ನವದೆಹಲಿ,ಅ.21-ದೃಢವಾದ ಸಮರ್ಪಣೆ ರಾಷ್ಟ್ರ ಮತ್ತು ಅದರ ಜನರನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸ್ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದ್ದಾರೆ. ಪೊಲೀಸ್ ಸ್ಮರಣಾರ್ಥ ದಿನದಂದು, ನಾವು ನಮ್ಮ ಪೊಲೀಸ್ ಸಿಬ್ಬಂದಿಯ ಧೈರ್ಯವನ್ನು ವಂದಿಸುತ್ತೇವೆ ಮತ್ತು ಕರ್ತವ್ಯದ ಸಾಲಿನಲ್ಲಿ ಅವರು ಮಾಡಿದ ಅತ್ಯುನ್ನತ ತ್ಯಾಗವನ್ನು ಸರಿಸುತ್ತೇವೆ. ಅವರ ದೃಢವಾದ ಸಮರ್ಪಣೆ ನಮ ದೇಶ ಮತ್ತು ಜನರನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಪ್ರಧಾನಿ ಮೋದಿ ಎಕ್ಸನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಅಗತ್ಯದ ಕ್ಷಣಗಳಲ್ಲಿ ಅವರ ಧೈರ್ಯ ಮತ್ತು ಬದ್ಧತೆ ಶ್ಲಾಘನೀಯ. ಪ್ರತಿ ವರ್ಷ ಅ. 21 ರಂದು ಪೊಲೀಸ್ ಸರಣಾರ್ಥ ದಿನವನ್ನು ಆಚರಿಸಲಾಗುತ್ತದೆ. 1959 ರಲ್ಲಿ ಚೀನಾದೊಂದಿಗಿನ ಭಾರತದ ಗಡಿಯನ್ನು ರಕ್ಷಿಸುವ ಸಂದರ್ಭದಲ್ಲಿ ತಮ ಪ್ರಾಣವನ್ನು ಅರ್ಪಿಸಿದ ಹತ್ತು ಪೊಲೀಸರ ತ್ಯಾಗವನ್ನು ಸರಿಸಲು ಈ ದಿನವನ್ನು ದೇಶದ ಎಲ್ಲಾ ಪೊಲೀಸ್ ಪಡೆಗಳಲ್ಲಿ ಹುತಾತರ ದಿನವನ್ನಾಗಿ ಆಚರಿಸಲಾಗುತ್ತದೆ.
ನವದೆಹಲಿ,ಅ.21-ಪೊಲೀಸರು ಮತ್ತು ಭದ್ರತಾ ಪಡೆಗಳ ಅವಿರತ ಪ್ರಯತ್ನದಿಂದಾಗಿ ಭಾರತದಲ್ಲಿ ಎಡಪಂಥೀಯ ಉಗ್ರವಾದ ಹೋರಾಟ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ಪೋಲಿಸ್ ಸಂಸರಣಾ ದಿನಾಚರಣೆಯಲ್ಲಿ ದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸಾರಕದಲ್ಲಿ ಔಪಚಾರಿಕ ಸಿಬ್ಬಂದಿಯಿಂದ ಪುಷ್ಪಾರ್ಚನೆ ಮಾಡಿದರು ಮತ್ತು ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಕ್ಸಲೀಯರ ವಿರುದ್ಧದ ಅಭಿಯಾನದ ಯಶಸ್ಸನ್ನು ನಾವು ಒಂದು ಕಾಲದಲ್ಲಿ ರಾಜ್ಯದ ವಿರುದ್ಧ ಶಸಾಸಗಳನ್ನು ಹಿಡಿದಿದ್ದ ಮಾವೋವಾದಿಗಳು ಇಂದು ಶರಣಾಗುತ್ತಿದ್ದಾರೆ. ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ತಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಭದ್ರತಾ ಪಡೆಗಳ ಅವಿರತ ಪ್ರಯತ್ನದಿಂದಾಗಿ, ಈ ಸಮಸ್ಯೆಯು ಈಗ ಇತಿಹಾಸದ ಅಂಚಿನಲ್ಲಿದೆ. ಇದಕ್ಕಾಗಿ ನಮ ಎಲ್ಲಾ ಭದ್ರತಾ ಸಿಬ್ಬಂದಿಗಳು ಅಭಿನಂದನೆಗೆ ಅರ್ಹರು ಎಂದು ಶ್ಲಾಸಿದರು.
2026ರ ಮಾರ್ಚ್ ವೇಳೆಗೆ ಭಾರತದಲ್ಲಿ ನಕ್ಸಲ್ ಹಾವಳಿ ಅಂತ್ಯವಾಗಲಿದೆ ಎಂದು ಕೇಂದ್ರ ಘೋಷಿಸಿದೆ. ನಮ ಆಂತರಿಕ ಭದ್ರತೆಗೆ ಬಹುಕಾಲದಿಂದ ನಕ್ಸಲಿಸಂ ಸಮಸ್ಯೆಯಾಗಿದೆ, ಛತ್ತೀಸ್ಗಢ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಹಲವು ಜಿಲ್ಲೆಗಳು ನಕ್ಸಲಿಸಂ ಪೀಡಿತವಾಗಿದ್ದ ಕಾಲವೊಂದಿತ್ತು.
