Sunday, June 30, 2024
Homeರಾಜ್ಯತಡರಾತ್ರಿ ದರ್ಶನ್‌ನನ್ನು ಮನೆಗೆ ಕರೆದೊಯ್ದು ಪರಿಶೀಲನೆ ನಡೆಸಿದ ಪೊಲೀಸರು

ತಡರಾತ್ರಿ ದರ್ಶನ್‌ನನ್ನು ಮನೆಗೆ ಕರೆದೊಯ್ದು ಪರಿಶೀಲನೆ ನಡೆಸಿದ ಪೊಲೀಸರು

ಬೆಂಗಳೂರು,ಜೂ.15- ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್‌ನನ್ನು ತಡರಾತ್ರಿ ಆರ್‌ಆರ್‌ನಗರದಲ್ಲಿರುವ ಆತನ ಮನೆಗೆ ಕರೆದೊಯ್ದ ಸುಮಾರು 45 ನಿಮಿಷಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್‌‍ ಜೀಪಿನ್‌ ಹಿಂಬದಿ ಸೀಟಿನಲ್ಲಿ ದರ್ಶನ್‌ನನ್ನು ಕೂರಿಸಿಕೊಂಡು ಪೊಲೀಸರು ಆತನ ಮನೆಗೆ ಕರೆದೊಯ್ದಿದ್ದಾನೆ.

ಕಳೆದ ಶನಿವಾರ ರಾತ್ರಿ ಪಟ್ಟಣಗೆರೆ ಶೆಡ್‌ನಿಂದ ಮನೆಗೆ ಬಂದು ಬಿಚ್ಚಿದ ಬಟ್ಟೆ, ಬಳಸಿದ ವಸ್ತುಗಳು, ಸ್ನಾನಕ್ಕೆ ಬಳಸಿದ್ದ ಟವಲ್‌, ಸೋಪು, ಬಕೆಟ್‌ನ್ನು ವಶಕ್ಕೆ ಪಡೆದಿದ್ದಾರೆ.ಈ ಪ್ರಕರಣದಲ್ಲಿ ಒಂದು ಸಣ್ಣ ಸಾಕ್ಷಿಯೂ ಪೊಲೀಸರಿಗೆ ಪ್ರಬಲ ಅಸ್ತ್ರ. ಒಂದು ವೇಳೆ ಆರೋಪಿಗಳು ವಿಚಾರಣೆ ವೇಳೆ ಹೇಳಿದ ಹೇಳಿಕೆಗಳು ಎಲ್ಲಾದರೂ ಉಲ್ಲಾ ಆಗಬಹುದೆಂಬ ಹಿನ್ನಲೆಯಲ್ಲಿ ಸಣ್ಣ ಸಣ್ಣ ಸಾಕ್ಷ್ಯಗಳನ್ನು ಸಹ ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಹೊಸ ವಿಚಾರಗಳು ಬೆಳಕಿಗೆ :
ಈ ಪ್ರಕರಣದಲ್ಲಿ ಒಟ್ಟು 16 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರತಿಯೊಬ್ಬರ ಹೇಳಿಕೆಯಲ್ಲಿಯೂ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಮುಂದಿನ ದಿನಗಳಲ್ಲಿ ಆರೋಪಿಗಳು ಉಲ್ಟಾ ಹೊಡೆಯಬಾರದೆಂಬ ಹಿನ್ನೆಲಯಲ್ಲಿ ಪ್ರತಿ ಹೇಳಿಕೆಗಳನ್ನು ಸಹ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಹೇಳಿರುವ ಮಾಹಿತಿಗಳು ನಟ ದರ್ಶನ್‌ಗೆ ಭವಿಷ್ಯದಲ್ಲಿ ಕಂಟಕವಾಗುವ ಸಾಧ್ಯತೆ ಇದೆ.

RELATED ARTICLES

Latest News