Saturday, April 19, 2025
Homeಜಿಲ್ಲಾ ಸುದ್ದಿಗಳು | District Newsಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಬಸ್ ಚಾಲಕ-ನಿರ್ವಾಹಕರನ್ನು ಪ್ರಶಂಸಿಸಿದ ಪೊಲೀಸರು

ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಬಸ್ ಚಾಲಕ-ನಿರ್ವಾಹಕರನ್ನು ಪ್ರಶಂಸಿಸಿದ ಪೊಲೀಸರು

Police praise KSRTC bus drivers and operators for their honesty

ಚನ್ನಪಟ್ಟಣ,ಏ.18- ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಳ್ಳನೊಬ್ಬ ಎಸೆದು ಹೋಗಿದ್ದ ಲಕ್ಷಂತರ ರೂ. ಮೌಲ್ಯದ ಚಿನ್ನದ ಸರವನ್ನು ನಗರ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷರ ಕಚೇರಿಗೆ ತಂದೊಪ್ಪಿಸಿ ಮಾನವಿಯತೆ ಮೆರೆದ ಚಾಲಕ ಹಾಗೂ ನಿರ್ವಾಹಕರನ್ನು ನಗರವೃತ್ತ ನಿರೀಕ್ಷಕರು ಪ್ರಶಂಸಿಸಿ ಅಭಿನಂದನೆ ಸಲ್ಲಿಸಿದ ಘಟನೆ ನಡೆಯಿತು.

ಬಸ್‌ನಲ್ಲಿ ಎಸೆದು ಹೋಗಿದ್ದ ಚಿನ್ನದ ಸರವನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿದ ಚಾಲಕ ಶೇಖರ್ ಹಾಗೂ ನಿರ್ವಾಹಕ ಶಿವಪ್ಪ ವಾಲಿಕರ್‌ಎಂದು ಹೇಳಲಾಗಿದ್ದು, ಸುಮಾರು 20ಗ್ರಾಂ ಅಂದರೆ ಮಾರುಕಟ್ಟೆ ಮೌಲ್ಯ ಒಂದು ಲಕ್ಷಕ್ಕೂ ಹೆಚ್ಚು ಮೊತ್ತವೆಂದು ಹೇಳಲಾಗಿದೆ.

ಬೆಂಗಳೂರಿನ ಯಲಹಂಕ ನಿವಾಸಿ ಗಣೇಶ್ ಎಂಬುವರು ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿಯ ಕಬ್ಬಾಳು ಕ್ಷೇತ್ರಕ್ಕೆ ತೆರಳಿ ಮತ್ತೆ ಬೆಂಗಳೂರಿಗೆ ಹೋಗಲು ಚನ್ನಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬರುವಾಗ ಇವರ ಜೊತೆ ಕುಳಿತ್ತಿದ್ದ ಕಳ್ಳನೊಬ್ಬ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿ, ಅಲ್ಲೇ ಕುಳಿತ್ತಿದ್ದ ಎನ್ನಲಾಗಿದೆ.

ಚಿನ್ನದ ಸರ ಇಲ್ಲದಿರುವುದನ್ನು ಗಮನಿಸಿದ ವ್ಯಕ್ತಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಅನುಮಾನಿಸಿದ್ದಾರೆ. ಬಸ್‌ನಲ್ಲಿಯೇ ಇದ್ದ ಚಾಲಕ, ನಿರ್ವಾಹಕರು ಅಪರಿಚಿತನನ್ನು ವಿಚಾರಣೆ ಮಾಡಿದಾಗ, ತರಾತುರಿಯನ್ನು ಬಸ್‌ನಲ್ಲಿ ಇಳಿದು ಪರಾರಿಯಾಗಿದ್ದಾನೆ.ಚಾಲಕ ನಿರ್ವಾಹಕರುಗಳು ಬಸ್‌ನಲ್ಲಿ ಏನಾದರೂ ಎಸೆದು ಹೋಗಿರಬಹುದೇ ಎಂದು ತಪಾಸಣೆ ನಡೆಸಿದಾಗ ಚಿನ್ನದ ಸರ ಬಸ್‌ನಲ್ಲಿಯೇ ಸಿಕ್ಕಿದೆ.

ಪ್ರಸಕ್ತ ದಿನಗಳಲ್ಲಿ ನೂರುರೂಪಾಯಿ ಸಿಕ್ಕಿದರೂ ಸದ್ದಿಲ್ಲದೆ ಜೇಬಿಗಿರಿಸಿಕೊಳ್ಳುವ ಕಾಲದಲ್ಲಿ ಸುಮಾರು 20 ಗ್ರಾಂ ಚಿನ್ನದ ಸರವನ್ನು ನಗರ ವೃತ್ತ ನಿರೀಕ್ಷಕ ರವಿಕಿರಣ್‌ ರವರಿಗೆ ನೀಡಿ ಚಿನ್ನದ ಸರ ಕಳೆದು ಕೊಂಡಿದ್ದ ಬೆಂಗಳೂರಿನ ಯಲಹಂಕದ ಗಣೇಶ್ ಎಂಬುವರನ್ನು ಠಾಣೆಗೆ ಬರಮಾಡಿಕೊಂಡು ಚಿನ್ನದ ಸರವನ್ನು ಅವರಿಗೆ ಹಿಂದಿರುಗಿಸಿರುವ ಚಾಲಕ ನಿರ್ವಾಹರುಗಳು ಎಲ್ಲರಿಗೂ ಮಾದರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಚಿನ್ನದ ಸರವನ್ನು ಕಳೆದುಕೊಂಡಿದ್ದ ಗಣೇಶ್‌ ರವರನ್ನು ಮಾಹಿತಿ ನೀಡಿ ಠಾಣೆಗೆ ಕರೆತರುವುದರಿಂದ ಹಿಡಿದು, ಚಾಲಕ ನಿರ್ವಾಹಕರುಗಳ ಬಗ್ಗೆ ಸಿ.ಪಿ.ಐಗೆ ಸಂಪೂರ್ಣ ಮಾಹಿತಿ ನೀಡಿದ ನಗರ ಪೊಲೀಸ್‌ ಠಾಣೆಯ ಪಿ.ಎಸ್.ಐ.ಉಷಾನಂದಿನಿ ಹಾಗೂ ಚಾಲಕ ವರದರಾಜುರವರನ್ನು ಸಿಪಿಐ ರವಿಕಿರಣ್ ಶ್ಲಾಘಿಸಿದರು.

RELATED ARTICLES

Latest News