ಹಳ್ಳಿಗಳಲ್ಲಿ ಶಾಲೆಗಳು ಮುಚ್ಚಿದ್ದವು, ರಸ್ತೆಗಳಿಲ್ಲ, ಜನ ಭಯದಲ್ಲಿ ಬದುಕುತ್ತಿದ್ದರು.ಈ ಸಮಸ್ಯೆ ಇನ್ನು ಮುಂದೆ ಉಳಿಯಬಾರದು ಎಂದು ನಾವು ನಿರ್ಧರಿಸಿದ್ದೇವೆ. ನಮ ಪೊಲೀಸ್, ಸಿಆರ್‌ಪಿಎ್, ಬಿಎಸ್‌ಎ್ ಮತ್ತು ಸ್ಥಳೀಯ ಆಡಳಿತವು ಸಂಘಟಿತ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡಿದ ರೀತಿ ಶ್ಲಾಘನೀಯ ಎಂದು ಹಾಡಿಹೊಗಳಿದರು.
ಒಂದು ಕಾಲದಲ್ಲಿ ನಕ್ಸಲ್ ಹಬ್ ಆಗಿದ್ದ ಪ್ರದೇಶಗಳು ಈಗ ಶೈಕ್ಷಣಿಕ ಕೇಂದ್ರಗಳಾಗಿ ಬದಲಾಗುತ್ತಿವೆ.ಒಂದು ಕಾಲದಲ್ಲಿ ಕೆಂಪು ಕಾರಿಡಾರ್ ಎಂದು ಕುಖ್ಯಾತವಾಗಿದ್ದ ಭಾರತದ ಭಾಗಗಳು ಈಗ ಬೆಳವಣಿಗೆಯ ಕಾರಿಡಾರ್ ಆಗಿ ಬದಲಾಗಿವೆ. ಅಂತಹ ಬದಲಾವಣೆಗಳನ್ನು ತರಲು ಸರ್ಕಾರಕ್ಕೆ ಸಾಧ್ಯವಾಗಿದೆ ಮತ್ತು ಇದು ಸಂಭವಿಸಲು, ಪೊಲೀಸರು ಮತ್ತು ಭದ್ರತಾ ಪಡೆಗಳು ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿವೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಒದಗಿಸುತ್ತಿರುವ ಪೊಲೀಸ್ ಪಡೆಗಳ ಆಧುನೀಕರಣಕ್ಕಾಗಿ ಸಂಪನೂಲಗಳು ಮತ್ತು ಬಜೆಟ್ ಕುರಿತು ಮಾತನಾಡಿದ ಅವರು, ಈ ಸೀಮಿತ ಸಂಪನೂಲಗಳ ಅತ್ಯುತ್ತಮ ಬಳಕೆಯ ಅಗತ್ಯವನ್ನು ಪ್ರತಿಪಾದಿಸಿದರು.ವಿವಿಧ ಭದ್ರತಾ ಪಡೆಗಳ ನಡುವೆ ಸಮನ್ವಯ ಮತ್ತು ಏಕೀಕರಣದ ಮೂಲಕ ಇದನ್ನು ಸಾಧಿಸಬಹುದು.
ಪ್ರಸ್ತುತ ದಿನಗಳಲ್ಲಿ ಪೊಲೀಸರು ಅಪರಾಧದ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಗ್ರಹಿಕೆಯ ವಿರುದ್ಧ ಸಹ ಹೋರಾಡಬೇಕಾಗಿದೆ ಎಂದು ಅವರು ಕರೆಕೊಟ್ಟರು.
1959 ರಲ್ಲಿ ಲಡಾಖ್ನ ಹಾಟ್ ಸ್ಪ್ರಿಂಗ್ ಪ್ರದೇಶದಲ್ಲಿ ಚೀನಿ ಸೈನಿಕರು ನಡೆಸಿದ ದಾಳಿಯಲ್ಲಿ 10 ಸೆಂಟ್ರಲ್ ರಿಸರ್ವ್ ಪೊಲೀಸ್ ೇರ್ಸ್ ಸಿಬ್ಬಂದಿಯನ್ನು ಕೊಲ್ಲಲಾಗಿತ್ತು. ಅವರ ಸಾರಣಾರ್ಥ ಪ್ರತಿ ವರ್ಷ ಪೊಲೀಸ್ ಸರಣಾರ್ಥ ದಿನವನ್ನು ಆಚರಿಸಲಾಗುತ್ತದೆ.