Friday, April 18, 2025
Homeರಾಜ್ಯಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿ ನಂತರ ಗರ್ಭಪಾತ ಮಾಡಿಸಿದ 'ಪೋಲಿ'ಸ್‌ ಪೇದೆ

ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿ ನಂತರ ಗರ್ಭಪಾತ ಮಾಡಿಸಿದ ‘ಪೋಲಿ’ಸ್‌ ಪೇದೆ

Police constable who got a minor girl pregnant and then had an abortion

ಯಾದಗಿರಿ,ಏ.9- ಪೊಲೀಸ್‌ ಪೇದೆಯೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ ಎರಡು ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆ ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಸಿದ ಘಟನೆ ಗುರುಮಠಕಲ್‌ ತಾಲೂಕಿನ ಸೈದಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧನ ಭೀತಿಯಿಂದ ಆಕೆಯನ್ನು ಮದುವೆಯಾದರೂ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಹಿನ್ನಲೆಯಲ್ಲಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ಸಂಬಂಧ ಆರೋಪಿ ಪೊಲೀಸ್‌ ಕಾನ್ಸ್ ಟೇಬಲ್‌ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಬಾಲಕಿಯು 16 ವರ್ಷದವಳಿ ದ್ದಾಗಲೇ ಪುಸಲಾಯಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ.ಆನಂತರ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಆಗ ಬಾಲಕಿ ಗರ್ಭಿಣಿಯಾಗಿದ್ದುಗರ್ಭಪಾತ ಮಾಡಿಸಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಸೈದಾಪುರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ.

RELATED ARTICLES

Latest News