Wednesday, December 4, 2024
Homeಬೆಂಗಳೂರುಬೆಂಗಳೂರನ್ನು ನಶೆ ಮುಕ್ತ ನಗರವನ್ನಾಗಿಸಲು ಪೊಲೀಸರ ಹದ್ದಿನ ಕಣ್ಣು

ಬೆಂಗಳೂರನ್ನು ನಶೆ ಮುಕ್ತ ನಗರವನ್ನಾಗಿಸಲು ಪೊಲೀಸರ ಹದ್ದಿನ ಕಣ್ಣು

Police keep an eye on making Bengaluru a Drug Free City

ಬೆಂಗಳೂರು,ಡಿ.3- ನಶೆ ಮುಕ್ತ ಬೆಂಗಳೂರು ನಗರವನ್ನಾಗಿಸುವ ನಿಟ್ಟಿನಲ್ಲಿ ನಗರ ಪೊಲೀಸರು ಎರಡು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ ಕಾನೂನು ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡು 35 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ನಗರದಲ್ಲಿ ಮುಂಬರುವ 2025ನೇ ಸಾಲಿನ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಮತ್ತು ಕಾನೂನು ಮತ್ತು ಸುವ್ಯವವಸ್ಥೆಗೆ ದಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವ ಸದುದ್ದೇಶದಿಂದ ಹಾಗೂ ನಶೆಮುಕ್ತ ಬೆಂಗಳೂರು ನಗರವನ್ನಾಗಿಸುವ ನಿಟ್ಟಿನಲ್ಲಿ ನ.29 ಮತ್ತ 30ರಂದು ಪೊಲೀಸರು ವಿಶೇಷ ಕಾರ್ಯಾಚರಣೆ ಹಮಿಕೊಂಡಿದ್ದರು.

ನಗರದ ಎಲ್ಲಾ ವಿಭಾಗಗಳ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಈ ಹಿಂದೆ ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪರಿಶೀಲನೆ ಸೇರಿದಂತೆ, ಪಬ್, ವೈನ್ಸ್ಟೋರ್ರಸ, ಬಾರ್ ರೆಸ್ಟೋರೆಂಟ್ಗಳು, ಸ್ಥಳೀಯ ಡಾಬ, ಹೋಟೆಲ್ ಮತ್ತು ಲಾಡ್‌್ಜಗಳಿಗೆ ಭೇಟಿ ನೀಡಿ, ಅನುಮಾನಾಸ್ಪದ ವ್ಯಕ್ತಿಗಳು, ರೌಡಿಶೀಟರ್ಗಳು ಹಾಗೂ ಹಳೇ ಆರೋಪಿಗಳನ್ನು ಪರಿಶೀಲಿಸುವ ಕ್ರಮ ಕೈಗೊಂಡು, ಕಾನೂನು ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.

380 ಎನ್.ಡಿ.ಪಿ.ಎಸ್ ಪ್ರಕರಣಗಳ ಆರೋಪಿಗಳ ಪರಿಶೀಲನೆ , 1633 ಬಾರ್ ರೆಸ್ಟೋರೆಂಟ್, 1020 ಲಾಡ್‌್ಜಗಳು/ಇತರೆ ಸ್ಥಳಗಳು, 1233 ರೌಡಿಶೀಟರ್ಗಳು, 1,113 ಹಳೇ ಆರೋಪಿಗಳು ಹಾಗೂ ಬಿ.ಎನ್.ಎಸ್ನಡಿ ದಾಖಲಿಸಿದ ಪ್ರಕರಣಗಳ ಸಂಖ್ಯೆ 1, ಐಟಿಪಿ ಆಕ್ಟ್/ವಿದೇಶಿಯರ ಕಾಯ್ದೆಯಡಿ ದಾಖಲಿಸಿದ ಪ್ರಕರಣಗಳ ಸಂಖ್ಯೆ 3, ಕೋಟ್ಪಾ ಆಕ್ಟ್ನಡಿ ದಾಖಲಿಸಿದ ಪ್ರಕರಣಗಳ ಸಂಖ್ಯೆ 29, ಎನ್.ಡಿ.ಪಿ.ಎಸ್ ಆಕ್ಟ್ ನಡಿ ದಾಖಲಿಸಿದ ಪ್ರಕರಣಗಳ ಸಂಖ್ಯೆ 1 ಹಾಗೂ ವಿಶೇಷ ಕಾಯ್ದೆಗಳಡಿ 1 ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯ ಸಂದರ್ಭದಲ್ಲಿ ನಿಷೇಧಿತ ಮಾದಕ ವಸ್ತುಗಳ ಸರಬರಾಜು ಮತ್ತು ಬಳಕೆಯನ್ನು ತಡೆಗಟ್ಟುವ ಸಲುವಾಗಿ ಈ ಹಿಂದೆ ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ 380 ಜನ ಆರೋಪಿಗಳನ್ನು ಪರಿಶೀಲಿಸಲಾಯಿತು.

