ಅಹಮದಾಬಾದ್, ಮೇ 7: ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶ್ಲಾಘಿಸಿದ್ದಾರೆ.ಭಯೋತ್ಪಾದನೆ ವಿರುದ್ಧ ಭಾರತದ ಗೆಲುವು ಭಾರತ್ ಮಾತಾ ಕಿ ಜೈ ಎಂದು ಅವರು Xನಲ್ಲಿ ಬರೆದುಕೊಂಡಿದ್ದಾರೆ.
26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಿದ ದಾಳಿಯನ್ನು ಗುಜರಾತ್‌ನ ಇತರ ನಾಯಕರು ಜೈ ಹಿಂದ್ ಮತ್ತು ಭಾರತ್ ಮಾತಾ ಕಿ ಜೈ ಎಂಬ ಸಂದೇಶಗಳೊಂದಿಗೆ ಶ್ಲಾಘಿಸಿದ್ದಾರೆ.
140 ಕೋಟಿ ಭಾರತೀಯರ ಬಯಕೆ! ಜೈ ಹಿಂದ್ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್.ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ, ಜೈ ಹಿಂದ್! ಜೈ ಹಿಂದ್ ಕಿಸಾನ್ ಎಂದು ಅವರು ಎಕ್‌್ಸ ನಲ್ಲಿ ಧರ್ಮೋ ರಕ್ಷತಿ ರಕ್ಷಿತಾ (ಧರ್ಮವನ್ನು (ನೀತಿ) ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ) ಎಂಬ ಸಂಸ್ಕೃತ ಶ್ಲೋಕವನ್ನು ಸಹ ಪೋಸ್ಟ್ ಮಾಡಿದ್ದಾರೆ.
ಗುಜರಾತ್ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್ ಅವರು ಆಪರೇಷನ್ ಸಿಂಧೂರ್ ಅನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸಬೇಕು: ಓವೈಸಿ
ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ರಕ್ಷಣಾ ಪಡೆಗಳ ಆಪರೇಷನ್ ಸಿಂಧೂರ್ ಸ್ವಾಗತಿಸಿದ ಪಾಕಿಸ್ತಾನಕ್ಕೆ ಕಠಿಣ ಪಾಠ ಕಲಿಸಬೇಕು. ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಜೈ ಹಿಂದ್! ಎಂದು ಜಾಲತಾಣದಲ್ಲಿ ಹೇಳಿದ್ದಾರೆ
ಭಾರತದ ದಾಳಿಗೆ ಆರ್‌ಜೆಡಿ ಸಾಥ್
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸುತ್ತಿರುವ ದಾಳಿಗೆ ಬಿಹಾರದ ರಾಜಕೀಯ ನಾಯಕರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.1.40 ಕೋಟಿ ಭಾರತೀಯರು ಸೇನೆ ಮತ್ತು ಸರ್ಕಾರದೊಂದಿಗೆ ನಿಂತಿದ್ದೇವೆ ಎಂದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ಶಾಸಕ ತೇಜಸ್ವಿ ಯಾದವ್ ಹೇಳಿದ್ದಾರೆ.
ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ಎಕ್‌್ಸ ನಲ್ಲಿ ಪೋಸ್ಟ್ ಮಾಡಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ದಿನವೇ, ಪಾಕಿಸ್ತಾನದ ಭಯೋತ್ಪಾದಕರನ್ನು ಇನ್ನು ಮುಂದೆ ಬಿಡುವುದಿಲ್ಲ ಎಂದು ನಿರ್ಧರಿಸಲಾಯಿತು ಎಂದು ಬರೆದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಇಂದು ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದವು, ಇದರಲ್ಲಿ ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ ಬಹವಾಲ್ಪುರ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ನೆಲೆ ಸೇರಿವೆ.
26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯ ಎರಡು ವಾರಗಳ ನಂತರ ಆಪರೇಷನ್ ಸಿಂಧೂರ್ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಗುತ್ತಿದೆ.
ಸರಿಯಾಗಿ ಪಟ್ಟು ನೀಡಿದೆ :
ಹೈದರಾಬಾದ್, ಮೇ.7-ಭಾರತೀಯ ಪಡೆಗಳು ಈ ಭಾರಿ ಶತ್ರುಗಳಿಗೆ ಸರಿಯಾಗಿ ಹೊಡೆದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಉಲ್ಲೇಖಿಸಿ, ನಿಖರ, ನಿರ್ದಯ ಮತ್ತು ಕ್ಷಮಿಸದೆ ಭಾರತ ದಾಳಿ ಮಾಡಿದೆ.ನಮ ಪಡೆಗಳು ಬಯೋತ್ಪಾದಕರು ನೋಡಿಕೊಳ್ಳವಂತೆ ದಾಳಿ ಮಾಡುತ್ತವೆ.
ನಮ ಧೈರ್ಯಶಾಲಿಗಳ ಬಗ್ಗೆ ಹೆಮ್ಮೆ! ಮೇರಾ ಭಾರತ್ ಮಹಾನ್ ಎಂದಿದ್ದಾರೆ.
ಕೇಂದ್ರ ಸಚಿವೆ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಪೋಸ್ಟ್‌ನಲ್ಲಿ ಭಾರತ್ ಮಾತಾ ಕಿ ಜೈ! ಹರ್ ಹರ್ ಮಹಾದೇವ್ ಜೈ ಹಿಂದ್ ಎಂದು ಹೇಳಿದ್ದಾರೆ.
ಬಿಆರ್‌ಎಸ್ ನಾಯಕಿ ಕೆ ಕವಿತಾ ತಮ್ಮ ಪೋಸ್ಟ್‌ನಲ್ಲಿ ಭಾರತ್ ಮಾತಾ ಕಿ ಜೈ. ಜೈ ಹಿಂದ್ ಎಂದು ಹೇಳಿದ್ದಾರೆ.