ಬೆಂಗಳೂರು,ಫೆ.8- ಉತ್ತರ ವಿಭಾಗದ ಪೊಲೀಸರು ಸುಮಾರು 400 ರೌಡಿಗಳ ಹಾಗೂ ಹಳೆ ಆರೋಪಿಗಳ ಮನೆ ಮೇಲೆ ದಾಳಿ ಮಾಡಿ 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವದವರೆಗೂ ಡಿಸಿಪಿ ಸೈದುಲು ಅಡವಾತ್ ಅವರ ನೇತೃತ್ವದಲ್ಲಿ ಉತ್ತರ ವಿಭಾಗದ ಎಸಿಪಿಗಳು, ಇನ್ಸ್ ಪೆಕ್ಟರ್, ಸಬ್ ಇನ್‌್ಸಪೆಕ್ಟರಗಳು ಹಾಗೂ ಸಿಬ್ಬಂದಿಗಳು ಈ ದಾಳಿ ನಡೆಸಿದ್ದಾರೆ.
ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ 15 ಮಂದಿಯನ್ನು ಇದೇ ವೇಳೆ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.ದಾಳಿ ಸಂದರ್ಭದಲ್ಲಿ ಕೆಲವು ರೌಡಿಗಳ ಮನೆಗಳಲ್ಲಿ ಮಾರಾಕಾಸ್ತ್ರಗಳು ಸಿಕ್ಕಿವೆೆ. ನಂತರ ಪೊಲೀಸರು ರೌಡಿಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಮಾಡುತ್ತಿರುವ ಉದ್ಯೋಗ, ಮೊಬೈಲ್ ನಂಬರ್ಗಳನ್ನು ನಮೂದಿಸಿಕೊಂಡು ಬಾಲ ಬಿಚ್ಚದಂತೆ ರೌಡಿಗಳಿಗೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.