ಬೆಂಗಳೂರು, ಜ.10- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವಿನ ಆರೋಪ-ಪ್ರತ್ಯಾರೋಪಗಳು ಶಿಷ್ಟಚಾರದ ಮಿತಿ ದಾಟಿದ್ದು, ಇಬ್ಬರು ನಾಯಕರ ಪರ ವಕಾಲತ್ತು ವಹಿಸುವ ಆ ಪಕ್ಷಗಳ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಪರೀತ ಎನ್ನುವ ಮಟ್ಟಕ್ಕೆ ನಿಂದನೆಗಳಾಗುತ್ತಿರುವುದು ಕಂಡು ಬಂದಿದೆ.
ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಟೀಕೆಗೆ ಉತ್ತರಿಸುವ ಭರದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲೂ ಸಭ್ಯತೆಯ ಹಂತ ದಾಟಿದ ಪ್ರತ್ಯಾರೋಪಗಳು ಪೋಸ್ಟ್ ಆಗಿವೆ.
ಕಾಂಗ್ರೆಸ್ ಸಾಮಾಜಿಕ ಜಾಲತಾಣ ತನ್ನ ಖಾತೆಯಲ್ಲಿ, ಅಟಕಟಾ.. ! ನಿಮದು ಸೆಕ್ಯೂರ್ಡ್ ಬ್ಲೂ ಬಾಯ್ಸ್ ಪಾರ್ಟಿ ಅನ್ನೋದು ಮರೆತು ಹೋಯ್ತೆ..?! ಅದೂ ಇಷ್ಟು ಬೇಗ..? ಶಾಂತಂ ಪಾಪಂ..!! ಎಂದು ಲೇವಡಿ ಮಾಡಿದೆ.
ನಿಮಲ್ಲಿ ಬ್ಲೂ ಫಿಲಂ ನಿರ್ಮಾಪಕರು, ನಿರ್ದೇಶಕರು, ಎಲ್ಲಕ್ಕಿಂತ ಮಿಗಿಲಾಗಿ ಪಾತ್ರಧಾರಿಗಳು ತುಂಬಿ ತುಳುಕುತಿದ್ದಾರೆ. ನಿಮ ಹುಡುಗ ನಿರ್ಮಿಸಿ, ನಟಿಸಿದ ಹಾಸನ್ ಬ್ಲೂ ಚಿತ್ರ ಹೆಚ್ಚು ಖ್ಯಾತಿ ಪಡೆದಿರಲಿಲ್ಲವೇ ? ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ ವರೆಗೂ ಹಾರಾಡಿಸಿದೆ. ಅವರು ಈಗಲೂ ಜೈಲಲ್ಲಿ ನೀಲ ಮೇಘ ಶ್ಯಾಮ.. ಹಾಡುತ್ತಿದ್ದಾರೆ.
ನಿಮ ಇನ್ನೊಬ್ಬ ಲಿಂಬಿಯಾ ಬನದ ನಾಯಕರು ನಿಂಬೆ ಹಣ್ಣಿನಂತ… ಹಾಡು ಹೇಳಲು ಹೋಗಿ ಜೈಲಲ್ಲಿ ಮುದ್ದೆ ಮುರಿದು ಬಂದಿದ್ದಾರೆ. ಇನ್ನೊಬ್ಬ ರಾಧಾ ಮಾಧವ ಮನೋ ವಿಲಾಸ.. ನಾಯಕರು ಜಸ್ಟ್ ಎಸ್ಕೇಪ್ ಆಗಿದ್ದಾರೆ ಎಂದು ತಿರುಗೇಟು ನೀಡಿದೆ.
ನಿಮ್ಮ ನಾಯಕರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿ ಸಿನಿಮಾ ತೆಗೆದು ಜಗತ್ತಿಗೆ ತೋರಿಸಿರುವಾಗ ಬೇರೆಯವರಿಗೆ ಟೆಂಟಲ್ಲಿ ತೋರಿಸುವ ಅವಕಾಶವೆಲ್ಲಿದೇ?! ನಿಜಕ್ಕೂ ನಿಮ ಸಿನಿಮಾ ಚೆನ್ನಾಗಿದೆ. ಅದರ ಮೇಲೆ ಮತ್ತೊಂದು ಕತೆ ಕಟ್ಟಲು ಹೋಗಬೇಡಿ. ಸುಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದೆ.
