ಬೆಳಗಾವಿ,ನ.1- ಕರ್ನಾಟಕ ರಾಜ್ಯ ವಿರೋಧಿ ಎಂಇಎಸ್ ನಾಯಕನೊಂದಿಗೆ ಪೊಲೀಸ್ ಅಧಿಕಾರಿ ತನ್ನಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಘಟನೆ ನಗರದಲ್ಲಿ ನಡೆದಿದೆ. ರಾಜ್ಯೋತ್ಸವ ಸಂಭ್ರಮಕ್ಕೆ ವಿರೋಧಿಸಿರುವ ಪುಂಡ ಎಂಇಎಸ್ ಕರಾಳ ಹೆಸರಿನ ರ್ಯಾಲಿಯಲ್ಲಿ ಬಂದೋಬಸ್ತ್‌ಗೆ ನಿಯೋಜಿತಗೊಂಡಿದ್ದ ಪೊಲೀಸ್ ಅಧಿಕಾರಿ ಜೆ.ಎಂ. ಕಾಲಿಮಿರ್ಚಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸಿಪಿಐ ದುರ್ವರ್ತನೆ ಜಿಲ್ಲಾಡಳಿತ ಹಾಗೂ ಪೊಲೀಸ್ ಕಮಿಷ್ನರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಸತತ ರಾಜ್ಯ ಸರಕಾರ ಹಾಗೂ ಕನ್ನಡಿಗರ ವಿರುದ್ಧ ಕತ್ತಿ ಮಸೆಯುವ ಎಂ ಎಂಎಸ್ ಮುಖಂಡ ಶುಭಂ ಸೆಳಕೆ ಜೊತೆಗೆ ಪೊಲೀಸ್ ಅಧಿಕಾರಿಯ ಅತಿ ಸಲುಗೆಯಿಂದ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ.
- Advertisement -
