Wednesday, January 7, 2026
Homeರಾಜಕೀಯಸಾಧನೆ ಇಲ್ಲದ ದಾಖಲೆ : ಸಿಎಂ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ

ಸಾಧನೆ ಇಲ್ಲದ ದಾಖಲೆ : ಸಿಎಂ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ

Record without achievement: BJP slams CM Siddaramaiah

ಬೆಂಗಳೂರು,ಜ.6- ರಾಜ್ಯದಲ್ಲಿ ಅತಿ ದೀರ್ಘಾವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ವ್ಯಂಗ್ಯಭರಿತವಾಗಿ,ಜನ ವಿರೋಧಿ ಸಿಎಂ ಎಂದು ಕಾಲೆಳೆದಿದೆ.

ದಾಖಲೆ ಸಿದ್ದರಾಮಯ್ಯನವರದ್ದು. ಸಂಕಷ್ಟ ಕನ್ನಡಿಗರದ್ದು. ಏಳು ವರ್ಷ, 240 ದಿನಗಳಲ್ಲಿ ರಾಜ್ಯ ದಿವಾಳಿ ಮಾಡಿದ ಸಿಎಂಗೆ ಅಭಿನಂದನೆಗಳು ಎಂದು ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದೆ.

ದಾಖಲೆ ಬರೆದ ಅಭಿನವ ಅರಸುಗೆ ಅಭಿನಂದನೆಗಳು… ನಿಮ ದಾಖಲೆ ಆಡಳಿತದ ವೈಫಲ್ಯದ ಸಾಧನೆಗಳನ್ನು ಬಿಡುವು ಸಿಕ್ಕಾಗ ಒಮೆ ಕಣ್ಣಾಡಿಸಿ ಸಿದ್ದರಾಮಯ್ಯನವರೇ ಎಂದು ಕುಹುಕವಾಡಿದೆ. 7 ವರ್ಷ 240 ದಿನಗಳ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಾಲದ ಹೊರೆ ಅಧಿಕವಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಕರುನಾಡು ಗೂಂಡಾ ರಾಜ್ಯವಾಗಿದೆ. ಶಾಲೆಗಳು ಪಾಳು ಬಿದ್ದಿದೆ. ಜಲಾಶಯಗಳು ಹೂಳು ತುಂಬಿವೆ, ನೇಮಕಾತಿ ನಡೆಯದಾಗಿದೆ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ರೈತರ ಆತಹತ್ಯೆಲೆಕ್ಕಕ್ಕೆ ಸಿಗದಾಗಿದೆ ಎಂದು ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ. ಓಲೈಕೆ ರಾಜಕಾರಣ ಮಿತಿಮೀರಿದೆ. ಇವಿಷ್ಟೇ ಅಲ್ಲ ಪಟ್ಟಿ ಮುಂದುವರಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಸಿದ್ದರಾಮಯ್ಯನವರೇ, ತಾವು ದಾಖಲೆಯ ಪುಸ್ತಕದಲ್ಲಿ ಬರೆದಿರುವುದು ಕೇವಲ ದಿನಗಳ ಸಂಖ್ಯೆಯನ್ನೇ ಹೊರತು, ಸಾಧನೆಯ ಅಕ್ಷರಗಳನ್ನಲ್ಲ! ತಮ ತುಘಲಕ್‌ ಆಡಳಿತದ ದುಸ್ಥಿತಿಯ ದಿನಗಳನ್ನು ಕನ್ನಡಿಗರು ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದೆ.

RELATED ARTICLES

Latest News