Tuesday, July 2, 2024
Homeಜಿಲ್ಲಾ ಸುದ್ದಿಗಳುಮಕ್ಕಳ ಮಾರಾಟ ಜಾಲ ಬೇಧಿಸಿದ ಪೊಲೀಸರು : ವೈದ್ಯ ಅಬ್ದುಲ್‌ ಸೇರಿ 5 ಮಂದಿ ಖಾಕಿ...

ಮಕ್ಕಳ ಮಾರಾಟ ಜಾಲ ಬೇಧಿಸಿದ ಪೊಲೀಸರು : ವೈದ್ಯ ಅಬ್ದುಲ್‌ ಸೇರಿ 5 ಮಂದಿ ಖಾಕಿ ಬಲೆಗೆ

ಬೆಳಗಾವಿ, ಜೂ.10- ಮಕ್ಕಳ ಮಾರಾಟ ಜಾಲವನ್ನು ಬಯಲಿಗೆಳೆದಿರುವ ಮಾಳಮಾರುತಿ ಠಾಣೆ ಪೊಲೀಸರು ಈ ಜಾಲದ ಕಿಂಗ್‌ಪಿನ್‌ ವೈದ್ಯ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.ಕಿತ್ತೂರು ಮೂಲದ ಕಿಂಗ್‌ಪಿನ್‌, ಆರ್‌.ಎಂ.ಪಿ. ವೈದ್ಯ ಡಾ. ಅಬ್ದುಲ್‌ ಗಫಾರ್‌ ಖಾನ್‌, ನೇಗಿನಹಾಳ ಗ್ರಾಮದ ಮಹಾದೇವಿ ಜೈನ್‌, ಚಂದನ್‌ ಸುಭೇದಾರ್‌, ಪವಿತ್ರಾ ಮತ್ತು ಪ್ರವೀಣ ಬಂಧಿತ ಆರೋಪಿಗಳು.

ಮಕ್ಕಳ ಮಾರಾಟ ಜಾಲ ನಗರದಲ್ಲಿ ಸಕ್ರಿಯವಾಗಿರುವ ಮಾಹಿತಿ ಆಧರಿಸಿ ಬೆನ್ನಿತ್ತಿದ್ದ ಪೊಲೀಸರಿಗೆ ಈ ಸಂಘಟಿತ ಜಾಲ ಪತ್ತೆಯಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜಕುಮಾರ ಸಿಂಗಪ್ಪ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವೈದ್ಯ ಅಬ್ದುಲ್‌ ಸೇರಿ ಐದು ಮಂದಿಯ ತಂಡವನ್ನು ಬಂಧಿಸಿದೆ.

ಮೂಲತಃ ಸವದತ್ತಿಯ ವೈದ್ಯ, ಚೆನ್ನಮ ಕಿತ್ತೂರಿನ ಸೋಮವಾರ ಪೇಟೆಯಲ್ಲಿ ನೆಲೆಸಿರುವ ಡಾ.ಅಬ್ದುಲ್‌ ಗಫಾರ್‌ ಖಾನ್‌ನಿಂದ 60 ಸಾವಿರಕ್ಕೆ ಮಗು ಖರೀದಿಸಿ ಬಳಿಕ ಬೆಳಗಾವಿಯಲ್ಲಿ ಸುಮಾರು. 1.40ಲಕ್ಷಕ್ಕೆ ಮಾರುತ್ತಿದ್ದಾಗ ಮಹಿಳೆಯನ್ನು ಬಲೆಗೆ ಬೀಳಿಸಿಕೊಂಡು ನಂತರ ವೈದ್ಯ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಪೊಲೀಸ್‌‍ ಆಯುಕ್ತರಾದ ಡಾ.ಮಾರ್ಟಿನ್‌ ಮಾರ್ಬನ್ಯಾಂಗ್‌, ಡಿಸಿಪಿ ಪಿ. ವಿ. ಸ್ನೇಹಾ ಮಾರ್ಗದರ್ಶನದಲ್ಲಿ ಇನ್‌್ಸಪೆಕ್ಟರ್‌ ಜೆ. ಎಂ. ಕಾಲಿಮಿರ್ಚಿ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಮಕ್ಕಳ ಮಾರಾಟ ಜಾಲದ ತಂಡ 60 ಸಾವಿರದಿಂದ 1.50 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದು ಬಂದಿದೆ.ಪ್ರಕರಣ ಬಯಲಿಗೆ: ಆರೋಪಿ ಮಹದೇವಿ 60 ಸಾವಿರ ಹಣ ಕೊಟ್ಟು ವೈದ್ಯ ಅಬ್ದುಲ್‌ ಗಫಾರ್‌ನಿಂದ 30 ದಿನದ ಹೆಣ್ಣು ಮಗುವನ್ನು ಖರೀದಿಸಿದ್ದು, ಆ ಮಗುವನ್ನು ಬೆಳಗಾವಿಯಲ್ಲಿ 1.40 ಲಕ್ಷಕ್ಕೆ ಮಾರಾಟ ಮಾಡಲು ಉದ್ದೇಶಿಸಿದ್ದ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕರಾದ ರಾಜಕುಮಾರ ಸಿಂಗಪ್ಪ ರಾಠೋಡ ಎಂಬುವವರಿಗೆ ಮಾಹಿತಿ ಲಭಿಸಿದೆ.

