಖ ಪದಾಕಾರಿಗಳನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಪ್ರಕರಣದಲ್ಲಿ ನಾಲ್ವರು ತಲೆಮರೆಸಿಕೊಂಡಿರುತ್ತಾರೆ.
ಪ್ರಕರಣ ದಾಖಲಾದ ನಂತರ ಭಾರತ ಸರ್ಕಾರವು ಪಿಎಫ್‍ಐ. ಸಂಘಟನೆಯನ್ನು ನಿಷೇಧಿತ ಸಂಘಟನೆ ಎಂದು ಆದೇಶ ಮಾಡಿದೆ.
ಒಲಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ
ಪ್ರಕರಣದ ತನಿಖೆಯನ್ನು ಯುಎಪಿಎ ಕಾಯ್ದೆಯ ಪ್ರಕಾರ ಕೈಗೊಂಡು, ಬಂಧಿತರಾಗಿದ್ದ 15 ವ್ಯಕ್ತಿಗಳ ವಿರುದ್ಧ ವಿಶೇಷ ಎನ್‍ಐಎ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಾಲ್ಕು ವ್ಯಕ್ತಿಗಳ ಪೈಕಿ ಒಬ್ಬನ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಕೆ.ಜಿ. ಹಳ್ಳಿ ಉಪ ವಿಭಾಗದ ದಾವಣಗೆರೆಯ ಹರಿಹರದ ಪ್ರಶಾಂತ್ ನಗರದ ಬಳಿ ವಶಕ್ಕೆ ಪಡೆದುಕೊಂಡಿರುತ್ತಾರೆ.
ಈ ಪ್ರಕರಣದಲ್ಲಿ ಹಾಲಿ ತನಿಖಾಧಿಕಾರಿಯಾದ ಕೆ.ಜಿ. ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಠೋಡ್, ಅವರು ಆರೋಪಿಯನ್ನು ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.