ಬೆಂಗಳೂರು, ಏ.26– ವ್ಯಾಟಿಕನ್ ಸಿಟಿಯ ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ನಿಧನದ ಗೌರವಾರ್ಥ ರಾಜ್ಯಾದ್ಯಂತ ಇಂದು ಶೋಕಾಚರಣೆಯನ್ನು ರಾಜ್ಯಸರ್ಕಾರ ಘೋಷಿಸಿದೆ.
ಏಪ್ರಿಲ್ 21 ರಂದು ಪೋಪ್ ಫ್ರಾನ್ಸಿಸ್ ನಿಧನ ಹೊಂದಿದ್ದು ಇಂದು ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಶೋಕವನ್ನು ಆಚರಿಸಲು ಆದೇಶಿಸಿದೆ.
ಶೋಕಾಚರಣೆಯ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳನ್ನು ಸರ್ಕಾರ ನಿಷೇಧಿಸಿದ್ದು, ನಿಯತವಾಗಿ ಹಾರಿಸಲ್ಪಡುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.