ಬೆಂಗಳೂರು,ಡಿ.4– ಹಾಲಿನ ಬೂತ್ವೊಂದರ ಬಳಿ ಇಳಿಸಲಾಗಿದ್ದ ಕ್ರೇಟ್ಗಳಿಂದ ಹಾಲು ಕಳವು ಮಾಡಿಕೊಂಡು ಪರಾರಿಯಾಗಿರುವ ಮೂವರು ಆರೋಪಿಗಳಿಗಾಗಿ ಸುಬ್ರಹಣ್ಯಪುರ
ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕನಕಪುರ ರಸ್ತೆ, ಕಲ್ಲಸಂದ್ರದಲ್ಲಿ ದಿಲೀಪ್ ಎಂಬುವರಿಗೆ ಸೇರಿದ ಹಾಲಿನ ಬೂತ್ ಇದ್ದು, ಎಂದಿನಂತೆ ಬೆಳಗಿನ ಜಾವ ಹಾಲಿನ ವ್ಯಾನ್ನಿಂದ ಹಾಲಿನ ಕ್ರೇಟ್ಗಳನ್ನು ಇಳಿಸಲಾಗಿತ್ತು.
ಕೆಲವೇ ಕ್ಷಣಗಳಲ್ಲಿ ಒಂದೇ ಬೈಕ್ನಲ್ಲಿ ಬಂದ ಕಳ್ಳರು ಹಾಲಿನ ಕ್ರೇಟ್ಗಳಲ್ಲಿದ್ದ ಹಾಲನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಸುಬ್ರಹಣ್ಯಪುರ ಠಾಣೆ ಪೊಲೀಸರು ಕಲ್ಲಸಂದ್ರ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿ ಆಡೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ.