Monday, July 28, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಬೆನ್ನಲ್ಲೇ ಪೊಲೀಸರ ಕಾರ್ಯಾಚರಣೆ ಚುರುಕು

ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಬೆನ್ನಲ್ಲೇ ಪೊಲೀಸರ ಕಾರ್ಯಾಚರಣೆ ಚುರುಕು

Police operations intensified after discovery of drug factory in Mysore

ಮೈಸೂರು,ಜು.28- ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾದ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿ ನಗರ ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್‌ ನೇತೃತ್ವದಲ್ಲಿ ನಗರ ಪೊಲೀಸರು ನಗರದಾದ್ಯಂತ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸ್‌ ಕಮಿಷನರ್‌ ಸೀಮಾ ಅವರು ಖುದ್ದಾಗಿ ಫೀಲ್ಡ್ ಗೆ ಇಳಿದಿದ್ದು, ಕಳೆದ ರಾತ್ರಿ ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ

ನಡೆಸಿದ ವೇಳೆ 26 ಮಂದಿ ಗಾಂಜಾ ಸೇವಿಸಿದವರು ಪತ್ತೆಯಾಗಿದ್ದಾರೆ. ಇದೇ ವೇಳೆ ಒಬ್ಬ ಮಾರಾಟಗಾರನನ್ನು ವಶಕ್ಕೆ ಪಡೆದಿದ್ದಾರೆ.ಉದಯಗಿರಿ, ಎನ್‌ ಆರ್‌ ಮೊಹಲ್ಲಾ, ನಜರ್‌ ಬಾದ್‌, ಕೆ ಆರ್‌ ಮೊಹಲ್ಲಾ,ಮಂಡಿ ಮೊಹಲ್ಲಾ ಸೇರಿದಂತೆ ನಗರದ ಹಲವು ಕಡೆ ಏಕಕಾಲಕ್ಕೆ ಡಿಸಿಪಿಗಳು, ಎಸಿಪಿಗಳು, ಇನ್‌್ಸಪೆಕ್ಟರ್‌, ಸಬ್‌ ಇನ್‌್ಸಪೆಕ್ಟರ್‌ ತಂಡಗಳು ಕಾರ್ಯಾಚರಣೆ ನಡೆಸಿವೆ.

ಈ ತಂಡಗಳು ಏಕಕಾಲಕ್ಕೆ ನಗರದ 59 ಗೋದಾಮುಗಳು, ಹಾಸ್ಟೆಲ್‌ಗಳು ಸೇರಿ ಹಲವು ಕಡೆ ತಪಾಸಣೆ ಮಾಡಿವೆ. ಈ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ 35 ಜನರ ವಿಚಾರಣೆ ನಡೆಸಿದ್ದಾರೆ.

ಅಮಾನತು:ಡ್ರಗ್ಸ್ ಘಟಕ ಪತ್ತೆಯಾದ ನಡುವೆಯೇ ಎನ್‌.ಆರ್‌.ಪೊಲೀಸ್‌ ಠಾಣೆಯ ಇನ್‌್ಸಪೆಕ್ಟರ್‌ ಲಕ್ಷ್ಮಿಕಾಂತ್‌ ತಳವಾರ್‌ ಅವರನ್ನು ನಗರ ಪೊಲೀಸ್‌ ಆಯುಕ್ತರ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ.ಸ್ಥಳಕ್ಕೆ ಸಿಸಿಬಿಯಲ್ಲಿದ್ದ ಪೊಲೀಸ್‌ ನಿರೀಕ್ಷಕರಾದ ಶಬ್ಬೀರ್‌ ಹುಸೇನ್‌ ರವರನ್ನು ಪ್ರಭಾರ ಆಗಿ ನೇಮಕ ಮಾಡಲಾಗಿದೆ.

RELATED ARTICLES

Latest News