ಗಾಂಜಾ ಜಪ್ತಿ:
ಈ ಸಂದರ್ಭದಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ 1 ಪ್ರಕರಣವನ್ನು ದಾಖಲಿಸಿ, ಅಂದಾಜು 40,000 ಬೆಲೆ ಬಾಳುವ ಸುಮಾರು 1 ಕೆ.ಜಿ. 100 ಗ್ರಾಂ ತೂಕದ ಗಾಂಜಾವನ್ನು ಅಮಾನತ್ತುಪಡಿಸಿಕೊಂಡು ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ವಿದೇಶಿಗರ ವೀಸಾ ಪರಿಶೀಲನೆ:
ಈ ಕಾರ್ಯಾಚರಣೆ ವೇಳೆ ವೈಶ್ಯಾವಾಟಿಕೆಯಲ್ಲಿ ಸಿಲುಕಿದ್ದ 6 ಮಂದಿ ವಿದೇಶಿ ಮಹಿಳೆಯರನ್ನು ಸಹ ರಕ್ಷಿಸಲಾಗಿರುತ್ತದೆ. ಅಲ್ಲದೇ ವಿದೇಶಿ ಪ್ರಜೆಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ, ಸುಮಾರು 411 ಜನ ವಿದೇಶಿ ವ್ಯಕ್ತಿಗಳ ಮನೆ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ವೀಸಾ ಅವಧಿ ಮೀರಿ ನಗರದಲ್ಲಿ ವಾಸವಾಗಿದ್ದ 29ವಿದೇಶಿಯರನ್ನು ಎಫ್ಆರ್ಆರ್ಓ ಕಛೇರಿಯ ಅಧಿಕಾರಿಗಳ ಮುಂದೆ ಹಾಜರುಪಡಿಸಿ, ಅವರ ದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.

ಶಾಲಾಕಾಲೇಜುಗಳಿಗೆ ಭೇಟಿ:
ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದ ಭಾಗವಾಗಿ ನಗರದ ವ್ಯಾಪ್ತಿಯಲ್ಲಿ 874 ಪೊಲೀಸ್ ಅಧಿಕಾರಿಗಳು 460 ಶಾಲಾ ಕಾಲೇಜುಗಳು ಮತ್ತು 302 ಹಾಸ್ಟೆಲ್ಗಳಿಗೆ ಭೇಟಿ ನೀಡಿ 61,398 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಮಾದಕವಸ್ತುಗಳ ದುಷ್ಪರಿಣಾಮದ ಬಗ್ಗೆ ಸಲಹೆಸೂಚನೆ ನೀಡಲಾಯಿತು. ಅಲ್ಲದೆ ಸೈಬರ್ ಅಪರಾಧ ಮತ್ತು ಕಾನೂನುಗಳು ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕ್ರಮ ಕೈಗೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದ 12 ಜನ ಮಹಿಳೆಯರನ್ನು ವಶಕ್ಕೆ ಪಡೆದುಕೊಂಡು, ಬೇರೆ ಬೇರೆ ವಯೋಮಾನದ 16 ಜನ ಮಕ್ಕಳನ್ನು ಸಂರಕ್ಷಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.

ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ನೀಡಿ:
ಮುಂಬರುವ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಶೆಮುಕ್ತ ಬೆಂಗಳೂರು ನಗರವನ್ನಾಗಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಈ ರೀತಿಯ ವಿಶೇಷ ಕಾರ್ಯಾಚರಣೆಗಳು ಮುಂದುವರೆಯಲಿದ್ದು, ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಹಾಗೂ ನಮ 112ಗೆ ಮಾಹಿತಿ ನೀಡುವಂತೆ ಆಯುಕ್ತರಾದ ದಯಾನಂದ ಅವರು ಮನವಿ ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರ ಪೊಲೀಸರು 6 ಕೋಟಿ ಮೌಲ್ಯದ ಮಾದಕವಸ್ತು ಮತ್ತು 3.25 ಕೋಟಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

Latest News