Sunday, December 7, 2025
Homeರಾಷ್ಟ್ರೀಯವಾರದಲ್ಲಿ 2 ಡಿಕೆಶಿ ಭೇಟಿಯಾದ ಸಚಿವ ಪ್ರಿಯಾಂಕ ಖರ್ಗೆ, ಹೆಚ್ಚಿದ ಕುತೂಹಲ

ವಾರದಲ್ಲಿ 2 ಡಿಕೆಶಿ ಭೇಟಿಯಾದ ಸಚಿವ ಪ್ರಿಯಾಂಕ ಖರ್ಗೆ, ಹೆಚ್ಚಿದ ಕುತೂಹಲ

Minister Priyanka Kharge meets 2 DKs in a week

ಬೆಂಗಳೂರು ಡಿ.7- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಹೈಕಮಾಂಡ್‌ ಪ್ರತಿನಿಧಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಅವರು ವಾರದಲ್ಲಿ ಎರಡು ಭೇಟಿ ಮಾಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಅಧಿಕಾರ ಹಂಚಿಕೆಯ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ತೆರೆಮರೆಯ ಮುಸುಕಿನ ಗುದ್ದಾಟ ಜೀವಂತವಾಗಿದೆ. ಆದರೆ ಪಕ್ಷದ ಹಿತದೃಷ್ಟಿಯಿಂದಾಗಿ ಇಬ್ಬರು ನಾಯಕರು ಮೇಲ್ನೋಟಕ್ಕೆ ಸೌಹಾರ್ದತೆಯಿಂದ ಇರುವಂತೆ ವರ್ತಿಸುತ್ತಿದ್ದಾರೆ.

ಪ್ರತಿ ಹಂತದಲ್ಲೂ ರಾಜ್ಯ ರಾಜಕೀಯದ ಮೇಲೆ ಕಾಂಗ್ರೆಸ್‌‍ ಹೈಕಮಾಂಡ್‌ ತೀವ್ರ ನಿಗಾ ಇಟ್ಟಿದೆ. ಇಬ್ಬರು ನಾಯಕರ ನಡುವೆ ಹೊಂದಾಣಿಕೆ ಮುಂದುವರಿಯಬೇಕೆಂಬ ಇರಾದೆಯಿಂದ ನಾನಾ ರೀತಿಯ ರಾಜೀಸಂಧಾನ ಸೂತ್ರಗಳನ್ನು ರೂಪಿಸುತ್ತಿದೆ. ಅದನ್ನು ಕಾಲಕಾಲಕ್ಕೆ ಪ್ರಿಯಾಂಕಾ ಖರ್ಗೆ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರಿಗೆ ರವಾನೆ ಮಾಡುವ ಪ್ರಯತ್ನ ಮಾಡುತ್ತಿದೆ.

ಉಪಹಾರಕೂಟದ ಮೂಲಕ ಇಬ್ಬರು ನಾಯಕರ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಆದರೆ ಡಿ.ಕೆ.ಶಿವಕುಮಾರ್‌ ಅವರು ತಮಗೆ ಇದೇ ಅವಧಿಯಲ್ಲೇ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿ ಪೂರ್ಣಗೊಳಿಸಿಯೇ, ಗೊಳಿಸುತ್ತೇನೆ ಎಂದು ಹಠ ಹಿಡಿದಿದ್ದಾರೆ. ಅದಕ್ಕಾಗಿ ಹೈಕಮಾಂಡ್‌ ಇಬ್ಬರ ನಡುವೆ ನಾನಾ ರೀತಿಯ ರಾಜೀಸಂಧಾನ ಸೂತ್ರ ನಡೆಯುತ್ತಿದೆ.

ಮುಂದಿನ ವಿಧಾನಸಭೆ ಚುನಾವಣೆಯನ್ನು ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿಯೇ ನಡೆಸುವ ಮತ್ತು ಸರ್ಕಾರ ಪುನರ್‌ ಸ್ಥಾಪನೆಯಾದ ಮುಖ್ಯಮಂತ್ರಿಯನ್ನಾಗಿ ಮಾಡುವ ಭರವಸೆ ನೀಡಲಾಗಿದೆ. ಆದರೆ ಡಿ.ಕೆ.ಶಿವಕುಮಾರ್‌, ಮುಂದಿನ ಅವಧಿಯಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನು ನಾನೇ ವಹಿಸಿಕೊಳ್ಳುತ್ತೇನೆ. ಆದರೆ 2023 ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ್ದಕ್ಕೆ ಕೂಲಿ ಕೊಡಿ ಎಂದು ಹಠ ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವೊಲಿಸುವ ಪ್ರಯತ್ನಗಳು ಯಶಸ್ವಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಂಡರೂ ತಾವು ಅದಕ್ಕೆ ಬದ್ಧ. ತಾವು ಅಧಿಕಾರದಲ್ಲಿ ಮುಂದುವರಿಯಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಹೈಕಮಾಂಡ್‌ ನಾಯಕರೇ ನಿರ್ದೇಶನ ನೀಡಲಿ. ನಾನಾಗಿಯೇ ಯಾವ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹಠ ಹಿಡಿದಿರುವುದಾಗಿ ಹೇಳಲಾಗುತ್ತಿದೆ.

ಹೈಕಮಾಂಡ್‌ ಇಬ್ಬರು ನಾಯಕರ ಅಭಿಪ್ರಾಯಗಳನ್ನು ಸಮೀಕರಿಸಿ, ಸುಲಲಿತವಾದ ಆಡಳಿತವನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿದೆ. ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ರಾಜ್ಯ ವಿದ್ಯಮಾನಗಳು ನಿರ್ವಹಣೆ ಮಾಡುತ್ತಿದ್ದಾರೆ.
ಇಡೀ ಪ್ರಹಸನದಲ್ಲಿ ರಾಜ್ಯ ಕಾಂಗ್ರೆಸ್‌‍ ಉಸ್ತುವಾರಿ ನಾಯಕ ರಣದೀಪ್‌ ಸಿಂಗ್‌ ಸುರ್ಜೆವಾಲ ನೇಪಥ್ಯದಲ್ಲಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

RELATED ARTICLES

Latest News