Monday, July 28, 2025
Homeರಾಜ್ಯಕಾಂಗ್ರೆಸ್‌‍ ಮುಖಂಡನ ಹತ್ಯೆ ಆರೋಪಿಗೆ ಪೊಲೀಸರ ಗುಂಡೇಟು

ಕಾಂಗ್ರೆಸ್‌‍ ಮುಖಂಡನ ಹತ್ಯೆ ಆರೋಪಿಗೆ ಪೊಲೀಸರ ಗುಂಡೇಟು

Police shoot Congress leader's murder suspect

ಕನಕಪುರ,ಜು,28– ಸಾತನೂರಿನ ಡಾಬಾದಲ್ಲಿ ನಡೆದಿದ್ದ ಕಾಂಗ್ರೆಸ್‌‍ ಮುಖಂಡ ನಂದೀಶನ ಕೊಲೆ ಆರೋಪಿಗಳನ್ನು ಬಂಧಿಸಲು ಇನ್‌ಸ್ಪೆಕ್ಟರ್‌ಗಳು ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿದ ವೇಳೆ ಹಾರಿಸಿದ ಗುಂಡು ಆರೋಪಿ ಶ್ರೀನಿವಾಸನಿಗೆ ತಗುಲಿ ಸಿಕ್ಕಿ ಬಿದ್ದಿದ್ದಾನೆ.

ಹಾರೋಹಳ್ಳಿ ಸಮೀಪದ ಗಬ್ಬಾಡಿಯ ಪೈಪ್‌ಲೈನ್‌ ಬಳಿ ಆರೋಪಿ ಶ್ರೀನಿವಾಸ ಅಲಿಯಾಸ್‌‍ ಸೀನ (25) ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್ಸ್ ಪೆಕ್ಟರ್‌ಗಳಾದ ಅನಂತರಾಮು ಮತ್ತು ವಿಕಾಸ್‌‍ ಅವರ ನೇತೃತ್ವದಲ್ಲಿ ಸಿಬ್ಬಂದಿ ತಂಡ ಇಂದು ಮುಂಜಾನೆ 5 ಗಂಟೆ ಸಂದರ್ಭದಲ್ಲಿ ಸ್ಥಳಕ್ಕೆ ಹೋಗಿದೆ.

ಆ ಸಂದರ್ಭದಲ್ಲಿ ಪೊಲೀಸರನ್ನು ಕಂಡು ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಆತರಕ್ಷಣೆಗಾಗಿ ಇನ್ಸ್ ಪೆಕ್ಟರ್‌ ಹಾರಿಸಿದ ಗುಂಡು ಆರೋಪಿ ಸೀನನ ಕಾಲಿಗೆ ತಗುಲಿದಾಗ ಆತ ಕುಸಿದು ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಹಲ್ಲೆ:ಈ ನಡುವೆ ಕಾಂಗ್ರೆಸ್‌‍ ಮುಖಂಡ ನಂದೀಶ್‌ ಅವರ ಅಂತ್ಯಸಂಸ್ಕಾರದ ವೇಳೆ ಅಂತಿಮ ನಮನ ಸಲ್ಲಿಸಲು ಬಂದ ಗ್ರಾಮ ಪಂಚಾಯತಿ ಸದಸ್ಯ ಬಿಜೆಪಿ ಬೆಂಬಲಿತ ಕುಮಾರಸ್ವಾಮಿ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ.ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಿ ಈಗ ಮುಂದಿನ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

RELATED ARTICLES

Latest News