Friday, January 23, 2026
Homeರಾಜಕೀಯಜೈಲಲ್ಲಿ ತಟ್ಟೆ, ಲೋಟ, ನೋಡಿದ ರೆಡ್ಡಿಗೆ ರಾಜಕೀಯ ಚಮಚಾಗಿರಿ ಬಿಟ್ಟು ಬೇರೇನೂ ಗೊತ್ತಿಲ್ಲ : ಹರಿಪ್ರಸಾದ್‌...

ಜೈಲಲ್ಲಿ ತಟ್ಟೆ, ಲೋಟ, ನೋಡಿದ ರೆಡ್ಡಿಗೆ ರಾಜಕೀಯ ಚಮಚಾಗಿರಿ ಬಿಟ್ಟು ಬೇರೇನೂ ಗೊತ್ತಿಲ್ಲ : ಹರಿಪ್ರಸಾದ್‌ ತಿರುಗೇಟು

Hariprasad hits back at Janardhana Reddy

ಬೆಂಗಳೂರು,ಜ.23- ಜೈಲಲ್ಲಿ ತಟ್ಟೆ, ಲೋಟ, ಚಮಚಾಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಶಾಸಕ ಜನಾರ್ದನ ರೆಡ್ಡಿ ಅವರಿಗೆ ರಾಜಕೀಯ ಜೀವನದಲ್ಲಿ ಚಮಚಾಗಿರಿ ಹೊರತುಪಡಿಸಿ ಬೇರೆ ಲೋಕದ ಪರಿಜ್ಞಾನವೇ ಇಲ್ಲ ಎಂದು ಕಾಂಗ್ರೆಸ್‌‍ನ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಲೇವಡಿ ಮಾಡಿದ್ದಾರೆ.

ತಲೆ ಮೇಲೆ ಕೈ ಇರಿಸಿಕೊಂಡಿದ್ದು ಸಾಲದೆಂಬಂತೆ ಕೇಂದ್ರದ ಮಾಜಿ ಸಚಿವೆ ಸುಷಾ ಸ್ವರಾಜ್‌ ಅವರ ಪಾದ ಪೂಜೆ ಮಾಡಿ ನೀರು ಕುಡಿದು ರಾಜಕೀಯ ಲಾಭ ಗಿಟ್ಟಿಸಿಕೊಂಡ ರೆಡ್ಡಿಗೆ ಪಾದ ಪೂಜೆಯ ನೀರು ನೆತ್ತಿಗೇರಿರಬೇಕು. ಅದಕ್ಕೆ ಅಮಿತ್‌ ಶಾ ತಲೆ ಮೇಲೆ ಕುಟ್ಟಿ ಬಿಜೆಪಿಗೂ ಈ ಜೈಲುವಾಸಿ ರೆಡ್ಡಿಗೂ ಸಂಬಂಧ ಇಲ್ಲ ಅಂತಾ ಬಹಿರಂಗವಾಗಿ ಹೇಳಿದ್ದನ್ನು ಮರೆತಂತಿದೆ ಎಂದು ತಿರುಗೇಟು ನೀಡಿದ್ದಾರೆ.

ಒಮೆ ಜೀವದ ಗೆಳೆಯ ಅನ್ನೋದು, ಇನ್ನೊಮೆ ಶ್ರೀರಾಮುಲು ವಿರುದ್ದವೇ ಮಸಲತ್ತು ಮಾಡುವ ಜನಾರ್ದನ ರೆಡ್ಡಿಯ ಊಸರವಳ್ಳಿ ಆಟ ರಾಜ್ಯದ ಜನ ಮರೆತಿಲ್ಲ. ಸಹೋದರರನ್ನೇ ರಾಜಕೀಯವಾಗಿ ಮುಗಿಸಲು ಹೊರಟ ಜನಾದರ್ನ ರೆಡ್ಡಿಯ ಮೂರು ಕಾಸಿಗೂ ಕಿಮತ್ತಿಲ್ಲದ ತಂತ್ರಗಾರಿಕೆ ಬಗ್ಗೆ ಶ್ರೀರಾಮುಲು ಆಡಿರುವ ಒಂದೊಂದು ಆಣಿಮುತ್ತುಗಳೇ ಸಾಕು. ಸಾಧ್ಯವಾದರೆ ಎಣಿಸಿಕೊಳ್ಳಲಿ ಎಂದಿದ್ದಾರೆ.

