Monday, June 24, 2024
Homeರಾಜಕೀಯರಾಜ್ಯಸರ್ಕಾರ ಜನಸಾಮಾನ್ಯರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದೆ : ಪ್ರಲ್ಹಾದ್‌ ಜೋಶಿ

ರಾಜ್ಯಸರ್ಕಾರ ಜನಸಾಮಾನ್ಯರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದೆ : ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ, ಜೂ.16- ಪೆಟೋಲ್‌ ಹಾಗೂ ಡಿಸೇಲ್‌ ಬೆಲೆ ಏರಿಕೆ ಮಾಡಿ ರಾಜ್ಯಸರ್ಕಾರ ಜನಸಾಮಾನ್ಯರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಘೋಷಣೆ ಮಾಡಿ ಈಗ ಆರ್ಥಿಕ ಹೊರೆ ತಡೆಯಲು ಪೆಟೋಲ್‌, ಡಿಸೇಲ್‌ ಬೆಲೆ ಏರಿಕೆ ಮಾಡಿದೆ.

ದಿನನಿತ್ಯಡ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ, ಗ್ಯಾರೆಂಟಿಯಿಂದ ಉಚಿತ ಕೊಡುತ್ತೇವೆ ಎಂದು ದರ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಹೊರೆಯಾಗಿದೆ ಎಂದು ಹೇಳಿದರು.ಜಾಗತಿಕ ಯುದ್ಧ, ತೀವ್ರ ಬರಗಾಲದಿಂದ ಜನ ಸಂಕಷ್ಟ ಎದರುಸುತಿದ್ದಾರೆ. ಅನೇಕ ಕಡೆ ಬೆಳೆಗಳು ಸರಿಯಾಗಿ ಬಂದಿಲ್ಲ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬೆಲೆ ನಿಯಂತ್ರಣಕ್ಕೆ ಮುಂದಾಯಿತು. ಸರಿಯಾದ ರೀತಿಯಲ್ಲಿ ಪೂರೈಕೆ ಇರದ ಕಾರಣ ಆಹಾರ ಧಾನ್ಯ ಸಿಗಲಿಲ್ಲ , ಈಗಲೂ ಸಿಗುತ್ತಿಲ್ಲ. ಅದು ನೈಸರ್ಗಿಕವಾಗಿ ಆಗಿದ್ದು. ಆದರೆ ಪೆಟೋಲ್‌, ಡೀಸೆಲ್‌ ಬೆಲೆ ಜಾಸ್ತಿ ಮಾಡುತ್ತಿರುವುದು ಮಾನವ ನಿರ್ಮಿತ ಎಂದರು.

ತೈಲ ಬೆಲೆ ಏರಿಕೆಯಿಂದ ಬಸ್‌‍ ದರ, ಹಾಲಿನ ದರ, ಅಕ್ಕಿ ಎಲ್ಲಾ ದರಗಳೂ ಹೆಚ್ಚಾಗುತ್ತವೆ. ಸರ್ಕಾರದ ಬಡ ವಿರೋಧ ನೀತಿ ಅನುಸರಿಸುತ್ತಿದೆ. ಗ್ಯಾರಂಟಿ, ಗ್ಯಾರಂಟಿ ಎಂದರೂ ಜನ ತಿರಸ್ಕಾರ ಮಾಡಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ಈಗ ದ್ವೇಷ ಸಾಧಿಸಲು ಮುಂದಾಗಿರುವ ಸರ್ಕಾರ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹಗೆ ತೀರಿಸಿಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು.

ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಿದ್ದಾರೆ. ರಾಜ್ಯ ಸರ್ಕಾರದ ಹಿಂದೆ ಬೆಲೆ ಏರಿಕೆ ವಿರುದ್ಧ ಶವ ಯಾತ್ರೆ ಮಾಡಿದ್ದರು. ನಾವು ಕಾಂಗ್ರೆಸ್‌‍ ಸರಕಾರದ ವಿರುದ್ಧ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

RELATED ARTICLES

Latest News