ಈ ಬಗ್ಗೆ ಅವರು ಮಾಳಮಾರುತಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಜಾಲದ ಬಗ್ಗೆ ರಹಸ್ಯ ಕಾರ್ಯಾಚರಣೆ ನಡೆಸಿ ಮಹದೇವಿಯನ್ನು ಸಂಪರ್ಕಿಸಿ ಮಗುವನ್ನು ಖರೀದಿಸುವುದಾಗಿ ನಂಬಿಸಿದ್ದಾರೆ.ಮಹದೇವಿ ಮಗುವನ್ನು ಮಾರಾಟ ಮಾಡಲು ಬಂದಾಗ ಆಕೆಯನ್ನು ಬಲೆಗೆ ಬೀಳಿಸಿಕೊಂಡು ಹೆಣ್ಣು ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

ನಂತರ ಮಹದೇವಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ವೈದ್ಯನ ಬಗ್ಗೆ ಬಾಯಿಬಿಟ್ಟಿದ್ದಾರೆ.
ಇನ್‌್ಸಪೆಕ್ಟರ್‌ ಕಾಲಿಮಿರ್ಚಿ ಅವರ ಮಾರ್ಗದರ್ಶನದಲ್ಲಿ ಸಬ್‌ಇನ್‌್ಸ ಪೆಕ್ಟರ್‌ ರಾಮಗೌಡ ಸಂಕನಾಳ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ವೈದ್ಯ ಡಾ.ಅಬ್ದುಲ್‌ ಗಪಾರ್‌ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಮಾಯಕರೇ ಟಾರ್ಗೆಟ್‌: ಮದುವೆಗೂ ಮುನ್ನ ಗರ್ಭಿಣಿಯಾಗುವ ಯುವತಿಯರು ಅಬಾಷನ್‌ಗಾಗಿ ಈ ವೈದ್ಯನ ಬಳಿ ಬಂದಾಗ ಆತ ತಾನೇ ಮಗುವನ್ನು ಸಾಕುವುದಾಗಿ ಹೇಳಿ ಅವರ ಮನವೊಲಿಸಿ ಎಂಟು ತಿಂಗಳು ತುಂಬಿದ ಬಳಿಕ ಬರುವಂತೆ ಹೇಳಿ ಕಳುಹಿಸುತ್ತಿದ್ದನು.
ನಂತರ ಆಪರೇಷನ್‌ ಮಾಡಿ ಮಗುವನ್ನು ತೆಗೆದು ಅವರಿಗೆ 20 ಸಾವಿರ ಹಣ ಕೊಟ್ಟು ಮಗುವನ್ನು ತಾನೇ ಪಡೆದು ಮೂರ್ನಾಲ್ಕು ತಿಂಗಳ ಕಾಲ ಮಗುವನ್ನು ಪೋಷಣೆ ಮಾಡಿ ನಂತರ ಮಕ್ಕಳಿಲ್ಲದವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

RELATED ARTICLES

Latest News