ರೆಡ್ಡಿಗಾರು ನಾನು ವಾರ್ಡ್‌ ಚುನಾವಣೆ ಗೆದ್ದಿಲ್ಲ ನಿಜ. ಆದರೆ ಹಿಂಬಾಗಿಲೋ ಮುಂಬಾಗಿಲೋ ನಾನಂತೂ ರಾಜಾರೋಷವಾಗಿ ಬಂದಿದ್ದೇನೆ. ಚುನಾವಣೆಯ ಎರಡು ದಿನದ ಹಿಂದಿನ ಕತ್ತಲೆ ರಾತ್ರಿಯ ರಹಸ್ಯವಾಗಿಯಂತೂ ಬಂದಿಲ್ಲ, ಬರುವುದೂ ಇಲ್ಲ. ಆದರೆ 224 ವಿಧಾನಸಭಾ ಕ್ಷೇತ್ರದಲ್ಲಿ ಜಾತಿ, ಹಣ, ಇಲ್ಲದೆ ಚುನಾವಣೆ ಎದುರಿಸುವುದಕ್ಕೆ ರೆಡಿ. ಧೈರ್ಯ, ತಾಕತ್ತು ಇದ್ದರೆ ಪ್ರಾಮಾಣಿಕವಾಗಿ ಚುನಾವಣೆ ನಡೆಸುವ ಕಿಂಚಿತ್ತಾದರೂ ಎದೆಗಾರಿಕೆ ಇದ್ದರೆ ಮುಂದೆ ಬರಲಿ ಎಂದು ಸವಾಲು ಹಾಕಿದ್ದಾರೆ.

ನಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ನ್ಯಾಷನಲ್‌ ಹೆರಾಲ್‌್ಡ ಪತ್ರಿಕೆ ವಿರುದ್ಧ ಸುಳ್ಳು ಕೇಸ್‌‍ ಹಾಕಿರೋದಕ್ಕೆ ಹೈಕೋರ್ಟ್‌ ಛೀಮಾರಿ ಹಾಕಿರುವುದು ಸಾಕಾಗಿಲ್ಲವೇ?. ನ್ಯಾಯಾಧೀಶರನ್ನೇ ಹತ್ತು ಕೋಟಿ ಡೀಲ್‌ ಮಾಡಿ ಬೇಲ್‌ ತೆಗೆದುಕೊಂಡ ಹಾಗೇ ಅಂದುಕೊಂಡ್ರಾ ? ನಮ ನಾಯಕರು ಸುಳ್ಳು ಕೇಸ್‌‍ ಹಾಕಿಸಿಕೊಂಡು ಓಡಾಡುತ್ತಿರಬಹುದು. ಆದರೆ ಕೊಲೆ ಕೇಸ್‌‍ಗಳಲ್ಲಿ ಸುಪ್ರೀಂಕೋರ್ಟ್‌ನಿಂದ ಗಡೀಪಾರಂತೂ ಆಗಿಲ್ಲ ಎಂದು ಹೇಳಿದ್ದಾರೆ.

ಅವರಿವರ ಕೈ ಕಾಲು ಹಿಡಿದು ಬಿಜೆಪಿ ಸೇರಿ ನೆಲೆ ಇಲ್ಲದೆ ಬಿಲ ಹುಡುಕಾಡುವ ದಯನೀಯ ಸ್ಥಿತಿ ಜನಾರ್ದನ ರೆಡ್ಡಿಗೆ ಬಂದಿದೆ. ಆದರೂ, ಶೇಷ-ಅವಶೇಷಗಳ ಬಗ್ಗೆ ಮಾತಾಡೋದು ಹಾಸ್ಯಾಸ್ಪದ. ಇನ್ನೂ ಈಗಾಗಲೇ ಜೈಲು, ಡೀಲು, ಬೇಲುಗಳ ಬಗ್ಗೆ ಮಾತ್ರ ಮಾತಾಡಿದ್ದೆ, ಆದರೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡೋದಕ್ಕೆ ನಾನಂತೂ ರೆಡಿ ಎಂದು ಪಂಥಾಹ್ವಾನ ನೀಡಿದ್ದಾರೆ.

RELATED ARTICLES

Latest News