ಬೆಂಗಳೂರು,ಅ.14-ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಅಮೆರಿಕಾದ ಪ್ರಜೆಗಳಿಗೆ ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಹೆಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಪ್ರಮುಖ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ನಗರದಲ್ಲಿ ಕುಳಿತು ಸೈಬರ್ ವಂಚಕರು ಅಮೆರಿಕಾ ಪ್ರಜೆಗಳಿಗೆ ವಂಚಿಸುತ್ತಿದ್ದವರನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸೈಬರ್ ವಂಚನೆಗಾಗಿ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಸೈಬಿಸ್ಟ್ ಸಲ್ಯೂಷನ್ಸ್ ಪ್ರೈ.ಲಿ. ಹೆಸರಿನ ನಕಲಿ ಬಿಪಿಓ ಕಂಪನಿಯೊಂದನ್ನು ತೆರೆದು ಎರಡು ಮಹಡಿಗಳಲ್ಲಿ ಹೊರ ರಾಜ್ಯದ ಸುಮಾರು 26 ಯುವಕರು ಮತ್ತು ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಂಡು ಅವರಿಗೆ ತರಬೇತಿ ನೀಡಿ ಆನ್ ಲೈನ್ ಮೂಲಕ ಅಮೆರಿಕಾ ಪ್ರಜೆಗಳ ಮಾಹಿತಿ ಸಂಗ್ರಹಿಸುವಂತೆ ತಿಳಿಸಿ ಅವರುಗಳನ್ನು ಪೋನ್ ಮುಖೇನ ಸಂಪರ್ಕಿಸಿ, ಸೈಬರ್ ಅಪರಾಧ ವೆಸಗಿರುವುದು ಗೊತ್ತಾಗಿದೆ.
ಈ ನೌಕರರ ಪೈಕಿ 14 ಮಂದಿ ಯಾವುದೇ ಅಪರಾಧದಲ್ಲಿ ತೊಡಗಿಸಿಕೊಳ್ಳದ ಕಾರಣ ಅವರನ್ನು ವಿಚಾರಣೆ ನಡೆಸಿ ಕಳುಹಿಸಲಾಗಿದೆ. ಉಳಿದ 16 ಮಂದಿಯನ್ನು ಬಂಧಿಸಿ ದ್ದಾರೆ. ಇವರಿಂದ ಒಟ್ಟು 25 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.
ವಂಚಕರು ತನಿಖಾ ಸಂಸ್ಥೆ ಅಥವಾ ಪೊಲೀಸ್ ಏಜೆನ್ಸಿ ರವರೆಂದು ಹೇಳಿಕೊಂಡು, ಅಮಾಯಕರಿಗೆ ಹೆದರಿಸಿ ಸಹಾಯ ಮಾಡುವ ನೆಪದಲ್ಲಿ ಅಮೆರಿಕಾ ಪ್ರಜೆಗಳಿಗೆ ಮಾದಕ ವಸ್ತುಗಳ ಬಗ್ಗೆ ಅಪರಾಧ ಮಾಡಿರುವುದಾಗಿ ಹೆದರಿಸುವುದಲ್ಲದೇ, ಮನಿಲ್ಯಾಂಡರಿಂಗ್‌ನಲ್ಲಿ ವಂಚನೆ ಮಾಡಿರುವುದಾಗಿ ಹೇಳಿ ಸಹಾಯ ಮಾಡುವ ನೆಪದಲ್ಲಿ ಲಾಭ ಪಡೆದು, ಸೈಬರ್ ಅಪರಾಧಗಳನ್ನು ಎಸಗಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ದಾಳಿ ಸಮಯದಲ್ಲಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ, ಅವರುಗಳು ವರ್ಕ್ ಇಂಡಿಯಾ, ಲಿಂಕ್ಡಿನ್ ಮಾದರಿಯ ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಬ್ ಆರಿಂಗ್ ಮತ್ತು ವೆಬ್ ಸೈಟ್ ನಲ್ಲಿ ಕೆಲಸ ಕೊಡಿಸುವ ಸಲುವಾಗಿ ಮಾಹಿತಿಯನ್ನು ಅಪಲೋಡ್ ಮಾಡಿದ್ದರು ಎಂದು ಹೇಳಿದ್ದಾರೆ.
ಕಂಪನಿಯ ಮ್ಯಾನೇಜರ್, ಉಸ್ತುವಾರಿಗಳು ನಗರದಲ್ಲಿರುವ ಯು.ಎಸ್.ಎ, ಕೆನಡಾ ಮತ್ತು ಇತರೆ ದೇಶಗಳಿಗೆ ಆನ್ ಲೈನ್ ಮಾಹಿತಿ ಸೇವೆ ಒದಗಿಸುವ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮತ್ತು ವಸತಿ ಸೌಲಭ್ಯ ಒದಗಿಸುವ ಆಮಿಷವೊಡ್ಡಿ ಬೇರೆ ಬೇರೆ ರಾಜ್ಯಗಳಿಂದ ನಗರಕ್ಕೆ ಕರೆಯಿಸಿಕೊಂಡು, ಹೆಚ್‌ಎಸ್‌ಆರ್ ಲೇಔಟ್ ಮತ್ತು ಬಿ.ಟಿ.ಎಂ. ಲೇಔಟ್‌ನಲ್ಲಿ ವಾಸಿಸಲು ಮನೆಗಳನ್ನು ಮತ್ತು ಕ್ಯಾಬ್‌ಗಳ ಸೇವೆ ಮತ್ತು ಊಟದ ವ್ಯವಸ್ಥೆಯನ್ನು ಸಹ ಮಾಡಿರುವುದಾಗಿ ತಿಳಿಸಿದ್ದಾರೆ.
ಪೊಲೀಸರು ಕಂಪ್ಯೂಟರ್‌ಗಳನ್ನು ಪರಿಶೀಲಿಸಿದಾಗ ಇಂಟರ್‌ನೆಟ್ ಮೂಲಕ ಕರೆಗಳನ್ನು ಮಾಡಿ ಯುಎಸ್‌ಎ ನಾಗರಿಕರಿಗೆ ಮಾದಕ ವಸ್ತುಗಳ ಕಾಯ್ದೆ ಅಪರಾಧ ಮಾಡಿರುವ ಬಗ್ಗೆ ಮತ್ತು ಮನಿಲ್ಯಾಂಡರಿಂಗ್ ವಂಚನೆ ಮಾಡಿರುವ ಹಾಗೂ ಇತರೆ ಕಾರಣಗಳನ್ನು ಹೇಳಿ ಹೆದರಿಸಿ ವಂಚನೆ ಮಾಡುತ್ತಿರುವುದು ತನಿಖೆಯಿಂದ ತಿಳಿದಿರುತ್ತದೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಾತಿಮಾ ಮಾರ್ಗದರ್ಶನದಲ್ಲಿ, ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಗೋವರ್ದನ್ ಗೋಪಾಲ್ ರವರ ನೇತೃತ್ವದಲ್ಲಿ, ಇನ್‌್ಸ ಪೆಕ್ಟರ್ ಹರೀಶ್ ಮತ್ತು ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಈಶ್ವರಿ ಹಾಗೂ ಹೆಚ್‌ಎಸ್‌ಆರ್ ಮತ್ತು ಸಿಇಎನ್ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂಧಿಗಳ ತಂಡಗಳು ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.